|
|
1. {ಯೆಹೋವಾಷನು ದೇವಾಲಯವನ್ನು ತಿರಿಗಿ ಕಟ್ಟಿದ್ದು} PS ಯೆಹೋವಾಷನು ಪಟ್ಟಕ್ಕೆ ಬಂದಾಗ ಏಳು ವರ್ಷದವನಾಗಿದ್ದನು. ಅವನು ನಲವತ್ತು ವರ್ಷಗಳ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಚಿಬ್ಯ. ಆಕೆ ಬೇರ್ಷೆಬದವಳಾಗಿದ್ದಳು.
|
1. Joash H3101 was seven H7651 years H8141 old H1121 when he began to reign H4427 , and he reigned H4427 forty H705 years H8141 in Jerusalem H3389 . His mother H517 's name H8034 also was Zibiah H6645 of Beer H4480 H884 -sheba.
|
2. ಯಾಜಕನಾದ ಯೆಹೋಯಾದನು ಜೀವದಿಂದಿರುವ ತನಕ ಯೆಹೋವಾಷನು ಯೆಹೋವನಿಗೆ ಯೋಗ್ಯವಾಗಿ ನಡೆದುಕೊಂಡನು.
|
2. And Joash H3077 did H6213 that which was right H3477 in the sight H5869 of the LORD H3068 all H3605 the days H3117 of Jehoiada H3077 the priest H3548 .
|
3. ಯೆಹೋಯಾದನು ಅವನಿಗೆ ಇಬ್ಬರು ಕನ್ನಿಕೆಯರನ್ನು ಮದುವೆ ಮಾಡಿಸಿದನು. ಅವನು ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. PEPS
|
3. And Jehoiada H3077 took H5375 for him two H8147 wives H802 ; and he begot H3205 sons H1121 and daughters H1323 .
|
4. ಸ್ವಲ್ಪಕಾಲವಾದ ಬಳಿಕ ಯೆಹೋವಾಷನು ದೇವಾಲಯವನ್ನು ಸರಿಪಡಿಸಲು ಆಲೋಚಿಸಿದನು.
|
4. And it came to pass H1961 after H310 this H3651 , that Joash H3101 was H1961 minded H5973 H3820 to repair H2318 H853 the house H1004 of the LORD H3068 .
|
5. ಅವನು ಯಾಜಕರನ್ನೂ ಲೇವಿಯರನ್ನೂ ಒಟ್ಟಾಗಿ ಕರೆದು, “ಯೆಹೂದ ದೇಶದ ಊರುಗಳಿಗೆ ಹೋಗಿ ಜನರು ಪ್ರತಿ ವರ್ಷ ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಸಂಗ್ರಹಿಸಿರಿ. ದೇವಾಲಯನ್ನು ಸರಿಪಡಿಸಲು ಆ ಹಣವನ್ನು ಉಪಯೋಗಿಸಿರಿ. ಇದನ್ನು ಬೇಗನೆ ಮಾಡಿರಿ” ಎಂದು ಹೇಳಿದನು. ಆದರೆ ಲೇವಿಯರು ಅವಸರ ಮಾಡಲಿಲ್ಲ. PEPS
|
5. And he gathered together H6908 H853 the priests H3548 and the Levites H3881 , and said H559 to them , Go out H3318 unto the cities H5892 of Judah H3063 , and gather H6908 of all H4480 H3605 Israel H3478 money H3701 to repair H2388 H853 the house H1004 of your God H430 from H4480 H1767 year H8141 to year H8141 , and see that ye H859 hasten H4116 the matter H1697 . Howbeit the Levites H3881 hastened H4116 it not H3808 .
|
6. ಆಗ ಅರಸನಾದ ಯೆಹೋವಾಷನು ಮಹಾಯಾಜಕನಾದ ಯೆಹೋಯಾದನನ್ನು ಕರೆದು, “ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಯೆಹೂದ ಮತ್ತು ಜೆರುಸಲೇಮಿನ ಜನರಿಂದ ಲೇವಿಯರು ಸಂಗ್ರಹಿಸಿಕೊಂಡು ಬರಲು ನೀನೇಕೆ ಅವರನ್ನು ಒತ್ತಾಯಿಸಲಿಲ್ಲ? ಮೋಶೆಯೂ ಇಸ್ರೇಲರೂ ಆ ಹಣವನ್ನು ಪವಿತ್ರ ಗುಡಾರಕ್ಕಾಗಿ ಉಪಯೋಗಿಸುತ್ತಿರಲಿಲ್ಲವೇ?” ಎಂದು ಕೇಳಿದನು. PEPS
|
6. And the king H4428 called H7121 for Jehoiada H3077 the chief H7218 , and said H559 unto him, Why H4069 hast thou not H3808 required H1875 of H5921 the Levites H3881 to bring in H935 out of Judah H4480 H3063 and out of Jerusalem H4480 H3389 H853 the collection H4864 , according to the commandment of Moses H4872 the servant H5650 of the LORD H3068 , and of the congregation H6951 of Israel H3478 , for the tabernacle H168 of witness H5715 ?
