|
|
1. ಈಗ ಅವರ ಮುಂದೆ ನೀನು ಇಡತಕ್ಕನ್ಯಾಯವಿಧಿಗಳು ಇವೇ.
|
1. Now these H428 are the judgments H4941 which H834 thou shalt set H7760 before H6440 them.
|
2. ನೀನು ಇಬ್ರಿಯ ದಾಸನನ್ನು ಕೊಂಡುಕೊಂಡರೆ ಅವನು ಆರು ವರುಷ ನಿನಗೆ ಸೇವೆಮಾಡಬೇಕು; ಏಳನೆಯ ವರುಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಅವನು ಹೋಗಲಿ.
|
2. If H3588 thou buy H7069 a Hebrew H5680 servant H5650 , six H8337 years H8141 he shall serve H5647 : and in the seventh H7637 he shall go out H3318 free H2670 for nothing H2600 .
|
3. ಅವನು ಒಬ್ಬನಾಗಿ ಬಂದಿದ್ದರೆ ಒಬ್ಬನಾಗಿಯೇ ಹೋಗ ಬೇಕು. ಅವನು ಮದುವೆಯಾದವನಾಗಿದ್ದರೆ ಅವನ ಹೆಂಡತಿಯು ಅವನ ಸಂಗಡ ಹೋಗಬೇಕು.
|
3. If H518 he came in H935 by himself H1610 , he shall go out H3318 by himself H1610 : if H518 he H1931 were married H1167 H802 , then his wife H802 shall go out H3318 with H5973 him.
|
4. ಅವನ ಯಜಮಾನನು ಅವನಿಗೆ ಕೊಟ್ಟ ಹೆಂಡತಿಯು ಅವನಿಗೆ ಕುಮಾರರನ್ನೂ ಕುಮಾರ್ತೆಯರನ್ನೂ ಹೆತ್ತಿದ್ದರೆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನವ ರಾಗಿರಬೇಕು. ಅವನು ಒಬ್ಬನಾಗಿಯೇ ಹೋಗಬೇಕು.
|
4. If H518 his master H113 have given H5414 him a wife H802 , and she have born H3205 him sons H1121 or H176 daughters H1323 ; the wife H802 and her children H3206 shall be H1961 her master H113 's , and he H1931 shall go out H3318 by himself H1610 .
|
5. ಆದರೆ ದಾಸನು--ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿಯನ್ನೂ ನನ್ನ ಮಕ್ಕಳನ್ನೂ ಪ್ರೀತಿ ಮಾಡು ತ್ತೇನೆ. ಆದದರಿಂದ ನಾನು ಬಿಡುಗಡೆಯಾಗಿ ಹೋಗು ವದಕ್ಕೆ ಮನಸ್ಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ
|
5. And if H518 the servant H5650 shall plainly say H559 H559 , I love H157 H853 my master H113 , H853 my wife H802 , and my children H1121 ; I will not H3808 go out H3318 free H2670 :
|
6. ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು ಬಾಗಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ ಅವನ ಯಜಮಾ ನನು ಅವನ ಕಿವಿಯನ್ನು ಸಲಾಕಿಯಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ಸೇವೆಮಾಡಬೇಕು.
|
6. Then his master H113 shall bring H5066 him unto H413 the judges H430 ; he shall also bring H5066 him to H413 the door H1817 , or H176 unto H413 the door post H4201 ; and his master H113 shall bore his ear through H7527 H853 H241 with an awl H4836 ; and he shall serve H5647 him forever H5769 .
|
7. ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ ದಾಸರು ಹೋಗುವಂತೆ ಆಕೆಯು ಹೋಗಬಾರದು.
|
7. And if H3588 a man H376 sell H4376 H853 his daughter H1323 to be a maidservant H519 , she shall not H3808 go out H3318 as the menservants H5650 do H3318 .
