|
|
1. ಹಾಗಾದರೆ--ದೇವರು ತನ್ನ ಪ್ರಜೆಯನ್ನು ತಳ್ಳಿಬಿಟ್ಟದ್ದುಂಟೇ ಎಂದು ನಾನು ಕೇಳುತ್ತೇನೆ. ಹಾಗೆ ಎಂದಿಗೂ ಹೇಳಬಾರದು. ಯಾಕಂದರೆ ನಾನು ಸಹ ಇಸ್ರಾಯೇಲ್ಯನು. ಅಬ್ರ ಹಾಮನ ಸಂತತಿಯವನು, ಬೆನ್ಯಾವಿಾನನ ಗೋತ್ರ ದವನು ಆಗಿದ್ದೇನಲ್ಲಾ.
|
1. I say G3004 then G3767 , Hath G3361 God G2316 cast away G683 his G848 people G2992 ? God forbid G1096 G3361 . For G1063 I G1473 also G2532 am G1510 an Israelite G2475 , of G1537 the seed G4690 of Abraham G11 , of the tribe G5443 of Benjamin G958 .
|
2. ದೇವರು ಮುಂದಾಗಿ ಅರಿತುಕೊಂಡಿದ್ದ ತನ್ನ ಜನರನ್ನು ತಳ್ಳಿಹಾಕಲಿಲ್ಲ. ಎಲೀಯನ ವಿಷಯವಾಗಿಯಾದರೋ ಅವನು ಇಸ್ರಾಯೇಲ್ಯರಿಗೆ ವಿರೋಧವಾಗಿ ದೇವರಿಗೆ ವಿಜ್ಞಾಪನೆ ಮಾಡುತ್ತಾ--
|
2. God G2316 hath not G3756 cast away G683 his G848 people G2992 which G3739 he foreknew G4267 G2228 . Wot G1492 ye not G3756 what G5101 the G3588 Scripture G1124 saith G3004 of G1722 Elijah G2243 ? how G5613 he maketh intercession G1793 to God G2316 against G2596 Israel G2474 , saying G3004 ,
|
3. ಕರ್ತನೇ, ಅವರು ನಿನ್ನ ಪ್ರವಾದಿಗಳನ್ನು ಕೊಂದು ನಿನ್ನ ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ; ಆದರೆ ನಾನೊಬ್ಬನೇ ಉಳಿದಿದ್ದೇನೆ; ಅವರು ನನ್ನ ಪ್ರಾಣವನ್ನು ತೆಗೆಯಲು ಹುಡುಕುತ್ತಿದ್ದಾರೆ ಎಂದು ಬರಹವು ಹೇಳಿದ್ದು ನಿಮಗೆ ಗೊತ್ತಿಲ್ಲವೋ?
|
3. Lord G2962 , they have killed G615 thy G4675 prophets G4396 , and G2532 digged down G2679 thine G4675 altars G2379 ; and I G2504 am left G5275 alone G3441 , and G2532 they seek G2212 my G3450 life G5590 .
|
4. ಆದರೆ ದೇವರು ಅವನಿಗೆ ಕೊಟ್ಟ ಉತ್ತರವೇನಂದರೆ--ಬಾಳನ ವಿಗ್ರಹಕ್ಕೆ ಮೊಣಕಾಲೂರದ ಏಳುಸಾವಿರ ಜನರನ್ನು ನಾನು ನನಗೋಸ್ಕರ ಉಳಿಸಿಕೊಂಡಿದ್ದೇನೆ ಎಂಬದು.
|
4. But G235 what G5101 saith G3004 the G3588 answer of God G5538 unto him G846 ? I have reserved G2641 to myself G1683 seven thousand G2035 men G435 , who G3748 have not G3756 bowed G2578 the knee G1119 to the image of Baal G896 .
|
5. ಅದರಂತೆ ಈಗಿನ ಕಾಲದಲ್ಲಿ ಕೃಪೆಯ ಆಯ್ಕೆಯ ಪ್ರಕಾರ ಒಂದಂಶವು ಉಳಿದಿದೆ.
|
5. Even so G3779 then G3767 at G1722 this present G3568 time G2540 also G2532 there is G1096 a remnant G3005 according G2596 to the election G1589 of grace G5485 .
