|
|
1. ಹೀಗೆ ಆಕಾಶಗಳೂ ಭೂಮಿಯೂ ಅವುಗಳ ಸಮಸ್ತ ಸಮೂಹವೂ ಸಂಪೂರ್ಣ ವಾದವು.
|
1. Thus the heavens H8064 and the earth H776 were finished H3615 , and all H3605 the host H6635 of them.
|
2. ಏಳನೆಯ ದಿನದಲ್ಲಿ ದೇವರು ತಾನು ಮಾಡಿದ್ದ ತನ್ನ ಕೆಲಸವನ್ನು ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ತಾನು ಮಾಡಿದ್ದ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು.
|
2. And on the seventh H7637 day H3117 God H430 ended H3615 his work H4399 which H834 he had made H6213 ; and he rested H7673 on the seventh H7637 day H3117 from all H4480 H3605 his work H4399 which H834 he had made H6213 .
|
3. ದೇವರು ಏಳನೆಯ ದಿನವನ್ನು ಆಶೀರ್ವದಿಸಿ ಅದನ್ನು ಪವಿತ್ರಮಾಡಿದನು; ಯಾಕಂ ದರೆ ಆ ದಿನದಲ್ಲಿ ತಾನು ಸೃಷ್ಟಿಸಿದ ಮತ್ತು ಮಾಡಿದ ತನ್ನ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು.
|
3. And God H430 blessed H1288 H853 the seventh H7637 day H3117 , and sanctified H6942 it: because H3588 that in it he had rested H7673 from all H4480 H3605 his work H4399 which H834 God H430 created H1254 and made H6213 .
|
4. ಇದೇ ಭೂಮ್ಯಾಕಾಶಗಳ ನಿರ್ಮಾಣಚರಿತ್ರೆ.
|
4. These H428 are the generations H8435 of the heavens H8064 and of the earth H776 when they were created H1254 , in the day H3117 that the LORD H3068 God H430 made H6213 the earth H776 and the heavens H8064 ,
|
5. ಕರ್ತನಾದ ದೇವರು ಭೂಮಿಯನ್ನೂ ಆಕಾಶಗಳನ್ನೂ ಉಂಟು ಮಾಡಿದ ದಿನದಲ್ಲಿ ಹೊಲದ ಯಾವ ಗಿಡವಾದರೂ ಭೂಮಿಯಲ್ಲಿ ಇನ್ನೂ ಬೆಳೆದಿರಲಿಲ್ಲ; ಹೊಲದ ಯಾವ ಪಲ್ಯವಾದರೂ ಇನ್ನೂ ಮೊಳೆತಿರಲಿಲ್ಲ; ಯಾಕಂದರೆ ಕರ್ತನಾದ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ; ಭೂಮಿಯನ್ನು ವ್ಯವಸಾಯ ಮಾಡು ವದಕ್ಕೆ ಮನುಷ್ಯನು ಇರಲಿಲ್ಲ.
|
5. And every H3605 plant H7880 of the field H7704 before H2962 it was H1961 in the earth H776 , and every H3605 herb H6212 of the field H7704 before H2962 it grew H6779 : for H3588 the LORD H3068 God H430 had not H3808 caused it to rain H4305 upon H5921 the earth H776 , and there was not H369 a man H120 to till H5647 H853 the ground H127 .
|
6. ಆದರೆ ಭೂಮಿ ಯೊಳಗಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು.
|
6. But there went up H5927 a mist H108 from H4480 the earth H776 , and watered H8248 H853 the whole H3605 face H6440 of the ground H127 .
|
7. ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು; ಆಗ ಮನುಷ್ಯನು ಜೀವಾತ್ಮ ನಾದನು.
|
7. And the LORD H3068 God H430 formed H3335 H853 man H120 of the dust H6083 of H4480 the ground H127 , and breathed H5301 into his nostrils H639 the breath H5397 of life H2416 ; and man H120 became H1961 a living H2416 soul H5315 .
|
8. ಕರ್ತನಾದ ದೇವರು ಏದೆನಿನಲ್ಲಿ ಪೂರ್ವ ದಿಕ್ಕಿಗೆ ತೋಟವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು.
|
8. And the LORD H3068 God H430 planted H5193 a garden H1588 eastward H4480 H6924 in Eden H5731 ; and there H8033 he put H7760 H853 the man H120 whom H834 he had formed H3335 .
|
9. ಕರ್ತನಾದ ದೇವರು ನೋಟಕ್ಕೆ ರಮ್ಯವಾದ ಮತ್ತು ಊಟಕ್ಕೆ ಒಳ್ಳೇದಾದ ಎಲ್ಲಾ ಮರಗಳನ್ನು, ತೋಟದ ಮಧ್ಯದಲ್ಲಿ ಜೀವದ ಮರವನ್ನು, ಒಳ್ಳೇದರ ಕೆಟ್ಟದರ ತಿಳುವಳಿಕೆಯ ಮರವನ್ನು ಭೂಮಿಯೊಳಗಿಂದ ಬೆಳೆಯಿಸಿದನು.
