|
|
1. ನಾನು ಇವೆಲ್ಲವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಆಲೋಚಿಸಿದೆ. ಒಳ್ಳೆಯವರಿಗೂ ಜ್ಞಾನಿಗಳಿಗೂ ಅವರ ಕಾರ್ಯಗಳಿಗೂ ಸಂಭವಿಸುವುದೆಲ್ಲಾ ದೇವರ ಹತೋಟಿಯಲ್ಲಿದೆ. ತಾವು ಪ್ರೀತಿಗೆ ಗುರಿಯಾಗುವರೋ ದ್ವೇಷಕ್ಕೆ ಗುರಿಯಾಗುವರೋ ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸುವುದೂ ಅವರಿಗೆ ಗೊತ್ತಿಲ್ಲ. PEPS
|
1. For H3588 H853 all H3605 this H2088 I considered H5414 in H413 my heart H3820 even to declare H952 H853 all H3605 this H2088 , that H834 the righteous H6662 , and the wise H2450 , and their works H5652 , are in the hand H3027 of God H430 : no H369 man H120 knoweth H3045 either H1571 love H160 or H1571 hatred H8135 by all H3605 that is before H6440 them.
|
2. ಆದರೆ ಎಲ್ಲರಿಗೂ ಸಂಭವಿಸುವುದು ಒಂದೇ. ಅದೇ ಮರಣ. ಒಳ್ಳೆಯವರಿಗೂ ಕೆಟ್ಟವರಿಗೂ ಶುದ್ಧರಿಗೂ ಅಶುದ್ಧರಿಗೂ ಯಜ್ಞಗಳನ್ನು ಅರ್ಪಿಸುವವರಿಗೂ ಅರ್ಪಿಸದವರಿಗೂ ಮರಣವಾಗುತ್ತದೆ. ಒಳ್ಳೆಯವನು ಸಹ ಕೇವಲ ಪಾಪಿಯಂತೆ ಸಾಯುವನು. ದೇವರಿಗೆ ವಿಶೇಷವಾದ ಹರಕೆಗಳನ್ನು ಮಾಡುವವನು ಸಹ ಆ ಹರಕೆಗಳನ್ನು ಮಾಡಲು ಭಯಪಡುವ ವ್ಯಕ್ತಿಯಂತೆ ಸಾಯುವನು. PEPS
|
2. All H3605 things come alike H834 to all H3605 : there is one H259 event H4745 to the righteous H6662 , and to the wicked H7563 ; to the good H2896 and to the clean H2889 , and to the unclean H2931 ; to him that sacrificeth H2076 , and to him that sacrificeth H834 H2076 not H369 : as is the good H2896 , so is the sinner H2398 ; and he that sweareth H7650 , as H834 he that feareth H3372 an oath H7621 .
|
3. ಈ ಲೋಕದ ಎಲ್ಲಾ ಕಾರ್ಯಗಳಲ್ಲಿ ಎಲ್ಲಕ್ಕಿಂತಲೂ ದುಃಖಕರವಾದದ್ದೇನೆಂದರೆ, ಎಲ್ಲರೂ ಒಂದೇ ರೀತಿಯಲ್ಲಿ ಅಂತ್ಯವಾಗುವರು. ಆದರೆ ಜನರು ದುಷ್ಟತನವನ್ನೂ ಮೂರ್ಖತನವನ್ನೂ ಆಲೋಚಿಸುತ್ತಲೇ ಇರುವುದು ಅಪಾಯಕರ. ಆಲೋಚನೆಗಳು ಅವರನ್ನು ಮರಣಕ್ಕೆ ನಡೆಸುತ್ತವೆ.
|
3. This H2088 is an evil H7451 among all H3605 things that H834 are done H6213 under H8478 the sun H8121 , that H3588 there is one H259 event H4745 unto all H3605 : yea, also H1571 the heart H3820 of the sons H1121 of men H120 is full H4390 of evil H7451 , and madness H1947 is in their heart H3824 while they live H2416 , and after H310 that they go to H413 the dead H4191 .
|
4. ಇನ್ನೂ ಜೀವದಿಂದಿರುವ ಪ್ರತಿಯೊಬ್ಬರಿಗೂ ನಿರೀಕ್ಷೆಯಿದೆ. ಜೀವಂತವಾಗಿರುವ ನಾಯಿ ಸತ್ತ ಸಿಂಹಕ್ಕಿಂತಲೂ ಉತ್ತಮ ಎಂಬ ನುಡಿ ಎಷ್ಟೋ ಸತ್ಯ. PEPS
|
4. For H3588 to him H4310 that H834 is joined H2266 to H413 all H3605 the living H2416 there is H3426 hope H986 : for H3588 a living H2416 dog H3611 is better H2896 than H4480 a dead H4191 lion H738 .
|
5. ಜೀವಿತರಿಗೆ ಸಾಯುತ್ತೇವೆಂಬ ತಿಳಿವಳಿಕೆಯಿದೆ. ಆದರೆ ಸತ್ತವರಿಗೆ ಯಾವ ತಿಳಿವಳಿಕೆಯೂ ಇಲ್ಲ. ಸತ್ತವರಿಗೆ ಯಾವ ಪ್ರತಿಫಲವೂ ಇಲ್ಲ. ಜನರು ಅವರನ್ನು ಬೇಗನೆ ಮರೆತುಬಿಡುವರು.