|
6. ಕೃಪೆಯಿಂದಾಗಿದ್ದರೆ ಇನ್ನೆಂದಿಗೂ ಕ್ರಿಯೆಗಳಿಂದಲ್ಲ; ಇಲ್ಲವಾದರೆ ಕೃಪೆಯು ಇನ್ನೆಂದಿಗೂ ಕೃಪೆಯೇ ಅಲ್ಲ. ಕ್ರಿಯೆಗಳಿಂದಾಗಿದ್ದರೆ ಇನ್ನೆಂದಿಗೂ ಕೃಪೆಯಲ್ಲ; ಇಲ್ಲವಾದರೆ ಕ್ರಿಯೆಯು ಇನ್ನೆಂದಿಗೂ ಕ್ರಿಯೆಯಲ್ಲ.
|
6. And G1161 if G1487 by grace G5485 , then is it no more G3765 of G1537 works G2041 : otherwise G1893 grace G5485 is G1096 no more G3765 grace G5485 . But G1161 if G1487 it be of G1537 works G2041 , then is G2076 it no more G3765 grace G5485 : otherwise G1893 work G2041 is G2076 no more G3765 work G2041 .
|
7. ಹಾಗಾದರೇನು? ಇಸ್ರಾ ಯೇಲ್ಯರು ತಾವು ಹುಡುಕಿದ್ದನ್ನು ಹೊಂದಿಕೊಳ್ಳಲಿಲ್ಲ; ಆದರೆ ಆಯ್ಕೆಯಾದವರು ಅದನ್ನು ಹೊಂದಿಕೊಂಡರು.
|
7. What G5101 then G3767 ? Israel G2474 hath G5127 not G3756 obtained G2013 that which G3739 he seeketh for G1934 ; but G1161 the G3588 election G1589 hath obtained G2013 it, and G1161 the G3588 rest G3062 were blinded G4456 .
|
8. (ಬರೆದಿರುವಂತೆ ದೇವರು ಅವರಿಗೆ ತೂಕಡಿಕೆಯ ಆತ್ಮವನ್ನೂ ಕಾಣದ ಕಣ್ಣುಗಳನ್ನೂ ಕೇಳದ ಕಿವಿಗಳನ್ನೂ ಕೊಟ್ಟಿದ್ದಾನೆ). ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ.
|
8. (According as G2531 it is written G1125 , God G2316 hath given G1325 them G846 the spirit G4151 of slumber G2659 , eyes G3788 that they should not G3361 see G991 , and G2532 ears G3775 that they should not G3361 hear G191 ;) unto G2193 this G4594 day G2250 .
|
9. ಇದಲ್ಲದೆ ದಾವೀದನು--ಅವರ ಊಟವು ಅವರಿಗೆ ಉರ್ಲೂ ಬೋನೂ ಅಭ್ಯಂತರವೂ ಪ್ರತಿಫಲವೂ ಆಗಲಿ.
|
9. And G2532 David G1138 saith G3004 , Let their G848 table G5132 be made G1096 a G1519 snare G3803 , and G2532 a G1519 trap G2339 , and G2532 a G1519 stumblingblock G4625 , and G2532 a G1519 recompense G468 unto them G846 :
|
10. ನೋಡದಂತೆ ಅವರ ಕಣ್ಣು ಗಳು ಮೊಬ್ಬಾಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರಲಿ ಎಂದು ಅನ್ನುತ್ತಾನೆ.
|
10. Let their G848 eyes G3788 be darkened G4654 , that they may not G3361 see G991 , and G2532 bow down G4781 their G848 back G3577 always G1275 .
|
11. ಹಾಗಾದರೆ--ಅವರು ಬಿದ್ದುಹೋಗುವಂತೆ ಎಡವಿದರೆಂದು ನಾನು ಹೇಳಬೇಕೋ? ಹಾಗೆ ಎಂದಿಗೂ ಆಗಬಾರದು; ಆದರೆ ಅವರಲ್ಲಿ ಹುರುಡು ಹುಟ್ಟಿಸುವದಕ್ಕಾಗಿ ಅವರ ಬೀಳುವಿಕೆಯ ಮೂಲಕವೇ ಅನ್ಯಜನರಿಗೆ ರಕ್ಷಣೆಯುಂಟಾಯಿತು.
|
11. I say G3004 then G3767 , Have they G3361 stumbled G4417 that G2443 they should fall G4098 ? God forbid G1096 G3361 : but G235 rather through their G848 fall G3900 salvation G4991 is come unto the G3588 Gentiles G1484 , for to provoke them to jealousy G3863 G846 .
|
12. ಅವರ ಬೀಳುವಿಕೆಯು ಲೋಕದ ಐಶ್ವರ್ಯಕ್ಕೂ ಅವರ ಕುಂದುವಿಕೆಯು ಅನ್ಯಜನಗಳ ಸಂಪತ್ತಿಗೂ ಆಗಿರು ವದಾದರೆ ಅವರ ಸಮೃದ್ಧಿಯು ಇನ್ನೂ ಎಷ್ಟೋ ಹೆಚ್ಚಾಗಿರುವದಲ್ಲವೇ?