|
8. ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ ಅವಳು ಬಿಡುಗಡೆಯಾಗುವಂತೆ ಮಾಡಲಿ; ಅವನು ಅವಳನ್ನು ವಂಚಿಸಿದ್ದರಿಂದ ಅನ್ಯರಿಗೆ ಅವಳನ್ನು ಮಾರು ವದಕ್ಕೆ ಅವನಿಗೆ ಅಧಿಕಾರವಿಲ್ಲ.
|
8. If H518 she please not H7451 H5869 her master H113 , who H834 hath betrothed H3808 H3259 her to himself , then shall he let her be redeemed H6299 : to sell H4376 her unto a strange H5237 nation H5971 he shall have no H3808 power H4910 , seeing he hath dealt deceitfully H898 with her.
|
9. ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯಮಾಡಿದರೆ ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು.
|
9. And if H518 he have betrothed H3259 her unto his son H1121 , he shall deal H6213 with her after the manner H4941 of daughters H1323 .
|
10. ಒಂದು ವೇಳೆ ಅವನು ತನಗೆ ಇನ್ನೊಬ್ಬ ಹೆಂಡತಿ ಯನ್ನು ತಕ್ಕೊಂಡರೆ ಅವಳ ಅನ್ನ ವಸ್ತ್ರ ಸಹವಾಸಗಳನ್ನು ಕಡಿಮೆಮಾಡಬಾರದು.
|
10. If H518 he take H3947 him another H312 wife ; her food H7607 , her raiment H3682 , and her duty of marriage H5772 , shall he not H3808 diminish H1639 .
|
11. ಈ ಮೂರನ್ನು ಅವಳಿಗೆ ಮಾಡದೆ ಹೋದರೆ ಅವಳು ಹಣಕೊಡದೆ ಸ್ವತಂತ್ರ ಳಾಗಿ ಹೋಗಬಹುದು.
|
11. And if H518 he do H6213 not H3808 these H428 three H7969 unto her , then shall she go out H3318 free H2600 without H369 money H3701 .
|
12. ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು.
|
12. He that smiteth H5221 a man H376 , so that he die H4191 , shall be surely put to death H4191 H4191 .
|
13. ಆದರೆ ಅವನು ಹೊಂಚಿ ನೋಡದೆ ಇದ್ದು ದೇವರು ಅವನ ಕೈಗೆ ಅವನನ್ನು ಒಪ್ಪಿಸಿದ್ದಾಗಿದ್ದರೆ ಅವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಿನಗೆ ನಾನು ನೇಮಿಸುವೆನು.
|
13. And if H834 a man lie not in wait H6658 H3808 , but God H430 deliver H579 him into his hand H3027 ; then I will appoint H7760 thee a place H4725 whither H834 H8033 he shall flee H5127 .
|
14. ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸತನದಿಂದ ಕೊಂದರೆ ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞ ವೇದಿಯಿಂದ ತೆಗೆಯಬೇಕು.
|
14. But if H3588 a man H376 come presumptuously H2102 upon H5921 his neighbor H7453 , to slay H2026 him with guile H6195 ; thou shalt take H3947 him from H4480 H5973 mine altar H4196 , that he may die H4191 .
|
15. ತಂದೆ ತಾಯಿಗಳನ್ನು ಹೊಡೆಯುವವನು ಖಂಡಿತವಾಗಿ ಸಾಯಬೇಕು.
|
15. And he that smiteth H5221 his father H1 , or his mother H517 , shall be surely put to death H4191 H4191 .
|
16. ಮನುಷ್ಯನನ್ನು ಕದ್ದವನಿಗೆ ಅವನನ್ನು ಮಾರಿದರೂ ತನ್ನಲ್ಲಿಯೇ ಇಟ್ಟುಕೊಂಡರೂ ಅವನು ಖಂಡಿತವಾಗಿ ಸಾಯಬೇಕು.
|
16. And he that stealeth H1589 a man H376 , and selleth H4376 him , or if he be found H4672 in his hand H3027 , he shall surely be put to death H4191 H4191 .
|
17. ತಂದೆಗಾದರೂ ತಾಯಿಗಾದರೂ ಶಾಪಕೊಟ್ಟ ವನು ಖಂಡಿತವಾಗಿ ಸಾಯಬೇಕು.