|
7. ಗತಿಸಿದ ವರ್ಷಗಳಲ್ಲಿ ಅತಲ್ಯಳ ಮಕ್ಕಳು ದೇವಾಲಯದೊಳಗೆ ಬಲಾತ್ಕಾರದಿಂದ ನುಗ್ಗಿ ಅಲ್ಲಿದ್ದ ಪವಿತ್ರ ವಸ್ತುಗಳನ್ನು ತೆಗೆದು ಬಾಳ್ ದೇವರ ಪೂಜೆಗಾಗಿ ಉಪಯೋಗಿಸಿದ್ದರು. ಅತಲ್ಯಳು ಬಹಳ ದುಷ್ಟಳಾಗಿದ್ದಳು. PEPS
|
7. For H3588 the sons H1121 of Athaliah H6271 , that wicked woman H4849 , had broken up H6555 H853 the house H1004 of God H430 ; and also H1571 all H3605 the dedicated things H6944 of the house H1004 of the LORD H3068 did they bestow H6213 upon Baalim H1168 .
|
8. ಅರಸನಾದ ಯೆಹೋವಾಷನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ದೇವಾಲಯದ ಬಾಗಿಲಲ್ಲಿ ಇರಿಸಿದನು.
|
8. And at the king H4428 's commandment H559 they made H6213 a H259 chest H727 , and set H5414 it without H2351 at the gate H8179 of the house H1004 of the LORD H3068 .
|
9. ಯೆಹೂದ ಮತ್ತು ಜೆರುಸಲೇಮಿನಲ್ಲಿ ಲೇವಿಯರು ಜನರಿಗೆಲ್ಲಾ ತಮ್ಮ ತಮ್ಮ ತೆರಿಗೆ ಹಣವನ್ನು ತಂದು ದೇವರಿಗೆ ಸಮರ್ಪಿಸುವಂತೆ ಪ್ರಕಟಿಸಿದರು. ಇಸ್ರೇಲರು ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಿರುವಾಗ ದೇವರ ಸೇವಕನಾದ ಮೋಶೆಯು ಜನರಿಗೆ ಇದನ್ನು ಆಜ್ಞಾಪಿಸಿದ್ದನು.
|
9. And they made H5414 a proclamation H6963 through Judah H3063 and Jerusalem H3389 , to bring in H935 to the LORD H3068 the collection H4864 that Moses H4872 the servant H5650 of God H430 laid upon H5921 Israel H3478 in the wilderness H4057 .
|
10. ಎಲ್ಲಾ ನಾಯಕರೂ ಜನರೂ ಸಂತೋಷದಿಂದ ತಮ್ಮ ಹಣವನ್ನು ತಂದು ಪೆಟ್ಟಿಗೆಯಲ್ಲಿ ಹಾಕತೊಡಗಿದರು. ಆ ಪೆಟ್ಟಿಗೆ ತುಂಬಿದ ಮೇಲೆ
|
10. And all H3605 the princes H8269 and all H3605 the people H5971 rejoiced H8055 , and brought in H935 , and cast H7993 into the chest H727 , until H5704 they had made an end H3615 .
|
11. ಲೇವಿಯರು ಅದನ್ನು ಅರಸನ ಅಧಿಕಾರಿಗಳ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದರು; ರಾಜನ ಕಾರ್ಯದರ್ಶಿ ಮತ್ತು ಯಾಜಕರ ಮುಖಂಡನು ಬಂದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಮತ್ತೆ ಆ ಪೆಟ್ಟಿಗೆಯನ್ನು ಮುಂಚಿನ ಸ್ಥಳದಲ್ಲಿ ಇಡುತ್ತಿದ್ದರು. ಹೀಗೆ ಅವರು ಮಾಡುತ್ತಾ ಬಂದಕಾರಣ ಬಹಳ ಹಣ ಸಂಗ್ರಹಿಸಲ್ಪಟ್ಟಿತು.
