|
|
1. {ಯೋಬನ ಉತ್ತರ} PS ಬಳಿಕ ಯೋಬನು ಉತ್ತರಕೊಟ್ಟನು:
|
1. But Job H347 answered H6030 and said H559 ,
|
2. “ನಾನು ಹೇಳುವುದನ್ನು ಕೇಳಿ. ನಿಮ್ಮಿಂದ ನನಗಾಗಬೇಕಾದ ಆದರಣೆ ಇಷ್ಟೇ.
|
2. Hear diligently H8085 H8085 my speech H4405 , and let this H2063 be H1961 your consolations H8575 .
|
3. ನಾನು ಮಾತಾಡುವಾಗ ತಾಳ್ಮೆಯಿಂದಿರಿ. ನಾನು ಮಾತಾಡಿದ ಮೇಲೆ ನೀವು ನನ್ನನ್ನು ಗೇಲಿ ಮಾಡಿದರೂ ಮಾಡಿರಿ.
|
3. Suffer H5375 me that I H595 may speak H1696 ; and after that H310 I have spoken H1696 , mock on H3932 .
|
4. “ನಾನು ಮನುಷ್ಯನ ವಿರೋಧವಾಗಿ ದೂರು ಹೇಳುತ್ತಿಲ್ಲ. ನನ್ನಲ್ಲಿ ತಾಳ್ಮೆಯಿಲ್ಲದಿರುವುದಕ್ಕೆ ಒಂದು ಒಳ್ಳೆಯ ಕಾರಣವಿದೆ.
|
4. As for me H595 , is my complaint H7879 to man H120 ? and if H518 it were so , why H4069 should not H3808 my spirit H7307 be troubled H7114 ?
|
5. ನನ್ನನ್ನು ನೋಡಿ ಬೆರಗಾಗಿ ನಿಮ್ಮ ಬಾಯಿಯ ಮೇಲೆ ಕೈಯಿಟ್ಟುಕೊಳ್ಳಿರಿ, ಗಾಬರಿಯಿಂದ ನನ್ನನ್ನೇ ದೃಷ್ಟಿಸಿ ನೋಡಿರಿ!
|
5. Mark H6437 H413 me , and be astonished H8074 , and lay H7760 your hand H3027 upon H5921 your mouth H6310 .
|
6. ನನಗೆ ಸಂಭವಿಸಿದ ಬಗ್ಗೆ ನಾನು ಯೋಚಿಸುವಾಗ ನನಗೆ ಭಯವಾಗುತ್ತದೆ; ನನ್ನ ದೇಹವು ನಡುಗುತ್ತದೆ.
|
6. Even when H518 I remember H2142 I am afraid H926 , and trembling H6427 taketh hold H270 on my flesh H1320 .
|
7. ದುಷ್ಟರು ದೀರ್ಘಕಾಲ ಜೀವಿಸುವುದೇಕೆ? ಅವರು ವೃದ್ಧರಾಗುವವರೆಗೂ ಅಭಿವೃದ್ಧಿಯಾಗುತ್ತಾ ಬಾಳುವುದೇಕೆ?
|
7. Wherefore H4069 do the wicked H7563 live H2421 , become old H6275 , yea H1571 , are mighty H1396 in power H2428 ?
|
8. ದುಷ್ಟರ ಮಕ್ಕಳು ತಮ್ಮ ತಂದೆತಾಯಿಗಳೊಂದಿಗಿದ್ದು ಬೆಳೆಯುವರು; ದುಷ್ಟರು ತಮ್ಮ ಮೊಮ್ಮಕ್ಕಳನ್ನೂ ನೋಡುವರು.
|
8. Their seed H2233 is established H3559 in their sight H6440 with H5973 them , and their offspring H6631 before their eyes H5869 .
|
9. ಅವರ ಕುಟುಂಬಗಳು ಸುರಕ್ಷಿತವಾಗಿರುವುದರಿಂದ ಅವರಿಗೆ ಭಯವಿಲ್ಲ. ದೇವರು ದುಷ್ಟರನ್ನು ತನ್ನ ದೊಣ್ಣೆಯಿಂದ ದಂಡಿಸುವುದಿಲ್ಲ.
|
9. Their houses H1004 are safe H7965 from fear H4480 H6343 , neither H3808 is the rod H7626 of God H433 upon H5921 them.
|
10. ಅವರ ಹೋರಿಗಳು ತಪ್ಪದೆ ಸಂಗಮಿಸುತ್ತವೆ. ಅವರ ಹಸುಗಳು ಕರುಗಳನ್ನು ಈಯುತ್ತವೆ.
