Bible Versions
Bible Books

Jeremiah 32 (KNV) Kannadam Old BSI Version

1 ನೆಬೂಕದ್ನೆಚ್ಚರನ ಹದಿನೆಂಟನೇ ವರುಷವಾಗಿದ್ದ, ಚಿದ್ಕೀಯನ ಹತ್ತನೇ ವರುಷದಲ್ಲಿ ಯೆರೆವಿಾಯನಿಗೆ ಕರ್ತನಿಂದ ಉಂಟಾದ ವಾಕ್ಯವು.
2 ಆಗ ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿತ್ತು; ಪ್ರವಾದಿಯಾದ ಯೆರೆವಿಾಯನು ಯೆಹೂದದ ಅರಸನ ಮನೆಯಲ್ಲಿರುವ ಸೆರೆಮನೆಯ ಅಂಗಳದಲ್ಲಿ ಮುಚ್ಚಲ್ಪಟ್ಟನು.
3 ಯೆಹೂದದ ಅರಸನಾದ ಚಿದ್ಕೀಯನು ಯೆರೆವಿಾಯನಿಗೆ--ಕರ್ತನು ಹೇಳುವ ದೇನಂದರೆ--ನಾನು ಪಟ್ಟಣವನ್ನು ಬಾಬೆಲಿನ ಅರಸನ ಕೈಯಲ್ಲಿ ಕೊಡುತ್ತೇನೆ;
4 ಅವನು ಅದನ್ನು ವಶಪಡಿಸಿಕೊಳ್ಳುವನು; ಯೆಹೂದದ ಅರಸನಾದ ಚಿದ್ಕೀಯನು ಕಸ್ದೀಯರ ಕೈಗೆ ತಪ್ಪಿಸಿಕೊಳ್ಳದೆ ನಿಶ್ಚಯ ವಾಗಿ ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವನು, ಸಾಕ್ಷಾತ್ತಾಗಿ ಅವನ ಸಂಗಡ ಮಾತನಾಡುವನು; ಅವನ ಕಣ್ಣುಗಳು ಅವನ ಕಣ್ಣುಗಳನ್ನು ನೋಡುವವು.
5 ಅವನು ಚಿದ್ಕೀಯನನ್ನು ಬಾಬೆಲಿಗೆ ಒಯ್ಯುವನು, ನಾನು ಅವನನ್ನು ದರ್ಶಿಸುವ ವರೆಗೆ ಅಲ್ಲೇ ಇರುವನೆಂಬದಾಗಿ ಕರ್ತನು ಅನ್ನುತ್ತಾನೆ, ನೀವು ಕಸ್ದೀಯರ ಸಂಗಡ ಯುದ್ಧ ಮಾಡಿದಾಗ್ಯೂ ನಿಮಗೆ ಸಫಲವಾಗುವದಿಲ್ಲವೆಂದು ಯಾಕೆ ಪ್ರವಾದಿಸುತ್ತೀ ಎಂದು ಹೇಳಿ ಅವನನ್ನು ಸೆರೆಯಲ್ಲಿ ಹಾಕಿಸಿದನು.
6 ಆಗ ಯೆರೆವಿಾಯನು ಹೇಳಿದ್ದೇನೆಂದರೆ--ಕರ್ತನ ವಾಕ್ಯವು ನನಗೆ ಬಂತು, ಹೇಗಂದರೆ--
7 ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾದ ಹನಮೇಲನು ನಿನ್ನ ಬಳಿಗೆ ಬಂದು--ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಅದನ್ನು ಕೊಂಡುಕೊಳ್ಳುವ ಹಾಗೆ ವಿಮೋಚಿಸುವ ಅಧಿಕಾರ ನಿನಗುಂಟು ಎಂದು ಹೇಳುವನು.
8 ಹಾಗೆಯೇ ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕರ್ತನ ವಾಕ್ಯದ ಪ್ರಕಾರ ನನ್ನ ಬಳಿಗೆ ಸೆರೆಮನೆಯ ಅಂಗಳಕ್ಕೆಬಂದು--ಬೆನ್ಯಾವಿಾನನ ದೇಶದ ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ, ಬಾಧ್ಯದ ಅಧಿಕಾರವೂ ವಿಮೋಚನೆಯೂ ನಿನ್ನದು; ಅದನ್ನು ನಿನಗೋಸ್ಕರ ಕೊಂಡುಕೋ ಎಂದು ಬೇಡಿಕೊಂಡು ಹೇಳಿದನು. ಆಗ ಅದು ಕರ್ತನ ವಾಕ್ಯವೆಂದು ನಾನು ತಿಳುಕೊಂಡೆನು.