|
11. Now it came to pass H1961 , that at what time H6256 H853 the chest H727 was brought H935 unto H413 the king H4428 's office H6486 by the hand H3027 of the Levites H3881 , and when they saw H7200 that H3588 there was much H7227 money H3701 , the king H4428 's scribe H5608 and the high H7218 priest H3548 's officer H6496 came H935 and emptied H6168 H853 the chest H727 , and took H5375 it , and carried H7725 it to H413 his place H4725 again. Thus H3541 they did H6213 day H3117 by day H3117 , and gathered H622 money H3701 in abundance H7230 .
|
12. ಯೆಹೋಯಾದನು ಮತ್ತು ರಾಜನು ದೇವಾಲಯವನ್ನು ದುರಸ್ತಿ ಮಾಡುವವರ ಕೈಗೆ ಅದನ್ನು ಕೊಟ್ಟರು. ಅವರು ಮರದ ಕುಶಲಕರ್ಮಿಗಳನ್ನೂ ಬಡಗಿಗಳನ್ನೂ ದೇವಾಲಯವನ್ನು ಸರಿಪಡಿಸಲು ನೇಮಿಸಿದರು. ಅಲ್ಲದೆ ತಾಮ್ರಕಬ್ಬಿಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೂ ಕೆಲಸಕ್ಕೆ ನೇಮಿಸಿದರು.
|
12. And the king H4428 and Jehoiada H3077 gave H5414 it to H413 such as did H6213 the work H4399 of the service H5656 of the house H1004 of the LORD H3068 , and hired H1961 H7936 masons H2672 and carpenters H2796 to repair H2318 the house H1004 of the LORD H3068 , and also H1571 such as wrought H2796 iron H1270 and brass H5178 to mend H2388 H853 the house H1004 of the LORD H3068 .
|
13. ಕೆಲಸಗಳ ಮೇಲ್ವಿಚಾರಣೆ ಮಾಡುವವರು ನಂಬಿಗಸ್ತರಾಗಿದ್ದರು. ದೇವಾಲಯವನ್ನು ಸರಿಪಡಿಸುವ ಯೋಜನೆಯು ಪೂರ್ಣಗೊಂಡಿತು. ಅವರು ಅದನ್ನು ಮುಂಚೆ ಹೇಗಿತ್ತೋ ಹಾಗೆಯೇ ಮಾಡಿದರು; ಅಲ್ಲದೆ ಅದಕ್ಕಿಂತಲೂ ಹೆಚ್ಚು ಭದ್ರಪಡಿಸಿದರು.
|
13. So the workmen H6213 H4399 wrought H6213 , and the work H4399 was perfected H5927 H724 by H3027 them , and they set H5975 H853 the house H1004 of God H430 in H5921 his state H4971 , and strengthened H553 it.
|
14. ಕೆಲಸಗಾರರು ತಮ್ಮ ಕೆಲಸವು ಮುಗಿದ ಬಳಿಕ ಉಳಿದ ಹಣವನ್ನು ಅರಸನಾದ ಯೆಹೋವಾಷನಿಗೆ ಮತ್ತು ಯೆಹೋಯಾದನಿಗೆ ತಂದುಕೊಟ್ಟರು. ಆ ಹಣವನ್ನು ದೇವಾಲಯದ ಉಪಕರಣಗಳನ್ನು ಮಾಡಿಸಲು ಉಪಯೋಗಿಸಿದರು. ಅವು ದೇವಾಲಯದೊಳಗಿನ ಸೇವೆಗೂ ಸರ್ವಾಂಗಹೋಮಕ್ಕೂ ಉಪಯುಕ್ತವಾಗಿದ್ದವು. ಮಾತ್ರವಲ್ಲದೆ ಬೆಳ್ಳಿಬಂಗಾರಗಳಿಂದ ಬೋಗುಣಿ ಮತ್ತು ಇತರ ವಸ್ತುಗಳನ್ನು ಮಾಡಿದರು. ಯೆಹೋಯಾದನು ಜೀವದಿಂದಿರುವ ತನಕ ಪ್ರತೀ ದಿವಸ ಸರ್ವಾಂಗಹೋಮವನ್ನರ್ಪಿಸುತ್ತಿದ್ದನು. PEPS
|
14. And when they had finished H3615 it , they brought H935 H853 the rest H7605 of the money H3701 before H6440 the king H4428 and Jehoiada H3077 , whereof were made H6213 vessels H3627 for the house H1004 of the LORD H3068 , even vessels H3627 to minister H8335 , and to offer H5927 withal , and spoons H3709 , and vessels H3627 of gold H2091 and silver H3701 . And they offered H1961 H5927 burnt offerings H5930 in the house H1004 of the LORD H3068 continually H8548 all H3605 the days H3117 of Jehoiada H3077 .
