Bible Versions
Bible Books

Hosea 14 (ERVKN) Easy to Read Version - Kannadam

1 ಇಸ್ರೇಲೇ, ನೀನು ಜಾರಿಬಿದ್ದು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದಿ. ನಿನ್ನ ದೇವರಾದ ಯೆಹೋವನ ಬಳಿಗೆ ಹಿಂದಿರುಗಿ ಬಾ.
2 ನೀನು ಹೇಳಬೇಕಾದ ವಿಷಯಗಳ ಕುರಿತು ನೀನು ಆಲೋಚಿಸು ಮತ್ತು ಯೆಹೋವನ ಬಳಿಗೆ ಹಿಂದಿರುಗಿ ಬಾ, ಮತ್ತು ಆತನಿಗೆ ಹೀಗೆ ಹೇಳು: “ನಮ್ಮ ಪಾಪಗಳನ್ನು ನಮ್ಮಿಂದ ತೆಗೆ. ನಾವು ಮಾಡುವ ಒಳ್ಳೇ ಕಾರ್ಯಗಳನ್ನು ಸ್ವೀಕರಿಸು. ಆಗ ನಮ್ಮ ತುಟಿಗಳಿಂದ ನಿನಗೆ ಸ್ತೋತ್ರವೆಂಬ ಕಾಣಿಕೆಯನ್ನು ಸಮರ್ಪಿಸುವೆವು.
3 ಅಶ್ಶೂರವು ನಮ್ಮನ್ನು ರಕ್ಷಿಸಲಾರದು. ನಾವು ಕುದುರೆ ಮೇಲೆ ಸವಾರಿ ಮಾಡುವದಿಲ್ಲ. ನಮ್ಮ ಕೈಗಳು ತಯಾರಿಸಿದ ಬೊಂಬೆಗಳಿಗೆ ನಾವು ಇನ್ನು ‘ನಮ್ಮ ದೇವರು’ ಎಂದು ಹೇಳುವದಿಲ್ಲ. ಯಾಕಂದರೆ ಅನಾಥರಿಗೆ ಕರುಣೆಯನ್ನು ತೋರಿಸುವವನು ನೀನೇ.”
4 ಯೆಹೋವನು ಹೇಳುವದೇನೆಂದರೆ, “ಅವರು ನನ್ನನ್ನು ತೊರೆದುಬಿಟ್ಟಿದ್ದನ್ನು ನಾನು ಕ್ಷಮಿಸುವೆನು. ಅವರನ್ನು ಅಧಿಕವಾಗಿಯೂ ಸ್ವಇಚ್ಛೆಯಿಂದಲೂ ಪ್ರೀತಿಸುವೆನು. ಈಗ ಅವರ ಮೇಲೆ ನಾನು ಕೋಪಿಸುವದಿಲ್ಲ.
5 ಇಸ್ರೇಲಿಗೆ ನಾನು ಇಬ್ಬನಿಯಂತಿರುವೆನು. ನೆಲದಾವರೆಯಂತೆ ಇಸ್ರೇಲ್ ಅರಳುವನು. ಲೆಬನೋನಿನ ದೇವದಾರು ವೃಕ್ಷಗಳಂತೆ ಸೊಂಪಾಗಿ ಬೆಳೆಯುವನು.
6 ಅವನ ಕೊಂಬೆಗಳು ಹರಡುವವು; ಅಂದವಾದ ಆಲೀವ್ ಮರದಂತಿರುವನು. ಲೆಬನೋನಿನ ದೇವದಾರು ಮರಗಳ ಸುವಾಸನೆಯಂತೆ ಅವನ ವಾಸನೆ ಇರುವದು.
7 ಇಸ್ರೇಲಿನ ಜನರು ತಿರುಗಿ ನನ್ನ ಆಶ್ರಯದಲ್ಲಿ ವಾಸಿಸುವರು. ಧಾನ್ಯದ ಸಸಿಗಳಂತೆ ಬೆಳೆಯುವರು, ದ್ರಾಕ್ಷಾಲತೆಯಿಂದ ಚಿಗುರುವರು. ಲೆಬನೋನಿನ ದ್ರಾಕ್ಷಾಬಳ್ಳಿಯಂತೆ ಅವರು ಇರುವರು.”
8 “ಎಫ್ರಾಯೀಮೇ, ಇನ್ನುಮುಂದೆ ವಿಗ್ರಹವು ನಿನ್ನಲ್ಲಿರಬಾರದು. ನಿನ್ನ ಪ್ರಾರ್ಥನೆಗೆ ಉತ್ತರಿಸುವವನು ನಾನೇ. ನಿನ್ನನ್ನು ಕಾಯುವವನು ನಾನೇ. ನಾನು ತುರಾಯಿ ಮರದಂತೆ ಸದಾ ಹಸಿರಾಗಿರುವೆನು. ನಿನ್ನ ಫಲಗಳು ನನ್ನಿಂದ ಬರುವದು.”
9 ಬುದ್ಧಿವಂತ ಮನುಷ್ಯನು ಇವುಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಜಾಣನು ಇದನ್ನು ಕಲಿತುಕೊಳ್ಳುತ್ತಾನೆ. ಯೆಹೋವನ ಮಾರ್ಗವು ಸರಿಯಾದದ್ದು. ಒಳ್ಳೇ ಜನರು ಅವರೊಂದಿಗೆ ಜೀವಿಸುವರು. ಪಾಪಿಗಳು ಅವುಗಳಿಂದ ಸಾಯುವರು.
1 O Israel, H3478 return H7725 unto H5704 the LORD H3068 thy God; H430 for H3588 thou hast fallen H3782 by thine iniquity. H5771
2 Take H3947 with H5973 you words, H1697 and turn H7725 to H413 the LORD: H3068 say H559 unto H413 him , Take away H5375 all H3605 iniquity, H5771 and receive H3947 us graciously: H2895 so will we render H7999 the calves H6499 of our lips. H8193
3 Asshur H804 shall not H3808 save H3467 us ; we will not H3808 ride H7392 upon H5921 horses: H5483 neither H3808 will we say H559 any more H5750 to the work H4639 of our hands, H3027 Ye are our gods: H430 for H834 in thee the fatherless H3490 findeth mercy. H7355
4 I will heal H7495 their backsliding, H4878 I will love H157 them freely: H5071 for H3588 mine anger H639 is turned away H7725 from H4480 him.
5 I will be H1961 as the dew H2919 unto Israel: H3478 he shall grow H6524 as the lily, H7799 and cast forth H5221 his roots H8328 as Lebanon. H3844
6 His branches H3127 shall spread, H1980 and his beauty H1935 shall be H1961 as the olive tree, H2132 and his smell H7381 as Lebanon. H3844
7 They that dwell H3427 under his shadow H6738 shall return; H7725 they shall revive H2421 as the corn, H1715 and grow H6524 as the vine: H1612 the scent H2143 thereof shall be as the wine H3196 of Lebanon. H3844
8 Ephraim H669 shall say , What H4100 have I to do any more H5750 with idols H6091 ? I H589 have heard H6030 him , and observed H7789 him: I H589 am like a green H7488 fir tree. H1265 From H4480 me is thy fruit H6529 found. H4672
9 Who H4310 is wise, H2450 and he shall understand H995 these H428 things ? prudent, H995 and he shall know H3045 them? for H3588 the ways H1870 of the LORD H3068 are right, H3477 and the just H6662 shall walk H1980 in them : but the transgressors H6586 shall fall H3782 therein.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×