|
|
1. ನೀವು ಕರ್ತನನ್ನು ಸ್ತುತಿಸಿರಿ, ಕರ್ತನಿಗೆ ಉಪಕಾರ ಸ್ತುತಿಮಾಡಿರಿ; ಆತನು ಒಳ್ಳೆಯವನು, ಆತನ ಕರುಣೆಯು ಶಾಶ್ವತ ವಾಗಿರುವದು.
|
1. Praise H1984 ye the LORD H3050 . O give thanks H3034 unto the LORD H3068 ; for H3588 he is good H2896 : for H3588 his mercy H2617 endureth forever H5769 .
|
2. ಕರ್ತನ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸುವವನಾರು? ಆತನ ಸ್ತೋತ್ರಗಳನ್ನು ಪ್ರಸಿದ್ಧಿ ಪಡಿಸುವವನಾರು?
|
2. Who H4310 can utter H4448 the mighty acts H1369 of the LORD H3068 ? who can show forth H8085 all H3605 his praise H8416 ?
|
3. ನ್ಯಾಯವನ್ನು ಕೈಕೊಂಡು ಎಲ್ಲಾ ಕಾಲದಲ್ಲಿ ನೀತಿಯನ್ನು ಮಾಡುವವರು ಧನ್ಯರು.
|
3. Blessed H835 are they that keep H8104 judgment H4941 , and he that doeth H6213 righteousness H6666 at all H3605 times H6256 .
|
4. ಓ ಕರ್ತನೇ, ನಿನ್ನ ಜನರ ಮೇಲಿರುವ ಕಟಾಕ್ಷದಿಂದ ನನ್ನನ್ನೂ ಜ್ಞಾಪಿಸಿಕೋ; ನಿನ್ನ ರಕ್ಷಣೆಯಿಂದ ನನ್ನನ್ನು ದರ್ಶಿಸು.
|
4. Remember H2142 me , O LORD H3068 , with the favor H7522 that thou bearest unto thy people H5971 : O visit H6485 me with thy salvation H3444 ;
|
5. ಕರ್ತನೇ, ನೀನು ಆದುಕೊಂಡವರ ಸುಖವನ್ನು ನಾನು ನೋಡಿ ನಿನ್ನ ಜನಾಂಗದ ಸಂತೋಷ ದೊಂದಿಗೆ ಸಂತೋಷಿಸಿ ನಿನ್ನ ಬಾಧ್ಯತೆಯ ಸಂಗಡ ಹೊಗಳಿಕೊಳ್ಳುವೆನು.
|
5. That I may see H7200 the good H2896 of thy chosen H972 , that I may rejoice H8055 in the gladness H8057 of thy nation H1471 , that I may glory H1984 with H5973 thine inheritance H5159 .
|
6. ನಮ್ಮ ತಂದೆಗಳ ಸಂಗಡ ನಾವು ಪಾಪಮಾಡಿದ್ದೇವೆ, ಅಕ್ರಮಮಾಡಿದ್ದೇವೆ, ದುಷ್ಟತ್ವವನ್ನು ನಡಿಸಿದ್ದೇವೆ.
|
6. We have sinned H2398 with H5973 our fathers H1 , we have committed iniquity H5753 , we have done wickedly H7561 .
|
7. ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು.
|
7. Our fathers H1 understood H7919 not H3808 thy wonders H6381 in Egypt H4714 ; they remembered H2142 not H3808 H853 the multitude H7230 of thy mercies H2617 ; but provoked H4784 him at H5921 the sea H3220 , even at the Red H5488 sea H3220 .
|
8. ಆದಾಗ್ಯೂ ಆತನು ತನ್ನ ಮಹಾಶಕ್ತಿಯನ್ನು ಅವರಿಗೆ ತಿಳಿಯ ಮಾಡುವ ಹಾಗೆ ತನ್ನ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದನು.
|
8. Nevertheless he saved H3467 them for his name's sake H4616 H8034 , that he might make H853 his mighty power H1369 to be known H3045 .
|
9. ಆತನು ಕೆಂಪು ಸಮುದ್ರವನ್ನು ಗದರಿಸಲು ಅದು ಒಣಗಿ ಹೋಯಿತು. ಹೀಗೆ ಜಲಾಗಾಧದಲ್ಲಿ, ಅರಣ್ಯ ದಲ್ಲಿದ್ದ ಹಾಗೆಯೇ ಆತನು ಅವರನ್ನು ನಡಿಸಿದನು.