|
12. Now G1161 if G1487 the G3588 fall G3900 of them G848 be the riches G4149 of the world G2889 , and G2532 the G3588 diminishing G2275 of them G848 the riches G4149 of the Gentiles G1484 ; how much G4214 more G3123 their G848 fullness G4138 ?
|
13. ಅನ್ಯಜನರಾದ ನಿಮ್ಮೊಂದಿಗೆ ನಾನು ಮಾತನಾಡು ತ್ತೇನೆ. ನಾನು ಅನ್ಯಜನಗಳಿಗೆ ಅಪೊಸ್ತಲನಾಗಿ ರುವದರಿಂದ ನನ್ನ ಉದ್ಯೋಗವನ್ನು ಗಣನೆಗೆ ತರುತ್ತೇನೆ.
|
13. For G1063 I speak G3004 to you G5213 Gentiles G1484 , inasmuch as G1909 G3745 G3303 I G1473 am G1510 the apostle G652 of the Gentiles G1484 , I magnify G1392 mine G3450 office G1248 :
|
14. ಹೀಗೆ ಯಾವ ವಿಧದಲ್ಲಿಯಾದರೂ ನನ್ನ ಸ್ವಜನರಲ್ಲಿ ಹುರುಡನ್ನು ಹುಟ್ಟಿಸಿ ಅವರಲ್ಲಿ ಕೆಲವರು ರಕ್ಷಣೆ ಹೊಂದುವಂತೆ ಮಾಡೇನು.
|
14. If by any means G1513 I may provoke to emulation G3863 them which are my G3450 flesh G4561 , and G2532 might save G4982 some G5100 of G1537 them G846 .
|
15. ಅವರನ್ನು ತಳ್ಳುವದರಿಂದ ಲೋಕವು ಸಮಾಧಾನವಾಗು ವದಾದರೆ ಅವರನ್ನು ಸೇರಿಸಿಕೊಳ್ಳುವದರಿಂದ ಏನಾಗುವದು? ಸತ್ತವರು ಜೀವಿತರಾಗಿ ಎದ್ದು ಬಂದಂತಾಗುವದಿಲ್ಲವೇ.
|
15. For G1063 if G1487 the G3588 casting away G580 of them G846 be the reconciling G2643 of the world G2889 , what G5101 shall the G3588 receiving G4356 of them be, but G1508 life G2222 from G1537 the dead G3498 ?
|
16. ಪ್ರಥಮ ಫಲವು ಪವಿತ್ರವಾಗಿದ್ದರೆ ಕಣಕವೂ ಪವಿತ್ರವಾಗಿದೆ ಮತ್ತು ಬೇರು ಪವಿತ್ರವಾಗಿದ್ದರೆ ಕೊಂಬೆಗಳೂ ಪವಿತ್ರವಾಗಿವೆ.
|
16. For G1161 if G1487 the G3588 firstfruit G536 be holy G40 , the G3588 lump G5445 is also G2532 holy : and G2532 if G1487 the G3588 root G4491 be holy G40 , so G2532 are the G3588 branches G2798 .
|
17. ಆದರೆ ಕೆಲವು ಕೊಂಬೆಗಳು ಮುರಿದು ಹಾಕಲ್ಪಟ್ಟ ದ್ದರಿಂದ ಕಾಡೆಣ್ಣೇ ಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇ ಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದವನಾಗಿದ್ದೀ.
|
17. And G1161 if G1487 some G5100 of the G3588 branches G2798 be broken off G1575 , and G1161 thou G4771 , being G5607 a wild olive tree G65 , wert grafted in G1461 among G1722 them G846 , and G2532 with them G1096 partakest G4791 of the G3588 root G4491 and G2532 fatness G4096 of the G3588 olive tree G1636 ;
|
18. ಆದರೂ ಆ ಕೊಂಬೆಗಳಿಗೆ ಮೇಲಾಗಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ, ಅದು ನಿನಗೆ ಆಧಾರವಾಗಿದೆಯಷ್ಟೆ.
|
18. Boast not against G2620 G3361 the G3588 branches G2798 . But G1161 if G1487 thou boast G2620 , thou G4771 bearest G941 not G3756 the G3588 root G4491 , but G235 the G3588 root G4491 thee G4571 .
