|
|
1. ಆಗ ಕರ್ತನು ಮಾತನಾಡಿ ಮೋಶೆಗೆ--
|
1. And the LORD H3068 spoke H1696 unto H413 Moses H4872 , saying H559 ,
|
2. ನನಗೆ ಕಾಣಿಕೆಗಳನ್ನು ತಕ್ಕೊಂಡು ಬರು ವಂತೆ ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡು; ಮನಃಪೂರ್ವಕವಾಗಿಯೂ ಹೃದಯಪೂರ್ವಕವಾ ಗಿಯೂ ಕೊಡುವ ನನ್ನ ಕಾಣಿಕೆಯನ್ನು ನೀವು ತೆಗೆದು ಕೊಳ್ಳಬೇಕು.
|
2. Speak H1696 unto H413 the children H1121 of Israel H3478 , that they bring H3947 me an offering H8641 : of H4480 H854 every H3605 man H376 that H834 giveth it willingly H5068 with his heart H3820 ye shall take H3947 H853 my offering H8641 .
|
3. ನೀವು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: ಚಿನ್ನ ಬೆಳ್ಳಿ ತಾಮ್ರ
|
3. And this H2063 is the offering H8641 which H834 ye shall take H3947 of H4480 H854 them; gold H2091 , and silver H3701 , and brass H5178 ,
|
4. ನೀಲಿ ರಕ್ತವರ್ಣ ಲಾಕಿಬಣ್ಣ ನಾರು ಮೇಕೆಯ ಕೂದಲು
|
4. And blue H8504 , and purple H713 , and scarlet H8438 H8144 , and fine linen H8336 , and goats H5795 ' hair ,
|
5. ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು ಕಡಲು ಹಂದಿಯ ಚರ್ಮಗಳು ಜಾಲಿ ಮರಗಳು.
|
5. And rams H352 ' skins H5785 dyed red H119 , and badgers H8476 ' skins H5785 , and shittim H7848 wood H6086 ,
|
6. ದೀಪಕ್ಕಾಗಿ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರವೂ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳೂ
|
6. Oil H8081 for the light H3974 , spices H1314 for anointing H4888 oil H8081 , and for sweet H5561 incense H7004 ,
|
7. ಎಫೋದಿ ಗಾಗಿ ಮತ್ತು ಪದಕಕ್ಕಾಗಿ ಗೋಮೇಧಿಕಗಳೂ ಕೆತ್ತಿದ ರತ್ನಗಳೂ ಇವೇ.
|
7. Onyx H7718 stones H68 , and stones H68 to be set H4394 in the ephod H646 , and in the breastplate H2833 .
|
8. ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.
|
8. And let them make H6213 me a sanctuary H4720 ; that I may dwell H7931 among H8432 them.
|
9. ಗುಡಾರದ ಮಾದರಿಯನ್ನೂ ಅದರ ಎಲ್ಲಾ ಸಾಮಾನುಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.
|
9. According to all H3605 that H834 I H589 show H7200 thee, after H853 the pattern H8403 of the tabernacle H4908 , and the pattern H8403 of all H3605 the instruments H3627 thereof , even so H3651 shall ye make H6213 it .
|
10. ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು.
|
10. And they shall make H6213 an ark H727 of shittim H7848 wood H6086 : two cubits H520 and a half H2677 shall be the length H753 thereof , and a cubit H520 and a half H2677 the breadth H7341 thereof , and a cubit H520 and a half H2677 the height H6967 thereof.
|
11. ಅದನ್ನು ಶುದ್ಧ ಬಂಗಾರದಿಂದ ಹೊರಗೂ ಒಳಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ಗೋಟು ಮಾಡಬೇಕು.
|
11. And thou shalt overlay H6823 it with pure H2889 gold H2091 , within H4480 H1004 and without H4480 H2351 shalt thou overlay H6823 it , and shalt make H6213 upon H5921 it a crown H2213 of gold H2091 round about H5439 .
|
12. ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.
|
12. And thou shalt cast H3332 four H702 rings H2885 of gold H2091 for it , and put H5414 them in H5921 the four H702 corners H6471 thereof ; and two H8147 rings H2885 shall be in H5921 the one H259 side H6763 of it , and two H8147 rings H2885 in H5921 the other H8145 side H6763 of it.