|
9. He rebuked H1605 the Red H5488 sea H3220 also , and it was dried up H2717 : so he led H1980 them through the depths H8415 , as through the wilderness H4057 .
|
10. ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿ, ಶತ್ರು ವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದನು.
|
10. And he saved H3467 them from the hand H4480 H3027 of him that hated H8130 them , and redeemed H1350 them from the hand H4480 H3027 of the enemy H341 .
|
11. ನೀರುಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು; ಅವರಲ್ಲಿ ಒಬ್ಬನಾದರೂ ಉಳಿಯಲಿಲ್ಲ.
|
11. And the waters H4325 covered H3680 their enemies H6862 : there was not H3808 one H259 of H4480 them left H3498 .
|
12. ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು.
|
12. Then believed H539 they his words H1697 ; they sang H7891 his praise H8416 .
|
13. ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು.
|
13. They soon H4116 forgot H7911 his works H4639 ; they waited H2442 not H3808 for his counsel H6098 :
|
14. ಅರಣ್ಯದಲ್ಲಿ ದುರಾಶೆಯಿಂದ ಆಶಿಸಿ ಮರುಭೂಮಿ ಯಲ್ಲಿ ದೇವರನ್ನು ಪರೀಕ್ಷಿಸಿದರು.
|
14. But lusted exceedingly H183 H8378 in the wilderness H4057 , and tempted H5254 God H410 in the desert H3452 .
|
15. ಆಗ ಅವರ ಬೇಡಿಕೆಯಂತೆ ಅವರಿಗೆ ಆತನು ಕೊಟ್ಟನು; ಆದರೆ ಅವರ ಪ್ರಾಣದಲ್ಲಿ ಕ್ಷೀಣತೆಯನ್ನು ಕಳುಹಿಸಿದನು.
|
15. And he gave H5414 them their request H7596 ; but sent H7971 leanness H7332 into their soul H5315 .
|
16. ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ ಕರ್ತನ ಪರಿಶುದ್ದನಾದ ಆರೋನನ ಮೇಲೆಯೂ ಹೊಟ್ಟೇಕಿಚ್ಚು ಪಟ್ಟರು.
|
16. They envied H7065 Moses H4872 also in the camp H4264 , and Aaron H175 the saint H6918 of the LORD H3068 .
|
17. ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು.
|
17. The earth H776 opened H6605 and swallowed up H1104 Dathan H1885 , and covered H3680 H5921 the company H5712 of Abiram H48 .
|
18. ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.
|
18. And a fire H784 was kindled H1197 in their company H5712 ; the flame H3852 burned up H3857 the wicked H7563 .
|
19. ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು.
|
19. They made H6213 a calf H5695 in Horeb H2722 , and worshiped H7812 the molten image H4541 .
|
20. ತಮ್ಮ ಘನವನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
|
20. Thus they changed H4171 H853 their glory H3519 into the similitude H8403 of an ox H7794 that eateth H398 grass H6212 .
|
21. ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ
|
21. They forgot H7911 God H410 their savior H3467 , which had done H6213 great things H1419 in Egypt H4714 ;
|
22. ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು.
|
22. Wondrous works H6381 in the land H776 of Ham H2526 , and terrible things H3372 by H5921 the Red H5488 sea H3220 .
|
23. ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
|
23. Therefore he said H559 that he would destroy H8045 them , had not H3884 Moses H4872 his chosen H972 stood H5975 before H6440 him in the breach H6556 , to turn away H7725 his wrath H2534 , lest he should destroy H4480 H7843 them .
|
24. ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು.
|
24. Yea , they despised H3988 the pleasant H2532 land H776 , they believed H539 not H3808 his word H1697 :
|
25. ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು.
|
25. But murmured H7279 in their tents H168 , and hearkened H8085 not H3808 unto the voice H6963 of the LORD H3068 .
|
26. ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ
|
26. Therefore he lifted up H5375 his hand H3027 against them , to overthrow H5307 them in the wilderness H4057 :
|
27. ಅವರ ಸಂತತಿಯನ್ನು ಜನಾಂಗಗಳಲ್ಲಿ ಕೆಡವಿ, ಅವರನ್ನು ದೇಶಗಳಲ್ಲಿ ಚದರಿಸುವದಕ್ಕೂ ಆತನು ತನ್ನ ಕೈಯನ್ನು ಅವರ ಮೇಲೆತ್ತಿದನು.