9 ಹಾಗೆ ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿದ್ದ ಹೊಲವನ್ನು ಕೊಂಡುಕೊಂಡು ಅವನಿಗೆ ಹದಿನೇಳು ಬೆಳ್ಳಿ ಶೇಕೆಲುಗಳನ್ನು ತೂಕ ಮಾಡಿ ಕ್ರಯಕೊಟ್ಟೆನು.
10 ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆ ಹಾಕಿ, ಸಾಕ್ಷಿಗಳನ್ನಿಟ್ಟು ಬೆಳ್ಳಿಯನ್ನು ತ್ರಾಸಿನಲ್ಲಿ ತೂಕ ಮಾಡಿ ದೆನು.
11 ಆಗ ನಾನು ಆಜ್ಞೆ ನಿಯಮಗಳ ಪ್ರಕಾರ ಮುದ್ರೆ ಹಾಕಿದ ಕ್ರಯಪತ್ರವನ್ನೂ ತೆರೆದಿರುವದನ್ನೂ ತಕ್ಕೊಂಡೆನು.
12 ಕ್ರಯಪತ್ರವನ್ನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆಯೂ ಕ್ರಯಪತ್ರ ದಲ್ಲಿ ರುಜು ಹಾಕಿದ ಸಾಕ್ಷಿಗಳ ಮುಂದೆಯೂ ಸೆರೆ ಮನೆಯ ಅಂಗಳದಲ್ಲಿ ಕೂತುಕೊಂಡಿದ್ದ ಯೆಹೂದ್ಯ ರೆಲ್ಲರ ಮುಂದೆಯೂ ಮಹ್ಸೇಮನ ಮಗನಾದ ನೇರೀ ಯನ ಮಗನಾದ ಬಾರೂಕನಿಗೆ ಕೊಟ್ಟೆನು.
13 ಅವರ ಮುಂದೆ ನಾನು ಬಾರೂಕನಿಗೆ ಅಪ್ಪಣೆ ಕೊಟ್ಟದ್ದೇ ನಂದರೆ--
14 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಈ ಪತ್ರಗಳನ್ನು ಅಂದರೆ ಮುದ್ರೆ ಹಾಕಿದ ಕ್ರಯಪತ್ರವನ್ನೂ ತೆರೆದಿರುವ ಪತ್ರವನ್ನೂ ತೆಗೆದು ಅವು ಬಹಳ ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.
15 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು --ಈ ದೇಶದಲ್ಲಿ ತಿರುಗಿ ಮನೆಗಳೂ ಹೊಲಗಳೂ ದ್ರಾಕ್ಷೇ ತೋಟಗಳೂ ಸ್ವಾಧೀನವಾಗುವವೆಂದು ಹೇಳುತ್ತಾನೆ.
16 ನಾನು ಕ್ರಯಪತ್ರವನ್ನು ನೇರೀಯನ ಮಗ ನಾದ ಬಾರೂಕನಿಗೆ ಕೊಟ್ಟ ಮೇಲೆ ಕರ್ತನಿಗೆ ಹೀಗೆ ಪ್ರಾರ್ಥನೆ ಮಾಡಿದೆನು--
17 ಕರ್ತನಾದ ದೇವರೇ, ಇಗೋ, ನೀನು ನಿನ್ನ ಮಹಾಬಲದಿಂದ ನಿನ್ನ ಕೈಚಾಚಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ್ದೀ; ನಿನಗೆ ಕಠಿಣವಾದ ಕಾರ್ಯ ಒಂದೂ ಇಲ್ಲ.
18 ನೀನು ಸಾವಿರಾರು ತಲೆಗಳ ವರೆಗೆ ಪ್ರೀತಿ, ದಯೆ ತೋರಿಸಿ ತಂದೆಗಳ ಅಕ್ರಮವನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸಲ್ಲಿಸುವವನಾಗಿದ್ದೀ; ಮಹತ್ವ ವುಳ್ಳವನೂ ಪರಾಕ್ರಮವುಳ್ಳ ದೇವರೂ ಸೈನ್ಯಗಳ ಕರ್ತನೂ ಎಂಬದು ಆತನ ಹೆಸರು.