|
17. And he that curseth H7043 his father H1 , or his mother H517 , shall surely be put to death H4191 H4191 .
|
18. ಇಬ್ಬರು ಜಗಳವಾಡುವಾಗ ಒಬ್ಬನು ಮತ್ತೊಬ್ಬ ನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದ ದ್ದರಿಂದ ಅವನು ಸಾಯದೆ ಹಾಸಿಗೆಯಲ್ಲಿ ಬಿದ್ದರೆ
|
18. And if H3588 men H376 strive together H7378 , and one H376 smite H5221 H853 another H7453 with a stone H68 , or H176 with his fist H106 , and he die H4191 not H3808 , but keepeth H5307 his bed H4904 :
|
19. ಅವನು ಎದ್ದು ಕೋಲೂರಿಕೊಂಡು ತಿರುಗಾಡು ವಾಗ ಅವನಿಗೆ ಹೊಡೆದವನು ಅಪರಾಧವಿಲ್ಲದೆ ಹೋಗಬೇಕು. ಅವನ ನಷ್ಟವಾದ ಸಮಯಕ್ಕಾಗಿ ಮಾತ್ರ ಅವನಿಗೆ ಹಣ ಕೊಡಬೇಕು. ಅವನನ್ನು ಪೂರ್ಣ ಸ್ವಸ್ಥಮಾಡಿಸಬೇಕು.
|
19. If H518 he rise again H6965 , and walk H1980 abroad H2351 upon H5921 his staff H4938 , then shall he that smote H5221 him be quit H5352 : only H7535 he shall pay H5414 for the loss of his time H7674 , and shall cause him to be thoroughly healed H7495 H7495 .
|
20. ಒಬ್ಬನು ದಾಸನನ್ನಾಗಲಿ ದಾಸಿಯನ್ನಾಗಲಿ ಸಾಯು ವಂತೆ ತನ್ನ ಕೋಲಿನಿಂದ ಹೊಡೆದರೆ ಅವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು.
|
20. And if H3588 a man H376 smite H5221 H853 his servant H5650 , or H176 H853 his maid H519 , with a rod H7626 , and he die H4191 under H8478 his hand H3027 ; he shall be surely punished H5358 H5358 .
|
21. ಆದರೂ ಅವನು ಒಂದೆರೆಡು ದಿನಗಳು ಉಳಿದರೆ ಶಿಕ್ಷೆಯಾಗಬಾರದು. ಅವನು ಅವನ ಸೊತ್ತು.
|
21. Notwithstanding H389 , if H518 he continue H5975 a day H3117 or H176 two H3117 , he shall not H3808 be punished H5358 : for H3588 he H1931 is his money H3701 .
|
22. ಮನುಷ್ಯರು ಜಗಳವಾಡುತ್ತಿರಲಾಗಿ ಗರ್ಭಿಣಿ ಯಾದ ಸ್ತ್ರೀಗೆ ಏಟು ತಗಲಿದದರಿಂದ ಅವಳಿಗೆ ಗರ್ಭ ಸ್ರಾವವೇ ಹೊರತಾಗಿ ಬೇರೆ ಯಾವ ಹಾನಿಯೂ ಆಗದೆ ಹೋದರೆ ಸ್ತ್ರೀಯ ಗಂಡನು ನ್ಯಾಯಾಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತು ಮಾಡು ತ್ತಾನೋ ಹೊಡೆದವನು ಅಷ್ಟನ್ನು ಕೊಡಬೇಕು.
|
22. If H3588 men H376 strive H5327 , and hurt H5062 a woman H802 with child H2030 , so that her fruit H3206 depart H3318 from her , and yet no H3808 mischief H611 follow H1961 : he shall be surely punished H6064 H6064 , according as H834 the woman H802 's husband H1167 will lay H7896 upon H5921 him ; and he shall pay H5414 as the judges H6414 determine .