|
5. For H3588 the living H2416 know H3045 that they shall die H7945 H4191 : but the dead H4191 know H3045 not H369 any thing H3972 , neither H369 have they any more H5750 a reward H7939 ; for H3588 the memory H2143 of them is forgotten H7911 .
|
6. ಅವರು ಸತ್ತಾಗಲೇ, ಅವರ ಪ್ರೀತಿ, ದ್ವೇಷ ಮತ್ತು ಹೊಟ್ಟೆಕಿಚ್ಚು ಅಳಿದುಹೋದವು; ಸತ್ತವರು ಭೂಲೋಕದ ಕಾರ್ಯಗಳಲ್ಲಿ ಇನ್ನೆಂದಿಗೂ ಪಾಲುಗಾರರಾಗುವುದಿಲ್ಲ. PS
|
6. Also H1571 their love H160 , and H1571 their hatred H8135 , and H1571 their envy H7068 , is now H3528 perished H6 ; neither H369 have they any more H5750 a portion H2506 forever H5769 in any H3605 thing that H834 is done H6213 under H8478 the sun H8121 .
|
7. {ಜೀವನದಲ್ಲಿ ಆನಂದಿಸಿ} PS ಆದ್ದರಿಂದ ಹೋಗು, ಊಟಮಾಡಿ ಸಂತೋಷಪಡು; ದ್ರಾಕ್ಷಾರಸವನ್ನು ಕುಡಿದು ಉಲ್ಲಾಸಿಸು; ನಿನ್ನ ಈ ನಡತೆಯು ದೇವರಿಗೆ ಮೆಚ್ಚಿಕೆಯಾಗಿದೆ.
|
7. Go H1980 thy way, eat H398 thy bread H3899 with joy H8057 , and drink H8354 thy wine H3196 with a merry H2896 heart H3820 ; for H3588 God H430 now H3528 accepteth H7521 H853 thy works H4639 .
|
8. ಒಳ್ಳೆಯ ಉಡುಪುಗಳನ್ನು ಧರಿಸಿಕೊಂಡು ನಿನ್ನನ್ನು ಅಲಂಕರಿಸಿಕೊ.
|
8. Let thy garments H899 be H1961 always H3605 H6256 white H3836 ; and let thy head H7218 lack H2637 no H408 ointment H8081 .
|
9. ನೀನು ಪ್ರಿಯ ಪತ್ನಿಯೊಡನೆ ಸುಖಪಡು. ನಿನ್ನ ಅಲ್ಪಕಾಲ ಜೀವಿತದ ದಿನಗಳಲ್ಲೆಲ್ಲಾ ಸುಖಪಡು. ಈ ಜೀವಿತವನ್ನು ನಿನಗೆ ಅನುಗ್ರಹಿಸಿರುವಾತನು ದೇವರೇ, ಇದೇ ನಿನ್ನ ಪಾಲು. ನಿನ್ನ ಈ ಜೀವಿತದ ಕೆಲಸಕಾರ್ಯಗಳನ್ನು ಸಂತೋಷದಿಂದ ಮಾಡು.
|
9. Live joyfully H2416 H7200 with H5973 the wife H802 whom H834 thou lovest H157 all H3605 the days H3117 of the life H2416 of thy vanity H1892 , which H834 he hath given H5414 thee under H8478 the sun H8121 , all H3605 the days H3117 of thy vanity H1892 : for H3588 that H1931 is thy portion H2506 in this life H2416 , and in thy labor H5999 which H834 thou H859 takest H6001 under H8478 the sun H8121 .
|
10. ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಆ ಸ್ಥಳಕ್ಕೆ ಹೋಗುತ್ತಿದ್ದೇವೆ. ಅದೃಷ್ಟವೇ? ನತಾದೃಷ್ಟವೇ? PS
|
10. Whatsoever H3605 H834 thy hand H3027 findeth H4672 to do H6213 , do H6213 it with thy might H3581 ; for H3588 there is no H369 work H4639 , nor device H2808 , nor knowledge H1847 , nor wisdom H2451 , in the grave H7585 , whither H834 H8033 thou H859 goest H1980 .
|
11. ಇದಲ್ಲದೆ ಲೋಕದಲ್ಲಿ ಇನ್ನೂ ಕೆಲವು ಅನ್ಯಾಯಗಳನ್ನು ಗಮನಿಸಿದ್ದೇನೆ. ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು; ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು; ಜ್ಞಾನಿಗೆ ಯಾವಾಗಲೂ ಆಹಾರ ದೊರಕದು; ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು; ಪ್ರವೀಣರಿಗೆ ಯಾವಾಗಲೂ ಹೊಗಳಿಕೆಬಾರದು; ಸಮಯ ಬಂದಾಗ, ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ. PEPS
|
11. I returned H7725 , and saw H7200 under H8478 the sun H8121 , that H3588 the race H4793 is not H3808 to the swift H7031 , nor H3808 the battle H4421 to the strong H1368 , neither H3808 yet H1571 bread H3899 to the wise H2450 , nor H3808 yet H1571 riches H6239 to men of understanding H995 , nor H3808 yet H1571 favor H2580 to men of skill H3045 ; but H3588 time H6256 and chance H6294 happeneth H7136 to H853 them all H3605 .