|
15. ಯೆಹೋಯಾದನು ವೃದ್ಧನಾದನು. ಅವನು ದೀರ್ಘಕಾಲ ಬಾಳಿ ತೀರಿಹೋದನು. ಅವನು ಸಾಯುವಾಗ ಅವನಿಗೆ ನೂರ ಮೂವತ್ತು ವರ್ಷವಾಗಿತ್ತು.
|
15. But Jehoiada H3077 waxed old H2204 , and was full H7646 of days H3117 when he died H4191 ; a hundred H3967 and thirty H7970 years H8141 old H1121 was he when he died H4194 .
|
16. ಅವನ ದೇಹವನ್ನು ದಾವೀದ ನಗರದಲ್ಲಿ ಅರಸುಗಳ ಸಮಾಧಿಯ ಬಳಿಯಲ್ಲಿ ಸಮಾಧಿ ಮಾಡಿದರು. ಯಾಕೆಂದರೆ ಅವನು ಜೀವಂತನಾಗಿದ್ದಾಗ ಇಸ್ರೇಲಿನ ದೇವರಿಗೂ ಆತನ ಆಲಯಕ್ಕೂ ಒಳ್ಳೆಯದನ್ನೇ ಮಾಡಿದ್ದನು. PEPS
|
16. And they buried H6912 him in the city H5892 of David H1732 among H5973 the kings H4428 , because H3588 he had done H6213 good H2896 in Israel H3478 , both toward H5973 God H430 , and toward his house H1004 .
|
17. ಯೆಹೋಯಾದನು ಸತ್ತ ಬಳಿಕ ಯೆಹೂದದೇಶದ ಪ್ರಮುಖರು ಅರಸನಾದ ಯೆಹೋವಾಷನ ಬಳಿಗೆ ಬಂದು ನಮಸ್ಕರಿಸಿದರು. ಅರಸನು ಅವರ ಮಾತುಗಳನ್ನು ಕೇಳಿದನು.
|
17. Now after H310 the death H4194 of Jehoiada H3077 came H935 the princes H8269 of Judah H3063 , and made obeisance H7812 to the king H4428 . Then H227 the king H4428 hearkened H8085 unto H413 them.
|
18. ಅರಸನೂ ಆ ನಾಯಕರುಗಳೂ ದೇವಾಲಯವನ್ನು ನಿರಾಕರಿಸಿ ಅಶೇರ ಸ್ತಂಭಗಳನ್ನೂ ಇತರ ವಿಗ್ರಹಗಳನ್ನೂ ಆರಾಧಿಸಿದರು. ಯೆಹೋವನು ಜೆರುಸಲೇಮಿನ ಮತ್ತು ಯೆಹೂದದ ಜನರ ಮೇಲೆ ಕೋಪಗೊಂಡನು. ಯಾಕೆಂದರೆ ಅರಸನೂ ಆ ನಾಯಕರುಗಳೂ ಯೆಹೋವನ ಮುಂದೆ ದೋಷಿಗಳಾಗಿದ್ದರು.
|
18. And they left H5800 H853 the house H1004 of the LORD H3068 God H430 of their fathers H1 , and served H5647 H853 groves H842 and idols H6091 : and wrath H7110 came H1961 upon H5921 Judah H3063 and Jerusalem H3389 for this H2063 their trespass H819 .
|
19. ಆತನು ಅವರನ್ನು ತನ್ನ ಕಡೆಗೆ ತಿರುಗಿಕೊಳ್ಳುವಂತೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ಪ್ರವಾದಿಗಳು ಜನರನ್ನು ಎಚ್ಚರಿಸಿದರೂ ಅವರ ಮಾತುಗಳಿಗೆ ಅವರು ಗಮನಕೊಡಲಿಲ್ಲ. PEPS
|
19. Yet he sent H7971 prophets H5030 to them , to bring them again H7725 unto H413 the LORD H3068 ; and they testified H5749 against them : but they would not H3808 give ear H238 .