|
23. ನಷ್ಟ ವಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರಾಣವನ್ನೂ
|
23. And if H518 any mischief H611 follow H1961 , then thou shalt give H5414 life H5315 for H8478 life H5315 ,
|
24. ಕಣ್ಣಿಗೆ ಕಣ್ಣನ್ನೂ ಹಲ್ಲಿಗೆ ಹಲ್ಲನ್ನೂ ಕೈಗೆ ಕೈಯನ್ನೂ ಕಾಲಿಗೆ ಕಾಲನ್ನೂ
|
24. Eye H5869 for H8478 eye H5869 , tooth H8127 for H8478 tooth H8127 , hand H3027 for H8478 hand H3027 , foot H7272 for H8478 foot H7272 ,
|
25. ಬರೆಗೆ ಬರೆ, ಗಾಯಕ್ಕೆ ಗಾಯ, ಏಟಿಗೆ ಏಟು, ಈ ಮೇರೆಗೆ ಪ್ರತಿದಂಡನೆಯಾಗಬೇಕು.
|
25. Burning H3555 for H8478 burning H3555 , wound H6482 for H8478 wound H6482 , stripe H2250 for H8478 stripe H2250 .
|
26. ಇದಲ್ಲದೆ ಒಬ್ಬನು ದಾಸನ ಕಣ್ಣನ್ನು ಇಲ್ಲವೆ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೋಸ್ಕರ ಅವನನ್ನು ಬಿಡುಗಡೆಮಾಡಿ ಅವನು ಕಳುಹಿಸಲಿ.
|
26. And if H3588 a man H376 smite H5221 H853 the eye H5869 of his servant H5650 , or H176 H853 the eye H5869 of his maid H519 , that it perish H7843 ; he shall let him go H7971 free H2670 for his eye's sake H8478 H5869 .
|
27. ಒಬ್ಬನು ದಾಸನ ಹಲ್ಲನ್ನು ಇಲ್ಲವೆ ದಾಸಿಯ ಹಲ್ಲನ್ನು ಉದುರಿಸಿದರೆ ಹಲ್ಲಿಗೋಸ್ಕರ ಅವನನ್ನು ಬಿಡುಗಡೆಮಾಡಿ ಕಳುಹಿಸಲಿ.
|
27. And if H518 he smite out H5307 his manservant H5650 's tooth H8127 , or H176 his maidservant H519 's tooth H8127 ; he shall let him go H7971 free H2670 for his tooth's sake H8478 H8127 .
|
28. ಇದಲ್ಲದೆ ಯಾವದಾದರೂ ಒಂದು ಎತ್ತು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಹಾದು ಕೊಂದರೆ ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು ಅದರ ಮಾಂಸವನ್ನು ತಿನ್ನಬಾರದು. ಆದರೆ ಎತ್ತಿನ ಯಜಮಾನನು ನಿರಪರಾಧಿಯಾಗಿರಬೇಕು.
|
28. If H3588 an ox H7794 gore H5055 H853 a man H376 or H176 H853 a woman H802 , that they die H4191 : then the ox H7794 shall be surely stoned H5619 H5619 , and H853 his flesh H1320 shall not H3808 be eaten H398 ; but the owner H1167 of the ox H7794 shall be quit H5355 .
|
29. ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದ್ದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಭದ್ರಮಾಡದೆ ಇದ್ದದರಿಂದ ಅದು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಕೊಂದುಹಾಕಿದರೆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು; ಅದರ ಯಜಮಾನನೂ ಸಾಯಬೇಕು.
|
29. But if H518 the ox H7794 were wont to push with his horn H5056 in time past H4480 H8543 H8032 , and it hath been testified H5749 to his owner H1167 , and he hath not H3808 kept him in H8104 , but that he hath killed H4191 a man H376 or H176 a woman H802 ; the ox H7794 shall be stoned H5619 , and his owner H1167 also H1571 shall be put to death H4191 .
|
30. ಒಂದು ವೇಳೆ ಅವನಿಗೆ ಪ್ರಾಯಶ್ಚಿತ್ತವನ್ನು ನೇಮಿ ಸಿದರೆ ಅವನು ತನಗೆ ನೇಮಿಸಿದ್ದನ್ನು ತನ್ನ ಪ್ರಾಣ ವಿಮೋಚನೆಗಾಗಿ ಕೊಡಲಿ.