|
13. ಜಾಲೀ ಮರದ ಕೋಲುಗಳನ್ನು ಬಂಗಾರದಿಂದ ಹೊದಿಸ ಬೇಕು,
|
13. And thou shalt make H6213 staves H905 of shittim H7848 wood H6086 , and overlay H6823 them with gold H2091 .
|
14. ಮಂಜೂಷವನ್ನು ಹೊತ್ತುಕೊಂಡು ಹೋಗು ವದಕ್ಕಾಗಿ ಕೋಲುಗಳನ್ನು ಮಂಜೂಷದ ಉಭಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
|
14. And thou shalt put H935 H853 the staves H905 into the rings H2885 by H5921 the sides H6763 of the ark H727 , that H853 the ark H727 may be borne H5375 with them.
|
15. ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡ ಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯ ಬಾರದು.
|
15. The staves H905 shall be H1961 in the rings H2885 of the ark H727 : they shall not H3808 be taken H5493 from H4480 it.
|
16. ನಾನು ನಿನಗೆ ಕೊಡುವ ಸಾಕ್ಷಿಯ ಹಲಗೆ ಗಳನ್ನು ಮಂಜೂಷದಲ್ಲಿ ಇಡಬೇಕು.
|
16. And thou shalt put H5414 into H413 the ark H727 H853 the testimony H5715 which H834 I shall give H5414 H413 thee.
|
17. ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು.
|
17. And thou shalt make H6213 a mercy seat H3727 of pure H2889 gold H2091 : two cubits H520 and a half H2677 shall be the length H753 thereof , and a cubit H520 and a half H2677 the breadth H7341 thereof.
|
18. ಬಂಗಾರದಿಂದ ಎರಡು ಕೆರೂಬಿಗಳನ್ನು ನಕ್ಷೆಯ ಕೆಲಸದಿಂದ ಕರುಣಾ ಸನದ ಎರಡು ಬದಿಗಳಲ್ಲಿ ಮಾಡಿಸಬೇಕು.
|
18. And thou shalt make H6213 two H8147 cherubims H3742 of gold H2091 , of beaten work H4749 shalt thou make H6213 them , in the two H4480 H8147 ends H7098 of the mercy seat H3727 .
|
19. ಈ ಬದಿಯಲ್ಲಿ ಒಂದು ಕೆರೂಬಿಯನ್ನೂ ಆ ಬದಿಯಲ್ಲಿ ಮತ್ತೊಂದು ಕೆರೂಬಿಯನ್ನೂ ಹೀಗೆ ಕರುಣಾಸನದ ಮೇಲೆಯೇ ಎರಡೂ ಬದಿಗಳಲ್ಲಿ ಮಾಡಬೇಕು.
|
19. And make H6213 one H259 cherub H3742 on the one end H4480 H2088 H4480 H7098 , and the other H259 cherub H3742 on the other end H4480 H2088 H4480 H7098 : even of H4480 the mercy seat H3727 shall ye make H6213 H853 the cherubims H3742 on H5921 the two H8147 ends H7098 thereof.
|
20. ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿದವುಗ ಳಾಗಿಯೂ ರೆಕ್ಕೆಗಳಿಂದ ಕರುಣಾಸನವನ್ನು ಮುಚ್ಚುವವು ಗಳಾಗಿಯೂ ಒಂದರ ಮುಖವನ್ನು ಒಂದು ನೋಡು ವವುಗಳಾಗಿಯೂ ಇರಬೇಕು. ಕೆರೂಬಿಗಳ ಮುಖಗಳು ಕರುಣಾಸನದ ಕಡೆಗೆ ತಿರುಗಿರಬೇಕು.
|
20. And the cherubims H3742 shall H1961 stretch forth H6566 their wings H3671 on high H4605 , covering H5526 H5921 the mercy seat H3727 with their wings H3671 , and their faces H6440 shall look one H376 to H413 another H251 ; toward H413 the mercy seat H3727 shall the faces H6440 of the cherubims H3742 be H1961 .
|
21. ಕರುಣಾಸನ ವನ್ನು ಮಂಜೂಷದ ಮೇಲೆ ಇಡಬೇಕು ಮತ್ತು ನೀನು ಮಂಜೂಷದಲ್ಲಿ ನಾನು ನಿನಗೆ ಕೊಡುವ ಸಾಕ್ಷಿ ಹಲಗೆಗಳನ್ನು ಇಡಬೇಕು.
