|
|
1. ಆಗ ಕರ್ತನು ಅಬ್ರಾಮನಿಗೆ--ನೀನು ನಿನ್ನ ದೇಶದೊಳಗಿಂದಲೂ ಬಂಧು ಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರ ಬಂದು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು.
|
1. Now the LORD H3068 had said H559 unto H413 Abram H87 , Get thee out H1980 of thy country H4480 H776 , and from thy kindred H4480 H4138 , and from thy father's house H4480 H1004 H1 , unto H413 a land H776 that H834 I will show H7200 thee:
|
2. ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ.
|
2. And I will make H6213 of thee a great H1419 nation H1471 , and I will bless H1288 thee , and make thy name great H1431 H8034 ; and thou shalt be H1961 a blessing H1293 :
|
3. ನಿನ್ನನ್ನು ಆಶೀರ್ವದಿಸುವವರನ್ನು ಆಶೀರ್ವದಿಸು ವೆನು. ನಿನ್ನನ್ನು ಶಪಿಸುವವರನ್ನು ಶಪಿಸುವೆನು; ನಿನ್ನಲ್ಲಿ ಭೂಮಿಯ ಎಲ್ಲಾ ಜನಾಂಗಗಳು ಆಶೀರ್ವದಿಸಲ್ಪಡು ವವು ಎಂದು ಹೇಳಿದನು.
|
3. And I will bless H1288 them that bless H1288 thee , and curse H779 him that curseth H7043 thee : and in thee shall all H3605 families H4940 of the earth H127 be blessed H1288 .
|
4. ಹೀಗೆ ಕರ್ತನು ತನಗೆ ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನಿ ನಿಂದ ಹೊರಟಾಗ ಎಪ್ಪತ್ತೈದು ವರುಷದವನಾಗಿದ್ದನು.
|
4. So Abram H87 departed H1980 , as H834 the LORD H3068 had spoken H1696 unto H413 him ; and Lot H3876 went H1980 with H854 him : and Abram H87 was seventy H7657 and five H2568 years H8141 old H1121 when he departed H3318 out of Haran H4480 H2771 .
|
5. ಇದಲ್ಲದೆ ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ಸಹೋದರನ ಮಗನಾದ ಲೋಟ ನನ್ನೂ ಅವರು ಕೂಡಿಸಿಕೊಂಡಿದ್ದ ಎಲ್ಲಾ ಸಂಪತ್ತನ್ನೂ ಹಾರಾನಿನಲ್ಲಿ ಅವರು ಸಂಪಾದಿಸಿಕೊಂಡವರನ್ನೂ ತಮ್ಮ ಸಂಗಡ ಕರಕೊಂಡು ಕಾನಾನ್ ದೇಶಕ್ಕೆ ಹೊರಟು ಅವರು ಕಾನಾನ್ ದೇಶಕ್ಕೆ ಬಂದರು.
|
5. And Abram H87 took H3947 H853 Sarai H8297 his wife H802 , and Lot H3876 his brother H251 's son H1121 , and all H3605 their substance H7399 that H834 they had gathered H7408 , and the souls H5315 that H834 they had gotten H6213 in Haran H2771 ; and they went forth H3318 to go H1980 into the land H776 of Canaan H3667 ; and into the land H776 of Canaan H3667 they came H935 .
|
6. ಅಬ್ರಾಮನು ಆ ದೇಶದಲ್ಲಿ ಶೆಕೆಮ್ ಎಂಬ ಸ್ಥಳದ ಮೋರೆಯೆಂಬ ಮೈದಾನದ ವರೆಗೆ ಹಾದು ಹೋದನು. ಆಗ ಕಾನಾನ್ಯರು ದೇಶದಲ್ಲಿ ಇದ್ದರು.
|
6. And Abram H87 passed through H5674 the land H776 unto H5704 the place H4725 of Sichem H7927 , unto H5704 the plain H436 of Moreh H4176 . And the Canaanite H3669 was then H227 in the land H776 .
|
7. ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಿನ್ನ ಸಂತತಿಗೆ ನಾನು ಈ ದೇಶವನ್ನು ಕೊಡುವೆನು ಅಂದನು. ಆಗ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಕರ್ತನಿಗೆ ಬಲಿಪೀಠವನ್ನು ಕಟ್ಟಿದನು.
|
7. And the LORD H3068 appeared H7200 unto H413 Abram H87 , and said H559 , Unto thy seed H2233 will I give H5414 H853 this H2063 land H776 : and there H8033 built H1129 he an altar H4196 unto the LORD H3068 , who appeared H7200 unto H413 him.