|
9. And out of H4480 the ground H127 made the LORD H3068 God H430 to grow H6779 every H3605 tree H6086 that is pleasant H2530 to the sight H4758 , and good H2896 for food H3978 ; the tree H6086 of life H2416 also in the midst H8432 of the garden H1588 , and the tree H6086 of knowledge H1847 of good H2896 and evil H7451 .
|
10. ತೋಟವನ್ನು ತೋಯಿಸುವದಕ್ಕಿರುವ ನದಿಯು ಏದೆನಿನೊಳಗಿಂದ ಹೊರಟು ಅಲ್ಲಿಂದ ಭಾಗವಾಗಿ ನಾಲ್ಕು ಶಾಖೆಗಳಾಯಿತು.
|
10. And a river H5104 went out H3318 of Eden H4480 H5731 to water H8248 H853 the garden H1588 ; and from thence H4480 H8033 it was parted H6504 , and became H1961 into four H702 heads H7218 .
|
11. ಮೊದಲನೆಯದರ ಹೆಸರು ಪೀಶೋನ್; ಅದು ಹವೀಲ ದೇಶವನ್ನೆಲ್ಲಾ ಸುತ್ತುವದು; ಅದರಲ್ಲಿ ಬಂಗಾರವಿದೆ.
|
11. The name H8034 of the first H259 is Pison H6376 : that is it H1931 which compasseth H5437 H853 the whole H3605 land H776 of Havilah H2341 , where H834 H8033 there is gold H2091 ;
|
12. ಆ ದೇಶದ ಬಂಗಾರವು ಉತ್ತಮವಾದದ್ದು; ಅದರಲ್ಲಿ ಬದೋಲಖ ಮತ್ತು ಗೋಮೇಧಿಕ ಕಲ್ಲು ಇದೆ.
|
12. And the gold H2091 of that H1931 land H776 is good H2896 : there H8033 is bdellium H916 and the onyx H7718 stone H68 .
|
13. ಎರಡನೆಯ ನದಿಯ ಹೆಸರು ಗೀಹೋನ್; ಅದು ಕೂಷ್ ದೇಶವನ್ನೆಲ್ಲಾ ಸುತ್ತುವದು.
|
13. And the name H8034 of the second H8145 river H5104 is Gihon H1521 : the same H1931 is it that compasseth H5437 H853 the whole H3605 land H776 of Ethiopia H3568 .
|
14. ಮೂರನೆಯ ನದಿಯ ಹೆಸರು ಹಿದ್ದೆಕೆಲ್; ಅದು ಅಶ್ಶೂರದ ಪೂರ್ವದ ಕಡೆಗೆ ಹರಿಯುವದು. ನಾಲ್ಕನೆಯ ನದಿಯು ಯೂಫ್ರೇಟೀಸ್.
|
14. And the name H8034 of the third H7992 river H5104 is Hiddekel H2313 : that is it H1931 which goeth H1980 toward the east H6926 of Assyria H804 . And the fourth H7243 river H5104 is Euphrates H6578 .
|
15. ಆಗ ಕರ್ತನಾದ ದೇವರು ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ತೋಟ ವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು.
|
15. And the LORD H3068 God H430 took H3947 H853 the man H120 , and put H5117 him into the garden H1588 of Eden H5731 to dress H5647 it and to keep H8104 it.
|
16. ದೇವರಾದ ಕರ್ತನು ಮನುಷ್ಯ ನಿಗೆ ಆಜ್ಞಾಪಿಸಿದ್ದೇನಂದರೆ--ನೀನು ತೋಟದ ಎಲ್ಲಾ ಮರಗಳ ಫಲವನ್ನು ಯಥೇಚ್ಛವಾಗಿ ತಿನ್ನಬಹುದು;
|
16. And the LORD H3068 God H430 commanded H6680 H5921 the man H120 , saying H559 , Of every H4480 H3605 tree H6086 of the garden H1588 thou mayest freely eat H398 H398 :
|
17. ಆದರೆ ಒಳ್ಳೇದು ಕೆಟ್ಟದರ ತಿಳುವಳಿಕೆಯನ್ನುಂಟು ಮಾಡುವ ಮರದ ಫಲವನ್ನು ನೀನು ತಿನ್ನಬಾರದು; ಅದನ್ನು ತಿಂದ ದಿನದಲ್ಲಿ ಖಂಡಿತವಾಗಿ ಸಾಯುವಿ ಅಂದನು.
|
17. But of the tree H4480 H6086 of the knowledge H1847 of good H2896 and evil H7451 , thou shalt not H3808 eat H398 of H4480 it: for H3588 in the day H3117 that thou eatest H398 thereof H4480 thou shalt surely die H4191 H4191 .