|
27. To overthrow H5307 their seed H2233 also among the nations H1471 , and to scatter H2219 them in the lands H776 .
|
28. ಬಾಳ್ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು
|
28. They joined themselves H6775 also unto Baalpeor H1187 , and ate H398 the sacrifices H2077 of the dead H4191 .
|
29. ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು.
|
29. Thus they provoked him to anger H3707 with their inventions H4611 : and the plague H4046 broke in H6555 upon them.
|
30. ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.
|
30. Then stood up H5975 Phinehas H6372 , and executed judgment H6419 : and so the plague H4046 was stayed H6113 .
|
31. ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು.
|
31. And that was counted H2803 unto him for righteousness H6666 unto all generations H1755 H1755 forevermore H5704 H5769 .
|
32. ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು.
|
32. They angered H7107 him also at H5921 the waters H4325 of strife H4808 , so that it went ill H3415 with Moses H4872 for their sakes H5668 :
|
33. ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು.
|
33. Because H3588 they provoked H4784 H853 his spirit H7307 , so that he spoke unadvisedly H981 with his lips H8193 .
|
34. ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.
|
34. They did not H3808 destroy H8045 H853 the nations H5971 , concerning whom H834 the LORD H3068 commanded H559 them:
|
35. ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು.
|
35. But were mingled H6148 among the heathen H1471 , and learned H3925 their works H4639 .
|
36. ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು.
|
36. And they served H5647 H853 their idols H6091 : which were H1961 a snare H4170 unto them.
|
37. ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು.
|
37. Yea , they sacrificed H2076 H853 their sons H1121 and their daughters H1323 unto devils H7700 ,
|
38. ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು.
|
38. And shed H8210 innocent H5355 blood H1818 , even the blood H1818 of their sons H1121 and of their daughters H1323 , whom H834 they sacrificed H2076 unto the idols H6091 of Canaan H3667 : and the land H776 was polluted H2610 with blood H1818 .
|
39. ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು.
|
39. Thus were they defiled H2930 with their own works H4639 , and went a whoring H2181 with their own inventions H4611 .
|
40. ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು
|
40. Therefore was the wrath H639 of the LORD H3068 kindled H2734 against his people H5971 , insomuch that he abhorred H8581 H853 his own inheritance H5159 .
|
41. ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು.
|
41. And he gave H5414 them into the hand H3027 of the heathen H1471 ; and they that hated H8130 them ruled H4910 over them.
|
42. ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು.
|
42. Their enemies H341 also oppressed H3905 them , and they were brought into subjection H3665 under H8478 their hand H3027 .
|
43. ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು.
|
43. Many H7227 times H6471 did he deliver H5337 them ; but they H1992 provoked H4784 him with their counsel H6098 , and were brought low H4355 for their iniquity H5771 .
|
44. ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು
|
44. Nevertheless he regarded H7200 their affliction H6862 , when he heard H8085 H853 their cry H7440 :
|
45. ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು.
|
45. And he remembered H2142 for them his covenant H1285 , and repented H5162 according to the multitude H7230 of his mercies H2617 .
|
46. ಅವರನ್ನು ಸೆರೆಹಿಡಿದವರ ಮುಂದೆ ಅವರು ಕರುಣೆ ಹೊಂದುವಂತೆ ಮಾಡಿದನು.
|
46. He made H5414 them also to be pitied H7356 of H6440 all H3605 those that carried them captives H7617 .
|
47. ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.
|
47. Save H3467 us , O LORD H3068 our God H430 , and gather H6908 us from among H4480 the heathen H1471 , to give thanks H3034 unto thy holy H6944 name H8034 , and to triumph H7623 in thy praise H8416 .
|
48. ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.
|
48. Blessed H1288 be the LORD H3068 God H430 of Israel H3478 from H4480 everlasting H5769 to H5704 everlasting H5769 : and let all H3605 the people H5971 say H559 , Amen H543 . Praise H1984 ye the LORD H3050 .
|