|
10. Their bull H7794 engendereth H5674 , and faileth H1602 not H3808 ; their cow H6510 calveth H6403 , and casteth not her calf H7921 H3808 .
|
11. ದುಷ್ಟರು ತಮ್ಮ ಮಕ್ಕಳನ್ನು ಕುರಿಮರಿಗಳಂತೆ ಆಟವಾಡಲು ಹೊರಗೆ ಕಳುಹಿಸುವರು. ಅವರ ಮಕ್ಕಳು ಸುತ್ತಮುತ್ತ ಕುಣಿದಾಡುವರು.
|
11. They send forth H7971 their little ones H5759 like a flock H6629 , and their children H3206 dance H7540 .
|
12. ಅವರು ತಂಬೂರಿಗಳನ್ನೂ ಹಾರ್ಪ್‌ವಾದ್ಯಗಳನ್ನೂ ಬಾರಿಸುತ್ತಾ ಹಾಡುವರು; ಕೊಳಲುಗಳ ಧ್ವನಿಗೆ ಉಲ್ಲಾಸಪಡುವರು.
|
12. They take H5375 the timbrel H8596 and harp H3658 , and rejoice H8055 at the sound H6963 of the organ H5748 .
|
13. ದುಷ್ಟರು ತಮ್ಮ ಜೀವಮಾನವೆಲ್ಲಾ ಏಳಿಗೆ ಹೊಂದುವರು. ಅವರು ಸಂಕಟಪಡದೆ ಸತ್ತು ಸಮಾಧಿಗೆ ಸೇರುವರು.
|
13. They spend H3615 their days H3117 in wealth H2896 , and in a moment H7281 go down H5181 to the grave H7585 .
|
14. ಆದರೆ ದುಷ್ಟರು ದೇವರಿಗೆ, ‘ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟುಕೊಡು! ನಿನ್ನ ಮಾರ್ಗದ ತಿಳುವಳಿಕೆಯೇ ನಮಗೆ ಬೇಡ’ ಎನ್ನುವರು.
|
14. Therefore they say H559 unto God H410 , Depart H5493 from H4480 us ; for we desire H2654 not H3808 the knowledge H1847 of thy ways H1870 .
|
15. ದುಷ್ಟರು, ‘ಸರ್ವಶಕ್ತನಾದ ದೇವರು ಯಾರು? ನಾವು ಆತನ ಸೇವೆಮಾಡುವ ಅಗತ್ಯವಿಲ್ಲ! ಆತನಿಗೆ ಪ್ರಾರ್ಥಿಸುವುದರಿಂದ ಪ್ರಯೋಜನವೇನೂ ಇಲ್ಲ’ ಎಂದು ಹೇಳುವರು.
|
15. What H4100 is the Almighty H7706 , that H3588 we should serve H5647 him? and what H4100 profit H3276 should we have, if H3588 we pray H6293 unto him?
|
16. “ತಮ್ಮ ಏಳಿಗೆಗೆ ಕಾರಣ ತಾವೇ ಎಂದು ದುಷ್ಟರು ಯೋಚಿಸಿಕೊಂಡಿದ್ದಾರೆ. ಆದರೆ ಅವರ ಆಲೋಚನೆಗಳನ್ನು ನಾನು ತಿರಸ್ಕರಿಸುವೆ.
|
16. Lo H2005 , their good H2898 is not H3808 in their hand H3027 : the counsel H6098 of the wicked H7563 is far H7368 from H4480 me.
|
17. ಎಷ್ಟು ಸಲ ದುಷ್ಟರ ದೀಪವು ಆರಿಹೋಯಿತು? ಎಷ್ಟು ಸಲ ದುಷ್ಟರಿಗೆ ನಾಶನವು ಬರುವುದು? ದೇವರು ಎಷ್ಟು ಸಲ ಅವರ ಮೇಲೆ ಕೋಪಗೊಂಡು ಅವರನ್ನು ದಂಡಿಸುವನು?
|
17. How oft H4100 is the candle H5216 of the wicked H7563 put out H1846 ! and how oft cometh H935 their destruction H343 upon H5921 them! God distributeth H2505 sorrows H2256 in his anger H639 .
|
18. ಗಾಳಿಯು ಹುಲ್ಲನ್ನೂ ಬಿರುಗಾಳಿಯು ಹೊಟ್ಟನ್ನೂ ಬಡಿದುಕೊಂಡು ಹೋಗುವಂತೆ ದೇವರು ದುಷ್ಟರನ್ನು ಎಷ್ಟು ಸಲ ಬಡಿದುಕೊಂಡು ಹೋಗುವನು?