|
20. ಜೆಕರ್ಯನ ಮೇಲೆ ದೇವರಾತ್ಮನು ಬಂದನು. ಅವನು ಯಾಜಕನಾದ ಯೆಹೋಯಾದನ ಮಗ. ಜೆಕರ್ಯನು ಜನರ ಮುಂದೆ ನಿಂತು, “ಯೆಹೋವನು ಹೀಗೆನ್ನುತ್ತಾನೆ: ‘ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲು ನೀವು ಏಕೆ ನಿರಾಕರಿಸುತ್ತೀರಿ? ಏತಕ್ಕೆ? ನೀವು ಉದ್ಧಾರವಾಗುವುದಿಲ್ಲ. ನೀವು ಯೆಹೋವನನ್ನು ತೊರೆದದ್ದರಿಂದ ಆತನು ನಿಮ್ಮನ್ನೂ ತೊರೆದುಬಿಟ್ಟಿರುತ್ತಾನೆ’ ” ಎಂದು ಹೇಳಿದನು. PEPS
|
20. And the Spirit H7307 of God H430 came upon H3847 H853 Zechariah H2148 the son H1121 of Jehoiada H3077 the priest H3548 , which stood H5975 above H4480 H5921 the people H5971 , and said H559 unto them, Thus H3541 saith H559 God H430 , Why H4100 transgress H5674 ye H859 H853 the commandments H4687 of the LORD H3068 , that ye cannot H3808 prosper H6743 ? because H3588 ye have forsaken H5800 the LORD H3068 , he hath also forsaken H5800 H853 you.
|
21. ಆದರೆ ಅವರು ಜೆಕರ್ಯನ ವಿರೋಧವಾಗಿ ಒಳಸಂಚು ಮಾಡಿದರು. ಅವನನ್ನು ಕೊಲ್ಲಲು ಅರಸನು ಅವರಿಗೆ ಆಜ್ಞಾಪಿಸಿದನು. ಆಗ ಅವರು ಅವನನ್ನು ದೇವಾಲಯದ ಅಂಗಳದಲ್ಲಿಯೇ ಕಲ್ಲೆಸೆದು ಕೊಂದರು.
|
21. And they conspired H7194 against H5921 him , and stoned H7275 him with stones H68 at the commandment H4687 of the king H4428 in the court H2691 of the house H1004 of the LORD H3068 .
|
22. ಯೆಹೋವಾಷನು ಯೆಹೋಯಾದನ ಉಪಕಾರವನ್ನು ನೆನಸಲಿಲ್ಲ. ಯೆಹೋಯಾದನು ಜೆಕರ್ಯನ ತಂದೆ. ಯೆಹೋಯಾದನ ಮಗನನ್ನು ಯೆಹೋವಾಷನು ಕೊಂದನು. ಜೆಕರ್ಯನು ಸಾಯುವಾಗ, ಹೇಳಿದ್ದೇನೆಂದರೆ, “ನೀನು ಮಾಡುತ್ತಿರುವದನ್ನು ಯೆಹೋವನೇ ನೋಡಿ ನ್ಯಾಯ ತೀರಿಸಲಿ” ಎಂದು ಹೇಳಿದನು. PEPS
|
22. Thus Joash H3101 the king H4428 remembered H2142 not H3808 the kindness H2617 which H834 Jehoiada H3077 his father H1 had done H6213 to H5973 him , but slew H2026 H853 his son H1121 . And when he died H4191 , he said H559 , The LORD H3068 look upon H7200 it , and require H1875 it .
|
23. ಆ ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ಬಂತು. ಅವರು ಯೆಹೂದದೇಶ ಮತ್ತು ಜೆರುಸಲೇಮಿನ ಮೇಲೆ ದಾಳಿ ಮಾಡಿ ಎಲ್ಲಾ ನಾಯಕರನ್ನು ಸಂಹರಿಸಿದರು. ಅಲ್ಲಿದ್ದ ಬೆಲೆಬಾಳುವ ಎಲ್ಲಾ ವಸ್ತುಗಳನ್ನು ದಮಸ್ಕದ ಅರಸನಿಗೆ ಕಳುಹಿಸಿದರು.
|
23. And it came to pass H1961 at the end H8622 of the year H8141 , that the host H2428 of Syria H758 came up H5927 against H5921 him : and they came H935 to H413 Judah H3063 and Jerusalem H3389 , and destroyed H7843 H853 all H3605 the princes H8269 of the people H5971 from among the people H4480 H5971 , and sent H7971 all H3605 the spoil H7998 of them unto the king H4428 of Damascus H1834 .