19 ಆಲೋಚನೆ ಯಲ್ಲಿ ದೊಡ್ಡವನು ಕ್ರಿಯೆಯಲ್ಲಿ ಬಲಿಷ್ಠನು; ನಿನ್ನ ಕಣ್ಣುಗಳು ಮನುಷ್ಯರ ಮಕ್ಕಳ ಎಲ್ಲಾ ಮಾರ್ಗಗಳ ಮೇಲೆ ಒಬ್ಬೊಬ್ಬನಿಗೆ ಅವನವನ ಮಾರ್ಗದ ಪ್ರಕಾರ ವಾಗಿಯೂ ಅವನವನ ಕ್ರಿಯೆಗಳ ಫಲದ ಪ್ರಕಾರ ವಾಗಿಯೂ ಕೊಡುವ ಹಾಗೆ ತೆರೆದವೆ.
20 ನೀನು ದಿನದ ವರೆಗೂ ಐಗುಪ್ತ ದೇಶದಲ್ಲಿಯೂ ಇಸ್ರಾ ಯೇಲಿನಲ್ಲಿಯೂ ಮನುಷ್ಯರೊಳಗೆ ಗುರುತುಗಳನ್ನೂ ಲಕ್ಷಣಗಳನ್ನೂ ಇಟ್ಟಿದ್ದೀ; ಇಂದಿನ ಪ್ರಕಾರ ನಿನಗೆ ಹೆಸರನ್ನು ಉಂಟುಮಾಡಿಕೊಂಡಿದ್ದೀ.
21 ನಿನ್ನ ಜನರಾದ ಇಸ್ರಾಯೇಲನ್ನು ಗುರುತುಗಳಿಂದಲೂ ಲಕ್ಷಣಗಳಿಂ ದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿ ನಿಂದಲೂ ಮಹಾಭಯದಿಂದಲೂ ಐಗುಪ್ತದೇಶದೊಳ ಗಿಂದ ಹೊರಗೆ ತಂದಿದ್ದೀ.
22 ಅವರ ತಂದೆಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶವಾದ ದೇಶವನ್ನು ಅವರಿಗೆ ಕೊಟ್ಟಿದ್ದೀ.
23 ಅವರು ಅದರಲ್ಲಿ ಸೇರಿ ಅದನ್ನು ಸ್ವಾಧೀನಪಡಿಸಿಕೊಂಡರು; ಆದರೆ ಅವರು ನಿನ್ನ ಸ್ವರಕ್ಕೆ ಕಿವಿಗೊಡಲಿಲ್ಲ; ನಿನ್ನ ನ್ಯಾಯಪ್ರಮಾಣದಲ್ಲಿ ನಡಕೊಳ್ಳ ಲಿಲ್ಲ; ಮಾಡಬೇಕೆಂದು ನೀನು ಅವರಿಗೆ ಆಜ್ಞಾಪಿಸಿ ದ್ದನ್ನೆಲ್ಲಾ ಮಾಡಲಿಲ್ಲ. ಆದದರಿಂದ ಕೇಡನ್ನೆಲ್ಲಾ ಅವರಿಗೆ ಸಂಭವಿಸುವಂತೆ ಮಾಡಿದ್ದೀ.
24 ಇಗೋ, ಪರ್ವತಗಳು ಪಟ್ಟಣದ ಬಳಿಗೆ ಅದನ್ನು ಹಿಡಿಯುವ ಹಾಗೆ ಬಂದಿವೆ; ಪಟ್ಟಣವು ಅದಕ್ಕೆ ವಿರೋಧವಾಗಿ ಯುದ್ಧ ಮಾಡುವ ಕಸ್ದೀಯರ ಕೈಯಲ್ಲಿ ಕತ್ತಿ, ಕ್ಷಾಮ, ಜಾಡ್ಯಗಳ ಮೂಲಕವಾಗಿ ಒಪ್ಪಿಸಲ್ಪಟ್ಟಿದೆ; ನೀನು ಹೇಳಿದ್ದು ಉಂಟಾಯಿತು; ಇಗೋ, ನೀನು ಅದನ್ನು ನೋಡುತ್ತೀ.
25 ಆದರೂ ಕರ್ತನಾದ ದೇವರೇ, ನೀನು ನನಗೆ--ಹೊಲವನ್ನು ಹಣಕ್ಕೆ ಕೊಂಡುಕೋ; ಸಾಕ್ಷಿಗಳನ್ನು ಇಡು ಎಂದು ಹೇಳಿದ್ದೀ; ಆದಾಗ್ಯೂ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಟ್ಟಿದೆಯಲ್ಲಾ?
26 ಆಗ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×