|
18. They are H1961 as stubble H8401 before H6440 the wind H7307 , and as chaff H4671 that the storm H5492 carrieth away H1589 .
|
19. ‘ದುಷ್ಟನ ಮಕ್ಕಳಿಗೆ ದೇವರು ದಂಡನೆಯನ್ನು ಶೇಖರಿಸಿಡುತ್ತಾನೆ’ ಎಂದು ನೀವು ಹೇಳುತ್ತೀರಿ. ಇಲ್ಲ! ದೇವರು ದುಷ್ಟನನ್ನೇ ದಂಡಿಸಲಿ. ಆಗ, ತನ್ನ ಸ್ವಂತ ಪಾಪಗಳಿಗಾಗಿ ತನಗೆ ದಂಡನೆಯಾಯಿತೆಂದು ಅವನು ತಿಳಿದುಕೊಳ್ಳುವನು.
|
19. God H433 layeth up H6845 his iniquity H205 for his children H1121 : he rewardeth H7999 H413 him , and he shall know H3045 it .
|
20. ದುಷ್ಟನು ತನ್ನ ಸ್ವಂತ ನಾಶನವನ್ನು ತಾನೇ ನೋಡಲಿ; ಸರ್ವಶಕ್ತನಾದ ದೇವರ ಕೋಪವನ್ನು ಅನುಭವಿಸಲಿ.
|
20. His eyes H5869 shall see H7200 his destruction H3589 , and he shall drink H8354 of the wrath H4480 H2534 of the Almighty H7706 .
|
21. ದುಷ್ಟನ ಜೀವಿತವು ಮುಗಿದುಹೋದ ಮೇಲೆ, ತಾನು ಬಿಟ್ಟುಹೋಗಿರುವ ತನ್ನ ಕುಟುಂಬದ ಬಗ್ಗೆ ಅವನು ಚಿಂತಿಸುವುದಿಲ್ಲ.
|
21. For H3588 what H4100 pleasure H2656 hath he in his house H1004 after H310 him , when the number H4557 of his months H2320 is cut off in the midst H2686 ?
|
22. “ದೇವರಿಗೆ ಜ್ಞಾನವನ್ನು ಉಪದೇಶಿಸಲು ಯಾರಿಂದಲೂ ಆಗದು. ಮೇಲಿನ ಲೋಕದಲ್ಲಿರುವ ಜನರಿಗೂ ಸಹ ದೇವರು ನ್ಯಾಯತೀರಿಸುವನು.
|
22. Shall any teach H3925 God H410 knowledge H1847 ? seeing he H1931 judgeth H8199 those that are high H7311 .
|
23. ಒಬ್ಬನು ತನ್ನ ಜೀವಮಾನವೆಲ್ಲಾ ಯಶಸ್ವಿಯಾಗಿ ಬಾಳಿ ಸಾಯುವನು. ಅವನು ಸುರಕ್ಷಿತವೂ ಸುಖಕರವೂ ಆದ ಬಾಳ್ವೆಯನ್ನು ನಡೆಸಿದನು.
|
23. One H2088 dieth H4191 in his full H8537 strength H6106 , being wholly H3605 at ease H7946 and quiet H7961 .
|
24. ಅವನ ದೇಹವು ಚೆನ್ನಾಗಿ ಪೋಷಿಸಲ್ಪಟ್ಟಿತು, ಅವನ ಎಲುಬುಗಳು ಮಜ್ಜೆಯಿಂದ ಇನ್ನೂ ಸಾರವಾಗಿರುವುದು.
|
24. His breasts H5845 are full H4390 of milk H2461 , and his bones H6106 are moistened H8248 with marrow H4221 .
|
25. ಆದರೆ ಮತ್ತೊಬ್ಬನು ಕಷ್ಟಕರವಾದ ಜೀವನದ ನಂತರ ಮನಗುಂದಿದವನಾಗಿ ಸಾಯುವನು. ಅವನು ಯಾವ ಸುಖವನ್ನೂ ಅನುಭವಿಸಲಿಲ್ಲ.
|
25. And another H2088 dieth H4191 in the bitterness H4751 of his soul H5315 , and never H3808 eateth H398 with pleasure H2896 .