|
19. ಈ ಮಾತಿಗೆ--ನಾನು ಕಸಿಕಟ್ಟಿಸಿ ಕೊಳ್ಳುವಂತೆ ಕೊಂಬೆಗಳು ಮುರಿದು ಹಾಕಲ್ಪಟ್ಟವಲ್ಲಾ ಎಂದು ನೀನು ಹೇಳುವಿ.
|
19. Thou wilt say G2046 then G3767 , The G3588 branches G2798 were broken off G1575 , that G2443 I G1473 might be grafted in G1461 .
|
20. ಒಳ್ಳೆಯದು, ಅವರು ನಂಬದೆ ಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ, ಗರ್ವ ಪಡಬೇಡ, ಭಯದಿಂದಿರು;
|
20. Well G2573 ; because of unbelief G570 they were broken off G1575 , and G1161 thou G4771 standest G2476 by faith G4102 . Be not highminded G5309 G3361 , but G235 fear G5399 :
|
21. ದೇವರು ಹುಟ್ಟು ಕೊಂಬೆಗಳನ್ನು ಉಳಿಸದೆಯಿದ್ದ ಮೇಲೆ ನಿನ್ನನ್ನೂ ಉಳಿಸು ವದಿಲ್ಲ.
|
21. For G1063 if G1487 God G2316 spared G5339 not G3756 the G3588 natural G2596 G5449 branches G2798 , take heed lest G3381 he also spare G5339 not G3761 thee G4675 .
|
22. ಆದದರಿಂದ ದೇವರ ದಯೆಯನ್ನೂ ಕಾಠಿಣ್ಯ ವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ನಿನ್ನ ಕಡೆಗೆ ಆತನ ದಯೆ; ಇಲ್ಲವಾದರೆ ನೀನೂ ಕಡಿದು ಹಾಕಲ್ಪಡುವಿ.
|
22. Behold G1492 therefore G3767 the goodness G5544 and G2532 severity G663 of God G2316 : on G1909 G3303 them which fell G4098 , severity G663 ; but G1161 toward G1909 thee G4571 , goodness G5544 , if G1437 thou continue in G1961 his goodness G5544 : otherwise G1893 thou G4771 also G2532 shalt be cut off G1581 .
|
23. ಅವರು ಕೂಡ ಇನ್ನು ಅಪ ನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಕಸಿಕಟ್ಟಲ್ಪಡುವರು; ಯಾಕಂದರೆ ದೇವರು ಅವರನ್ನು ತಿರಿಗಿ ದೇವರು ಕಸಿಕಟ್ಟುವದಕ್ಕೆ ಸಮರ್ಥನಾಗಿದ್ದಾನೆ.
|
23. And G1161 they G1565 also G2532 , if they abide not G3362 G1961 still in unbelief G570 , shall be grafted in G1461 : for G1063 God G2316 is G2076 able G1415 to graft them in G1461 G846 again G3825 .
|
24. ಹುಟ್ಟು ಕಾಡು ಮರದಿಂದ ಕಡಿದು ತೆಗೆಯಲ್ಪಟ್ಟಿರುವ ನೀನು ನಿನಗೆ ಸಂಬಂಧಪಡದ ಊರುಮರದಲ್ಲಿ ಕಸಿಕಟ್ಟಿಸಿಕೊಂಡವ ನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವದು ಎಷ್ಟೋ ಸಹಜವಾಗಿದೆಯಲ್ಲವೇ.
|
24. For G1063 if G1487 thou G4771 wert cut G1581 out G1537 of the G3588 olive tree which is wild G65 by G2596 nature G5449 , and G2532 wert grafted G1461 contrary G3844 to nature G5449 into G1519 a good olive tree G2565 : how much G4214 more G3123 shall these G3778 , which G3588 be the natural G2596 G5449 branches, be grafted into G1461 their own G2398 olive tree G1636 ?
|
25. ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ
|
25. For G1063 I would G2309 not G3756 , brethren G80 , that ye G5209 should be ignorant G50 of this G5124 mystery G3466 , lest G3363 ye should be G5600 wise G5429 in G3844 your own conceits G1438 ; that G3754 blindness G4457 in G575 part G3313 is happened G1096 to Israel G2474 , until G891 G3757 the G3588 fullness G4138 of the G3588 Gentiles G1484 be come in G1525 .
|
26. ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
|
26. And G2532 so G3779 all G3956 Israel G2474 shall be saved G4982 : as G2531 it is written G1125 , There shall come G2240 out of G1537 Zion G4622 the G3588 Deliverer G4506 , and G2532 shall turn away G654 ungodliness G763 from G575 Jacob G2384 :
|
27. ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು.