|
12. ಮನುಷ್ಯನಿಗೆ ಮುಂದೆ ಏನಾಗುವುದೋ ತಿಳಿಯದು. ಬಲೆಯಲ್ಲಿ ಸಿಕ್ಕಿಕೊಂಡಿರುವ ಮೀನಿನಂತೆಯೂ ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯಂತೆಯೂ ಮನುಷ್ಯನು ತನಗೆ ಸಂಭವಿಸುವ ಕೇಡುಗಳಿಗೆ ಗುರಿಯಾಗುವನು. PS
|
12. For H3588 man H120 also H1571 knoweth H3045 not H3808 H853 his time H6256 : as the fishes H1709 that are taken H7945 H270 in an evil H7451 net H4686 , and as the birds H6833 that are caught H270 in the snare H6341 ; so are the sons H1121 of men H120 snared H3369 in an evil H7451 time H6256 , when it falleth H7945 H5307 suddenly H6597 upon H5921 them.
|
13. {ಜ್ಞಾನದ ಶಕ್ತಿ} PS ಇದಲ್ಲದೆ ಲೋಕದಲ್ಲಿ ಜ್ಞಾನದ ಕಾರ್ಯವನ್ನು ಮಾಡುವ ಒಬ್ಬನನ್ನು ನಾನು ಕಂಡೆನು. ಅದು ತುಂಬ ಮುಖ್ಯವಾದದ್ದೆಂದು ನನಗೆ ತೋರಿತು.
|
13. This H2090 wisdom H2451 have I seen H7200 also H1571 under H8478 the sun H8121 , and it H1931 seemed great H1419 unto H413 me:
|
14. ಕೆಲವು ಜನರಿದ್ದ ಒಂದು ಚಿಕ್ಕ ನಗರವಿತ್ತು. ಒಬ್ಬ ದೊಡ್ಡ ರಾಜನು ಆ ನಗರದ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದನು.
|
14. There was a little H6996 city H5892 , and few H4592 men H376 within it ; and there came H935 a great H1419 king H4428 against H413 it , and besieged H5437 it , and built H1129 great H1419 bulwarks H4685 against H5921 it:
|
15. ಆ ನಗರದಲ್ಲಿ ಒಬ್ಬ ಜ್ಞಾನಿ ಇದ್ದನು. ಆದರೆ ಅವನು ಬಡವನಾಗಿದ್ದನು, ಅವನು ತನ್ನ ಜ್ಞಾನದಿಂದ ಆ ನಗರವನ್ನು ಕಾಪಾಡಿದನು; ಆದರೆ ಜನರು ಅವನನ್ನು ಮರೆತೇಬಿಟ್ಟರು.
|
15. Now there was found H4672 in it a poor H4542 wise H2450 man H376 , and he H1931 by his wisdom H2451 delivered H4422 H853 the city H5892 ; yet no H3808 man H120 remembered H2142 H853 that same H1931 poor H4542 man H376 .
|
16. ನಾನು ಹೇಳುವುದೇನೆಂದರೆ, ಜ್ಞಾನವು ಶಕ್ತಿಗಿಂತಲೂ ಉತ್ತಮ. ಅವರು ಆ ಬಡವನ ಜ್ಞಾನವನ್ನು ಮರೆತುಬಿಟ್ಟರೂ ಅವನ ಮಾತುಗಳನ್ನು ಕೇಳದಿದ್ದರೂ ಜ್ಞಾನವು ಉತ್ತಮವಾದದ್ದೇ.
|
16. Then said H559 I H589 , Wisdom H2451 is better H2896 than strength H4480 H1369 : nevertheless the poor man H4542 's wisdom H2451 is despised H959 , and his words H1697 are not H369 heard H8085 .
|
17. ಜ್ಞಾನಿಯ ಮೆಲ್ಲನೆಯ ಮಾತುಗಳು ಮೂಢನಾದ ಅಧಿಪತಿಯು ಕೂಗಿಹೇಳಿದ ಮಾತುಗಳಿಗಿಂತಲೂ ಎಷ್ಟೋ ಉತ್ತಮ.
|
17. The words H1697 of wise H2450 men are heard H8085 in quiet H5183 more than the cry H4480 H2201 of him that ruleth H4910 among fools H3684 .
|
18. ಜ್ಞಾನವು ಯುದ್ಧಾಯುಧಗಳಿಗಿಂತಲೂ ಉತ್ತಮ, ಆದರೆ ಮೂಢನು ಒಳ್ಳೆಯದನ್ನು ಹಾಳು ಮಾಡುವನು. PE
|
18. Wisdom H2451 is better H2896 than weapons H4480 H3627 of war H7128 : but one H259 sinner H2398 destroyeth H6 much H7235 good H2896 .
|