|
26. ಕೊನೆಯಲ್ಲಿ ಅವರಿಬ್ಬರೂ ಧೂಳಿನಲ್ಲಿ ಒಟ್ಟಿಗೆ ಮಲಗಿಕೊಳ್ಳುವರು. ಹುಳಗಳು ಅವರಿಬ್ಬರನ್ನೂ ಮುತ್ತಿಕೊಳ್ಳುವವು.
|
26. They shall lie down H7901 alike H3162 in H5921 the dust H6083 , and the worms H7415 shall cover H3680 H5921 them.
|
27. “ಆದರೆ, ನಿಮ್ಮ ಆಲೋಚನೆಗಳನ್ನು ಬಲ್ಲೆ, ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ನಾನು ಬಲ್ಲೆ.
|
27. Behold H2005 , I know H3045 your thoughts H4284 , and the devices H4209 which ye wrongfully imagine H2554 against H5921 me.
|
28. ‘ನೀತಿವಂತನ ಮನೆಯು ಎಲ್ಲಿದೆ? ದುಷ್ಟನು ವಾಸವಾಗಿರುವುದು ಎಲ್ಲಿ?’ ಎಂದು ನೀವು ಕೇಳಬಹುದು.
|
28. For H3588 ye say H559 , Where H346 is the house H1004 of the prince H5081 ? and where H346 are the dwelling H4908 places H168 of the wicked H7563 ?
|
29. “ನೀವು ಖಂಡಿತವಾಗಿಯೂ ಪ್ರಯಾಣಿಕರನ್ನು ಕೇಳಿದ್ದೀರಿ. ನೀವು ಖಂಡಿತವಾಗಿಯೂ ಅವರ ವರದಿಯನ್ನು ಒಪ್ಪಿಕೊಳ್ಳುವಿರಿ.
|
29. Have ye not H3808 asked H7592 them that go H5674 by the way H1870 ? and do ye not H3808 know H5234 their tokens H226 ,
|
30. ಅಪಾಯ ಬಂದಾಗ ದುಷ್ಟನು ಪಾರಾಗುವನು; ದೇವರ ಕೋಪವು ತೋರಿಬರುವ ದಿನದಲ್ಲಿ ಅವನು ತಪ್ಪಿಸಿಕೊಳ್ಳುವನು.
|
30. That H3588 the wicked H7451 is reserved H2820 to the day H3117 of destruction H343 ? they shall be brought forth H2986 to the day H3117 of wrath H5678 .
|
31. ದುಷ್ಟನ ಕೆಟ್ಟಕಾರ್ಯದ ಬಗ್ಗೆ ಅವನ ಮುಖದೆದುರಿನಲ್ಲಿ ಯಾರೂ ಟೀಕಿಸುವುದಿಲ್ಲ. ಅವನು ಮಾಡಿದ ಕೇಡಿಗಾಗಿ ಯಾರೂ ಅವನನ್ನು ದಂಡಿಸುವುದಿಲ್ಲ.
|
31. Who H4310 shall declare H5046 his way H1870 to H5921 his face H6440 ? and who H4310 shall repay H7999 him what he H1931 hath done H6213 ?
|
32. ದುಷ್ಟನನ್ನು ಸಮಾಧಿಗೆ ಹೊತ್ತುಕೊಂಡು ಹೋದಾಗ ಅವನ ಸಮಾಧಿಯ ಸಮೀಪದಲ್ಲಿ ಕಾವಲುಗಾರರು ನಿಂತುಕೊಳ್ಳುವರು.
|
32. Yet shall he H1931 be brought H2986 to the grave H6913 , and shall remain H8245 in H5921 the tomb H1430 .
|
33. ಆ ದುಷ್ಟನಿಗೆ ಕಣಿವೆಯ ಮಣ್ಣು ಸಿಹಿಯಾಗಿರುವುದು. ಅವನ ಶವಸಂಸ್ಕಾರದ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿಕೊಳ್ಳುವರು.
|
33. The clods H7263 of the valley H5158 shall be sweet H4985 unto him , and every H3605 man H120 shall draw H4900 after H310 him , as there are innumerable H369 H4557 before H6440 him.
|
34. “ಆದ್ದರಿಂದ ನೀವು ನಿಮ್ಮ ಬರಿದಾದ ಮಾತುಗಳಿಂದ ನನ್ನನ್ನು ಸಂತೈಸಲಾರಿರಿ. ನಿಮ್ಮ ಉತ್ತರಗಳು ಕೇವಲ ಸುಳ್ಳೇ ಆಗಿವೆ.” PE
|
34. How H349 then comfort H5162 ye me in vain H1892 , seeing in your answers H8666 there remaineth H7604 falsehood H4604 ?
|