|
8. ಅಲ್ಲಿಂದ ಅವನು ಬೇತೇಲಿನ ಪೂರ್ವದ ಬೆಟ್ಟಕ್ಕೆ ಹೋಗಿ ಪಶ್ಚಿಮದಲ್ಲಿ ಬೇತೇಲು ಪೂರ್ವದಲ್ಲಿ ಆಯಿಯು ಇರುವ ಹಾಗೆ ತನ್ನ ಗುಡಾರವನ್ನು ಹಾಕಿ ಅಲ್ಲಿ ಕರ್ತನಿಗೆ ಬಲಿಪೀಠವನ್ನು ಕಟ್ಟಿ ಕರ್ತನ ಹೆಸರನ್ನು ಹೇಳಿಕೊಂಡನು.
|
8. And he removed H6275 from thence H4480 H8033 unto a mountain H2022 on the east H4480 H6924 of Bethel H1008 , and pitched H5186 his tent H168 , having Bethel H1008 on the west H4480 H3220 , and Hai H5857 on the east H4480 H6924 : and there H8033 he built H1129 an altar H4196 unto the LORD H3068 , and called H7121 upon the name H8034 of the LORD H3068 .
|
9. ಅಬ್ರಾಮನು ಪ್ರಯಾಣ ಮಾಡಿ ದಕ್ಷಿಣದ ಕಡೆಗೆ ಇನ್ನೂ ಹೋಗುತ್ತಲೇ ಇದ್ದನು.
|
9. And Abram H87 journeyed H5265 , going on H1980 still H5265 toward the south H5045 .
|
10. ಆಗ ಆ ದೇಶದಲ್ಲಿ ಬರ ಉಂಟಾದದ್ದರಿಂದ ಅಬ್ರಾಮನು ಐಗುಪ್ತದಲ್ಲಿ ಪ್ರವಾಸಿಯಾಗಿರುವದಕ್ಕೆ ಇಳಿದು ಹೋದನು. ಯಾಕಂದರೆ ಬರವು ಆ ದೇಶದಲ್ಲಿ ಘೋರವಾಗಿತ್ತು.
|
10. And there was H1961 a famine H7458 in the land H776 : and Abram H87 went down H3381 into Egypt H4714 to sojourn H1481 there H8033 ; for H3588 the famine H7458 was grievous H3515 in the land H776 .
|
11. ಇದಾದ ಮೇಲೆ ಅವನು ಐಗುಪ್ತದ ಸವಿಾಪಕ್ಕೆ ಬಂದಾಗ ತನ್ನ ಹೆಂಡತಿಯಾದ ಸಾರಯಳಿಗೆ--ಇಗೋ, ನೀನು ನೋಡುವದಕ್ಕೆ ರೂಪವತಿ ಎಂದು ನನಗೆ ತಿಳಿದಿದೆ.
|
11. And it came to pass H1961 , when H834 he was come near H7126 to enter H935 into Egypt H4714 , that he said H559 unto H413 Sarai H8297 his wife H802 , Behold H2009 now H4994 , I know H3045 that H3588 thou H859 art a fair H3303 woman H802 to look upon H4758 :
|
12. ಹೀಗಿರುವದರಿಂದ ಐಗುಪ್ತ್ಯರು ನಿನ್ನನ್ನು ನೋಡಿ--ಈಕೆಯು ಅವನ ಹೆಂಡತಿ ಎಂದು ಹೇಳುವರು. ನನ್ನನ್ನು ಕೊಂದುಹಾಕಿ ನಿನ್ನನ್ನು ಜೀವದಲ್ಲಿ ಉಳಿಸುವರು.
|
12. Therefore it shall come to pass H1961 , when H3588 the Egyptians H4713 shall see H7200 thee , that they shall say H559 , This H2063 is his wife H802 : and they will kill H2026 me , but they will save thee alive H2421 .
|
13. ನಿನ್ನ ದೆಸೆಯಿಂದ ನನಗೆ ಒಳ್ಳೆಯದಾಗಿ ನನ್ನ ಪ್ರಾಣವು ಉಳಿಯುವಂತೆ ನೀನು ನನ್ನ ಸಹೋದರಿ ಎಂದು ಹೇಳಬೇಕು ಎಂದು ಕೇಳಿಕೊಳ್ಳುತ್ತೇನೆ ಅಂದನು.
|
13. Say H559 , I pray thee H4994 , thou H859 art my sister H269 : that H4616 it may be well H3190 with me for thy sake H5668 ; and my soul H5315 shall live H2421 because of H1558 thee.