|
21. And thou shalt put H5414 H853 the mercy seat H3727 above H4480 H4605 upon H5921 the ark H727 ; and in H413 the ark H727 thou shalt put H5414 H853 the testimony H5715 that H834 I shall give H5414 H413 thee.
|
22. ನಾನು ಅಲ್ಲಿ ನಿನ್ನನ್ನು ಸಂಧಿಸಿ ಕರುಣಾಸನದ ಮೇಲಿನಿಂದ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲ್ ಮಕ್ಕಳ ವಿಷಯದಲ್ಲಿ ಆಜ್ಞಾಪಿಸುವವು ಗಳನ್ನೆಲ್ಲಾ ನಿನಗೆ ತಿಳಿಸುವೆನು.
|
22. And there H8033 I will meet H3259 with thee , and I will commune H1696 with H854 thee from above H4480 H5921 the mercy seat H3727 , from between H4480 H996 the two H8147 cherubims H3742 which H834 are upon H5921 the ark H727 of the testimony H5715 , H853 of all H3605 things which H834 I will give thee in commandment H6680 H853 unto H413 the children H1121 of Israel H3478 .
|
23. ಇದಲ್ಲದೆ ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮೇಜನ್ನು ಜಾಲೀ ಮರದಿಂದ ಮಾಡಬೇಕು.
|
23. Thou shalt also make H6213 a table H7979 of shittim H7848 wood H6086 : two cubits H520 shall be the length H753 thereof , and a cubit H520 the breadth H7341 thereof , and a cubit H520 and a half H2677 the height H6967 thereof.
|
24. ಶುದ್ಧ ಬಂಗಾರದಿಂದ ಅದನ್ನು ಹೊದಿಸಿ ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು.
|
24. And thou shalt overlay H6823 it with pure H2889 gold H2091 , and make H6213 thereto a crown H2213 of gold H2091 round about H5439 .
|
25. ಅದರ ಸುತ್ತಲೂ ಗೇಣುದ್ದ ಅಂಚನ್ನು ಮಾಡಿ ಅಂಚಿನ ಸುತ್ತಲೂ ಬಂಗಾರದ ಗೋಟನ್ನು ಮಾಡ ಬೇಕು.
|
25. And thou shalt make H6213 unto it a border H4526 of a handbreadth H2948 round about H5439 , and thou shalt make H6213 a golden H2091 crown H2213 to the border H4526 thereof round about H5439 .
|
26. ಇದಲ್ಲದೆ ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಬಳೆಗಳನ್ನು ಅದರ ನಾಲ್ಕು ಕಾಲು ಗಳಲ್ಲಿರುವ ನಾಲ್ಕು ಮೂಲೆಗಳಲ್ಲಿಡಬೇಕು.
|
26. And thou shalt make H6213 for it four H702 rings H2885 of gold H2091 , and put H5414 H853 the rings H2885 in H5921 the four H702 corners H6285 that H834 are on the four H702 feet H7272 thereof.
|
27. ಅಂಚಿಗೆ ಸವಿಾಪವಾಗಿ ಮೇಜನ್ನು ಹೊರುವದಕ್ಕೋಸ್ಕರ ಇರುವ ಕೋಲುಗಳಿಗೆ ಬಳೆಗಳು ಇರಬೇಕು.
|
27. Over against H5980 the border H4526 shall the rings H2885 be H1961 for places H1004 of the staves H905 to bear H5375 H853 the table H7979 .
|
28. ಮೇಜನ್ನು ಹೊರುವದಕ್ಕಾಗಿ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು.
|
28. And thou shalt make H6213 H853 the staves H905 of shittim H7848 wood H6086 , and overlay H6823 them with gold H2091 , that H853 the table H7979 may be borne H5375 with them.
|
29. ಇದಲ್ಲದೆ ನೀನು ಪಾತ್ರೆಗಳನ್ನೂ ಸೌಟುಗಳನ್ನೂ ಮುಚ್ಚಳಗಳನ್ನೂ ಬಟ್ಟಲುಗಳನ್ನೂ ಒಯ್ಯುವದಕ್ಕೋಸ್ಕರ ಶುದ್ಧ ಬಂಗಾರ ದಿಂದ ಮಾಡಬೇಕು.
|
29. And thou shalt make H6213 the dishes H7086 thereof , and spoons H3709 thereof , and covers H7184 thereof , and bowls H4518 thereof , to cover H5258 withal H834 H2004 : of pure H2889 gold H2091 shalt thou make H6213 them.