|
30. If H518 there be laid H7896 on H5921 him a sum of money H3724 , then he shall give H5414 for the ransom H6306 of his life H5315 whatsoever H3605 H834 is laid H7896 upon H5921 him.
|
31. ಅದು ಮಗನನ್ನಾಗಲಿ ಮಗಳನ್ನಾಗಲಿ ತಿವಿದರೂ ಈ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು.
|
31. Whether H176 he have gored H5055 a son H1121 , or H176 have gored H5055 a daughter H1323 , according to this H2088 judgment H4941 shall it be done H6213 unto him.
|
32. ದಾಸನನ್ನಾದರೂ ದಾಸಿಯನ್ನಾದರೂ ಎತ್ತು ತಿವಿ ದರೆ ಅವರ ಯಜಮಾನನಿಗೆ ಮೂವತ್ತು ಶೆಕೆಲ್ ಬೆಳ್ಳಿಯನ್ನು ಕೊಟ್ಟು ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.
|
32. If H518 the ox H7794 shall push H5055 a manservant H5650 or H176 a maidservant H519 ; he shall give H5414 unto their master H113 thirty H7970 shekels H8255 of silver H3701 , and the ox H7794 shall be stoned H5619 .
|
33. ಇದಲ್ಲದೆ ಗುಂಡಿಯನ್ನು ಅಗೆದವನು ಅದನ್ನು ಮುಚ್ಚದೆ ಇದ್ದದ್ದರಿಂದ ಎತ್ತಾದರೂ ಕತ್ತೆಯಾದರೂ ಗುಂಡಿಯಲ್ಲಿ ಬಿದ್ದರೆ
|
33. And if H3588 a man H376 shall open H6605 a pit H953 , or H176 if H3588 a man H376 shall dig H3738 a pit H953 , and not H3808 cover H3680 it , and an ox H7794 or H176 an ass H2543 fall H5307 therein H8033 ;
|
34. ಗುಂಡಿಯನ್ನು ಅಗೆದವನು ಕ್ರಯ ಕೊಡಬೇಕು. ಅವುಗಳ ಯಜಮಾನನಿಗೆ ಹಣ ತೀರಿಸಬೇಕು. ಆದರೆ ಸತ್ತ ಪಶುವು ಅವನದಾಗಬೇಕು.
|
34. The owner H1167 of the pit H953 shall make it good H7999 , and give H7725 money H3701 unto the owner H1167 of them ; and the dead H4191 beast shall be H1961 his.
|
35. ಇದಲ್ಲದೆ ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದುಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಪಾಲು ಹಂಚಬೇಕು. ಸತ್ತ ಎತ್ತನ್ನು ಸಹ ಪಾಲು ಹಂಚಬೇಕು.
|
35. And if H3588 one man H376 's ox H7794 hurt H5062 H853 another H7794 H7453 's , that he die H4191 ; then they shall sell H4376 H853 the live H2416 ox H7794 , and divide H2673 H853 the money H3701 of it ; and H853 the dead H4191 ox also H1571 they shall divide H2673 .
|
36. ಇಲ್ಲವೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ತಿಳಿದಿ ದ್ದರೂ ಅದರ ಯಜಮಾನನು ಅದನ್ನು ಭದ್ರಮಾಡದೆ ಹೋಗಿದ್ದರೆ ಎತ್ತಿಗೆ ಎತ್ತನ್ನು ಖಂಡಿತವಾಗಿ ಬದಲು ಕೊಡಬೇಕು. ಆದರೆ ಸತ್ತ ಪಶುವು ಅವನದಾಗಬೇಕು.
|
36. Or H176 if it be known H3045 that H3588 the ox H7794 hath used to push H5056 in time past H4480 H8543 H8032 , and his owner H1167 hath not H3808 kept him in H8104 ; he shall surely pay H7999 H7999 ox H7794 for H8478 ox H7794 ; and the dead H4191 shall be H1961 his own.
|