|
27. For G2532 this G3778 is G3844 my G1700 covenant G1242 unto them G846 , when G3752 I shall take away G851 their G848 sins G266 .
|
28. ಸುವಾರ್ತೆಯ ವಿಷಯದಲ್ಲಿ ಅವರು ನಿಮ್ಮ ನಿಮಿತ್ತವಾಗಿ ವೈರಿಗಳಾ ಗಿದ್ದಾರೆ; ಆದರೆ ಆಯ್ಕೆಯ ವಿಷಯದಲ್ಲಿ ಅವರು ಪಿತೃಗಳ ನಿಮಿತ್ತವಾಗಿ ಪ್ರಿಯರಾಗಿದ್ದಾರೆ.
|
28. As concerning G2596 G3303 the G3588 gospel G2098 , they are enemies G2190 for your sakes G1223 G5209 : but G1161 as touching G2596 the G3588 election G1589 , they are beloved G27 for the fathers' sakes G1223 G3588 G3962 .
|
29. ದೇವರ ದಾನಗಳೂ ಕರೆಯುವಿಕೆಯೂ ಪಶ್ಚಾತ್ತಾಪವಿಲ್ಲದವು ಗಳಾಗಿವೆ.
|
29. For G1063 the G3588 gifts G5486 and G2532 calling G2821 of God G2316 are without repentance G278 .
|
30. ಕಳೆದುಹೋದ ಕಾಲಗಳಲ್ಲಿ ನೀವು ದೇವರನ್ನು ನಂಬದೆ ಇದ್ದೀರಿ; ಆದಾಗ್ಯೂ ಅವರ ಅಪನಂಬಿಕೆಯ ಮೂಲಕ ನೀವು ಈಗ ಹೇಗೆ ಕರುಣೆ ಯನ್ನು ಹೊಂದಿದ್ದೀರೋ
|
30. For G1063 as G5618 ye G5210 in times past G4218 have G2532 not believed G544 God G2316 , yet G1161 have now G3568 obtained mercy G1653 through their G5130 unbelief G543 :
|
31. ಹಾಗೆಯೇ ನೀವು ಹೊಂದಿದ ಕರುಣೆಯ ಮೂಲಕ ಇವರೂ (ಮುಂದೆ) ಕರುಣೆಯನ್ನು ಹೊಂದುವಂತೆ ಈಗ ನಂಬದವ ರಾಗಿದ್ದಾರೆ.
|
31. Even so G3779 have these G3778 also G2532 now G3568 not believed G544 , that G2443 through your G5212 mercy G1656 they G846 also G2532 may obtain mercy G1653 .
|
32. ಆದರೆ ದೇವರು ಮನುಷ್ಯರೆಲ್ಲರ ಮೇಲೆ ಕರುಣೆ ತೋರಿಸಬೇಕೆಂದು ಅವರೆಲ್ಲರನ್ನೂ ಅಪನಂಬಿಕೆ ಯಲ್ಲಿ ಮುಚ್ಚಿಹಾಕಿದ್ದಾನೆ.
|
32. For G1063 God G2316 hath concluded G4788 them all G3956 in G1519 unbelief G543 , that G2443 he might have mercy G1653 upon all G3956 .
|
33. ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ!
|
33. O G5599 the depth G899 of the riches G4149 both G2532 of the wisdom G4678 and G2532 knowledge G1108 of God G2316 ! how G5613 unsearchable G419 are his G848 judgments G2917 , and G2532 his G848 ways G3598 past finding out G421 !
|
34. ಕರ್ತನ ಮನಸ್ಸನ್ನು ತಿಳಿದುಕೊಂಡವನು ಯಾರು? ಇಲ್ಲವೆ ಆತನಿಗೆ ಆಲೋಚನೆ ಹೇಳಿದವನು ಯಾರು?
|
34. For G1063 who G5101 hath known G1097 the mind G3563 of the Lord G2962 ? or G2228 who G5101 hath been G1096 his G848 counselor G4825 ?
|
35. ಇಲ್ಲವೆ ಮೊದಲು ಆತನಿಗೆ ಕೊಟ್ಟು ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?
|
35. Or G2228 who G5101 hath first given G4272 to him G846 , and G2532 it shall be recompensed G467 unto him G846 again?
|
36. ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್.
|
36. For G3754 of G1537 him G846 , and G2532 through G1223 him G846 , and G2532 to G1519 him G846 , are all things G3956 : to whom G846 be glory G1391 forever G1519 G165 . Amen G281 .
|