|
24. ಅರಾಮ್ಯರ ಸೈನ್ಯವು ಸ್ವಲ್ಪ ಮಂದಿಯಿಂದ ಕೂಡಿದ್ದರೂ ಯೆಹೂದದ ದೊಡ್ಡ ಸೈನ್ಯವನ್ನು ಸೋಲಿಸಿಬಿಟ್ಟಿತು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದುದರಿಂದ ದೇವರಾದ ಯೆಹೋವನು ಹಾಗೆ ಮಾಡಿದನು. ಈ ರೀತಿಯಾಗಿ ಯೆಹೋವಾಷನು ಶಿಕ್ಷಿಸಲ್ಪಟ್ಟನು.
|
24. For H3588 the army H2428 of the Syrians H758 came H935 with a small company H4705 of men H376 , and the LORD H3068 delivered H5414 a very H3966 great H7230 host H2428 into their hand H3027 , because H3588 they had forsaken H5800 H853 the LORD H3068 God H430 of their fathers H1 . So they executed H6213 judgment H8201 against H854 Joash H3101 .
|
25. ಅರಾಮ್ಯರು ಯೆಹೋವಾಷನನ್ನು ಬಿಟ್ಟುಹೋಗುವಾಗ ಅವನು ರೋಗದಿಂದ ಬಹಳ ಅಸ್ವಸ್ಥನಾಗಿದ್ದನು. ಅವನ ಸ್ವಂತ ಸೇವಕರೇ ಅವನಿಗೆ ವಿರೋಧವಾಗಿ ಸಂಚು ಮಾಡಿದರು. ಯಾಕೆಂದರೆ ಅವನು ಯೆಹೋಯಾದನ ಮಗನಾದ ಜೆಕರ್ಯನನ್ನು ಕೊಂದದ್ದರಿಂದ ಸೇವಕರು ಯೆಹೋವಾಷನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದರು. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ಅರಸರುಗಳ ಸಮಾಧಿಯಲ್ಲಿ ಹೂಳಿಡಲಿಲ್ಲ. PEPS
|
25. And when they were departed H1980 from H4480 him, ( for H3588 they left H5800 him in great H7227 diseases H4251 ,) his own servants H5650 conspired H7194 against H5921 him for the blood H1818 of the sons H1121 of Jehoiada H3077 the priest H3548 , and slew H2026 him on H5921 his bed H4296 , and he died H4191 : and they buried H6912 him in the city H5892 of David H1732 , but they buried H6912 him not H3808 in the sepulchers H6913 of the kings H4428 .
|
26. ಯೆಹೋವಾಷನನ್ನು ಕೊಲ್ಲಲು ಸಂಚುಮಾಡಿದ ಸೇವಕರು ಯಾರೆಂದರೆ: ಜಾಬಾದ್ ಮತ್ತು ಯೆಹೋಜಾಬಾದ್, ಜಾಬಾದನ ತಾಯಿಯ ಹೆಸರು ಶಿಮ್ಗಾತ್, ಈಕೆ ಅಮ್ಮೋನಿಯಳು. ಯೆಹೋಜಾಬಾದನ ತಾಯಿಯು ಶಿಮ್ರೀತ್ ಎಂಬಾಕೆ, ಈಕೆ ಮೋವಾಬ್ಯಳು.
|
26. And these H428 are they that conspired H7194 against H5921 him; Zabad H2066 the son H1121 of Shimeath H8100 an Ammonitess H5984 , and Jehozabad H3075 the son H1121 of Shimrith H8116 a Moabitess H4125 .
|
27. ಯೆಹೋವಾಷನ ಮಕ್ಕಳ ಚರಿತ್ರೆ, ಅವನ ವಿರುದ್ಧವಾಗಿ ಹೇಳಿದ ಪ್ರವಾದನೆಗಳು, ಅವನು ದೇವಾಲಯವನ್ನು ಸರಿಪಡಿಸಿದ ವಿಷಯಗಳು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆಯಲ್ಪಟ್ಟಿದೆ. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ರಾಜನಾದನು. PE
|
27. Now concerning his sons H1121 , and the greatness H7230 of the burdens H4853 laid upon H5921 him , and the repairing H3247 of the house H1004 of God H430 , behold H2009 , they are written H3789 in H5921 the story H4097 of the book H5612 of the kings H4428 . And Amaziah H558 his son H1121 reigned H4427 in his stead H8478 .
|