|
18. ಕರ್ತನಾದ ದೇವರು--ಮನುಷ್ಯನು ಒಂಟಿಯಾ ಗಿರುವದು ಒಳ್ಳೆಯದಲ್ಲ; ಅವನಿಗೆ ತಕ್ಕ ಸಹಕಾರಿಯನ್ನು ಮಾಡುವೆನು ಅಂದನು.
|
18. And the LORD H3068 God H430 said H559 , It is not H3808 good H2896 that the man H120 should be H1961 alone H905 ; I will make H6213 him a help H5828 meet for him H5048 .
|
19. ಇದಲ್ಲದೆ ಕರ್ತನಾದ ದೇವರು ಅಡವಿಯ ಎಲ್ಲಾ ಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿ ಅವುಗಳಿಗೆ ಆದಾಮನು ಏನು ಹೆಸರಿಡುವನೋ ಎಂದು ನೋಡು ವದಕ್ಕೆ ಅವನ ಬಳಿಗೆ ಬರಮಾಡಿದನು. ಆದಾಮನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು.
|
19. And out of H4480 the ground H127 the LORD H3068 God H430 formed H3335 every H3605 beast H2416 of the field H7704 , and every H3605 fowl H5775 of the air H8064 ; and brought H935 them unto H413 Adam H121 to see H7200 what H4100 he would call H7121 them : and whatsoever H3605 H834 Adam H121 called H7121 every living H2416 creature H5315 , that H1931 was the name H8034 thereof.
|
20. ಆದಾ ಮನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಅಡವಿಯ ಎಲ್ಲಾ ಮೃಗಗಳಿಗೂ ಹೆಸರಿಟ್ಟನು, ಆದರೆ ಆದಾಮನಿಗೆ ತಕ್ಕ ಸಹಕಾರಿ ಸಿಗಲಿಲ್ಲ.
|
20. And Adam H121 gave H7121 names H8034 to all H3605 cattle H929 , and to the fowl H5775 of the air H8064 , and to every H3605 beast H2416 of the field H7704 ; but for Adam H121 there was not H3808 found H4672 a help H5828 meet for him H5048 .
|
21. ಕರ್ತನಾದ ದೇವರು ಆದಾಮನಿಗೆ ಗಾಢನಿದ್ರೆ ಬರಮಾಡಿದ್ದರಿಂದ ಅವನು ನಿದ್ರೆಮಾಡಿದನು; ಆಗ ಆತನು ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತಕ್ಕೊಂಡು ಅದಕ್ಕೆ ಬದಲಾಗಿ ಮಾಂಸವನ್ನು ಮುಚ್ಚಿದನು.
|
21. And the LORD H3068 God H430 caused a deep sleep H8639 to fall H5307 upon H5921 Adam H121 , and he slept H3462 : and he took H3947 one H259 of his ribs H4480 H6763 , and closed up H5462 the flesh H1320 instead H8478 thereof;
|
22. ಕರ್ತನಾದ ದೇವರು ಮನುಷ್ಯನಿಂದ ತಕ್ಕೊಂಡ ಪಕ್ಕೆಯ ಎಲು ಬನ್ನು ಸ್ತ್ರೀಯಾಗಮಾಡಿ ಅವಳನ್ನು ಅವನ ಬಳಿಗೆ ತಂದನು.
|
22. And H853 the rib H6763 , which H834 the LORD H3068 God H430 had taken H3947 from H4480 man H120 , made H1129 he a woman H802 , and brought H935 her unto H413 the man H120 .
|
23. ಆಗ ಆದಾಮನು--ಇವಳು ಈಗ ನನ್ನ ಎಲುಬುಗಳ ಎಲುಬೂ ನನ್ನ ಮಾಂಸದ ಮಾಂಸವೂ ಆಗಿದ್ದಾಳೆ; ಇವಳು ನರನಿಂದ ತೆಗೆಯ ಲ್ಪಟ್ಟದ್ದರಿಂದ ನಾರಿಯೆಂದು ಕರೆಯಲ್ಪಡುವಳು ಅಂದನು.
|
23. And Adam H121 said H559 , This H2063 is now H6471 bone H6106 of my bones H4480 H6106 , and flesh H1320 of my flesh H4480 H1320 : she H2063 shall be called H7121 Woman H802 , because H3588 she H2063 was taken H3947 out of Man H4480 H376 .
|
24. ಆದದರಿಂದ ಮನುಷ್ಯನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರು ಒಂದೇ ಶರೀರ ವಾಗಿರುವರು.
|
24. Therefore H5921 H3651 shall a man H376 leave H5800 H853 his father H1 and his mother H517 , and shall cleave H1692 unto his wife H802 : and they shall be H1961 one H259 flesh H1320 .
|
25. ಇದಲ್ಲದೆ ಆ ಮನುಷ್ಯನು ಅವನ ಹೆಂಡತಿಯು ಇಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.
|
25. And they were H1961 both H8147 naked H6174 , the man H120 and his wife H802 , and were not H3808 ashamed H954 .
|