|
30. ಮೇಜಿನ ಮೇಲೆ ಸಮ್ಮುಖದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.
|
30. And thou shalt set H5414 upon H5921 the table H7979 shewbread H3899 H6440 before H6440 me always H8548 .
|
31. ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು.
|
31. And thou shalt make H6213 a candlestick H4501 of pure H2889 gold H2091 : of beaten work H4749 shall the candlestick H4501 be made H6213 : his shaft H3409 , and his branches H7070 , his bowls H1375 , his knops H3730 , and his flowers H6525 , shall be H1961 of H4480 the same.
|
32. ದೀಪಸ್ತಂಭದ ಉಭಯ ಪಾರ್ಶ್ವಗಳಿಂದ ಆರು ಕೊಂಬೆಗಳು, ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು.
|
32. And six H8337 branches H7070 shall come out H3318 of the sides H4480 H6654 of it; three H7969 branches H7070 of the candlestick H4501 out of the one side H4480 H6654 H259 , and three H7969 branches H7070 of the candlestick H4501 out of the other side H4480 H6654 H8145 :
|
33. ಒಂದು ಕೊಂಬೆ ಯಲ್ಲಿ ಬಾದಾಮಿಯ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇರಬೇಕು.
|
33. Three H7969 bowls H1375 made like unto almonds H8246 , with a knop H3730 and a flower H6525 in one H259 branch H7070 ; and three H7969 bowls H1375 made like almonds H8246 in the other H259 branch H7070 , with a knop H3730 and a flower H6525 : so H3651 in the six H8337 branches H7070 that come out H3318 of H4480 the candlestick H4501 .
|
34. ದೀಪಸ್ತಂಭದಲ್ಲಿಯೇ ಗುಂಡುಗಳೂ ಪುಷ್ಪಗಳೂ ಸೇರಿದಂತೆ ಬಾದಾಮಿ ಪುಷ್ಪವಿರುವ ನಾಲ್ಕು ಹಣತೆಗಳು ಇರಬೇಕು.
|
34. And in the candlestick H4501 shall be four H702 bowls H1375 made like unto almonds H8246 , with their knops H3730 and their flowers H6525 .
|
35. ಇದಲ್ಲದೆ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳ ಪ್ರಕಾರ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗುಂಡು ಇರಬೇಕು.
|
35. And there shall be a knop H3730 under H8478 two H8147 branches H7070 of H4480 the same , and a knop H3730 under H8478 two H8147 branches H7070 of H4480 the same , and a knop H3730 under H8478 two H8147 branches H7070 of H4480 the same , according to the six H8337 branches H7070 that proceed out H3318 of H4480 the candlestick H4501 .
|
36. ಅದರ ಗುಂಡುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ಅದೆಲ್ಲಾ ಶುದ್ಧ ಬಂಗಾ ರದ ಒಂದೇ ನಕ್ಷೆಯ ಕೆಲಸವಾಗಿರಬೇಕು.
|
36. Their knops H3730 and their branches H7070 shall be H1961 of H4480 the same: all H3605 it shall be one H259 beaten work H4749 of pure H2889 gold H2091 .
|
37. ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶ ಕೊಡುವಂತೆ ಅವುಗಳನ್ನು ಹೊತ್ತಿಸಬೇಕು.
|
37. And thou shalt make H6213 the H853 seven H7651 lamps H5216 thereof : and they shall light H5927 H853 the lamps H5216 thereof , that they may give light H215 over against H5921 H5676 H6440 it.
|
38. ಇದಲ್ಲದೆ ಅದರ ಚಿಮಟಿಗೆಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು.
|
38. And the tongs H4457 thereof , and the censers H4289 thereof, shall be of pure H2889 gold H2091 .
|
39. ಒಂದು ತಲಾಂತು ಶುದ್ಧ ಬಂಗಾರದಿಂದ ದೀಪ ಸ್ತಂಭವನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಮಾಡ ಬೇಕು.
|
39. Of a talent H3603 of pure H2889 gold H2091 shall he make H6213 it, with H854 all H3605 these H428 vessels H3627 .
|
40. ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.
|
40. And look H7200 that thou make H6213 them after their pattern H8403 , which H834 was showed H7200 thee H859 in the mount H2022 .
|