|
14. ಇದಾದ ಮೇಲೆ ಅಬ್ರಾಮನು ಐಗುಪ್ತಕ್ಕೆ ಬಂದಾಗ ಐಗುಪ್ತ್ಯರು ಆ ಸ್ತ್ರೀಯು ಬಹಳ ಸೌಂದರ್ಯ ವುಳ್ಳವಳೆಂದು ನೋಡಿದರು.
|
14. And it came to pass H1961 , that , when Abram H87 was come H935 into Egypt H4714 , the Egyptians H4713 beheld H7200 H853 the woman H802 that H3588 she H1931 was very H3966 fair H3303 .
|
15. ಫರೋಹನ ಪ್ರಧಾ ನರು ಸಹ ಆಕೆಯನ್ನು ನೋಡಿ ಫರೋಹನ ಮುಂದೆ ಆಕೆಯನ್ನು ಹೊಗಳಲಾಗಿ ಆ ಸ್ತ್ರೀಯು ಫರೋಹನ ಮನೆಗೆ ಒಯ್ಯಲ್ಪಟ್ಟಳು.
|
15. The princes H8269 also of Pharaoh H6547 saw H7200 her , and commended H1984 her before H413 Pharaoh H6547 : and the woman H802 was taken H3947 into Pharaoh H6547 's house H1004 .
|
16. ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೇದನ್ನು ಮಾಡಿದನು. ಅವನಿಗೆ ಕುರಿಗಳೂ ಎತ್ತುಗಳೂ ಕತ್ತೆಗಳೂ ದಾಸರೂ ದಾಸಿ ಯರೂ ಹೆಣ್ಣುಕತ್ತೆಗಳೂ ಒಂಟೆಗಳೂ ದೊರೆತವು.
|
16. And he entreated Abram well H3190 H87 for her sake H5668 : and he had H1961 sheep H6629 , and oxen H1241 , and he asses H2543 , and menservants H5650 , and maidservants H8198 , and she asses H860 , and camels H1581 .
|
17. ಆದರೆ ಕರ್ತನು ಫರೋಹನನ್ನೂ ಅವನ ಮನೆ ಯನ್ನೂ ಅಬ್ರಾಮನ ಹೆಂಡತಿಯಾದ ಸಾರಯಳಿಗಾಗಿ ಮಹಾಬಾಧೆಗಳಿಂದ ಬಾಧಿಸಿದನು.
|
17. And the LORD H3068 plagued H5060 H853 Pharaoh H6547 and his house H1004 with great H1419 plagues H5061 because of H5921 H1697 Sarai H8297 Abram H87 's wife H802 .
|
18. ಆಗ ಫರೋ ಹನು ಅಬ್ರಾಮನನ್ನು ಕರೆಯಿಸಿ--ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿಯೆಂದು ಯಾಕೆ ತಿಳಿಸಲಿಲ್ಲ?
|
18. And Pharaoh H6547 called H7121 Abram H87 , and said H559 , What H4100 is this H2063 that thou hast done H6213 unto me? why H4100 didst thou not H3808 tell H5046 me that H3588 she H1931 was thy wife H802 ?
|
19. ನೀನು--ಆಕೆಯು ನನ್ನ ಸಹೋ ದರಿ ಎಂದು ಯಾಕೆ ಹೇಳಿದೆ? ನೀನು ಹಾಗೆ ಹೇಳಿದ್ದರಿಂದ ಆಕೆಯನ್ನು ನನಗೆ ಹೆಂಡತಿಯಾಗಿ ಇಟ್ಟುಕೊಳ್ಳುವದಕ್ಕಿದ್ದೆನು. ಆದರೆ ಈಗ ಇಗೋ, ನಿನ್ನ ಹೆಂಡತಿ; ಆಕೆಯನ್ನು ತೆಗೆದುಕೊಂಡು ಹೋಗು ಅಂದನು.
|
19. Why H4100 saidst H559 thou, She H1931 is my sister H269 ? so I might have taken H3947 her to me to wife H802 : now therefore H6258 behold H2009 thy wife H802 , take H3947 her , and go thy way H1980 .
|
20. ಫರೋಹನು ತನ್ನ ಜನರಿಗೆ ಅವನ ವಿಷಯದಲ್ಲಿ ಅಪ್ಪಣೆಕೊಟ್ಟು ಅವರು ಅವನನ್ನೂ ಅವನ ಹೆಂಡತಿಯನ್ನೂ ಅವನಿಗೆ ಇದ್ದದ್ದೆಲ್ಲವನ್ನೂ ಕಳುಹಿಸಿಬಿಟ್ಟರು.
|
20. And Pharaoh H6547 commanded H6680 his men H376 concerning H5921 him : and they sent him away H7971 H853 , and his wife H802 , and all H3605 that H834 he had.
|