1 ಆ ದಿನದಲ್ಲಿ ಕರ್ತನು, ತನ್ನ ಉಗ್ರದೊಂದಿಗೆ ದೊಡ್ಡ ಬಲವಾದ ಕತ್ತಿಯಿಂ ದ(ಖಡ್ಗದಿಂದ) ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನು ವಕ್ರತೆಯ ಸರ್ಪವಾದ ಲೆವಿಯಾ ತಾನವನ್ನೂ ದಂಡಿಸಿ ಸಮುದ್ರದಲ್ಲಿರುವ ಘಟಸರ್ಪ ವನ್ನೂ ಕೊಂದುಹಾಕುವನು.
2 ಆ ದಿನದಲ್ಲಿ ದ್ರಾಕ್ಷಾ ರಸವುಳ್ಳ ತೋಟದ ವಿಷಯವಾಗಿ ಅವಳಿಗೆ ಹಾಡಿರಿ;
3 ಕರ್ತನಾದ ನಾನೇ ಅದನ್ನು ಕಾಯುತ್ತೇನೆ, ಕ್ಷಣ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.
4 ರೌದ್ರವು ನನ್ನಲ್ಲಿ ಇಲ್ಲ; ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ ನಾನು ಅವುಗಳನ್ನು ಹಾದು ಹೋಗಿ ಅವುಗಳನ್ನು ಒಟ್ಟಿಗೆ ಸುಡುವೆನು.
5 ಇಲ್ಲದಿದ್ದರೆ ಅವನು ನನ್ನ ಸಂಗಡ ಸಮಾಧಾನ ಮಾಡಿಕೊಳ್ಳುವ ಹಾಗೆ ನನ್ನ ಬಲವನ್ನು ಹಿಡುಕೊ ಳ್ಳಲಿ, ನನ್ನೊಡನೆ ಸಮಾಧಾನ ಮಾಡಿಕೊಳ್ಳಲಿ.
6 ಮುಂದಿನ ಕಾಲದಲ್ಲಿ ಯಾಕೋಬು ಬೇರೂರಿ ಇಸ್ರಾ ಯೇಲು ಹೂ ಅರಳಿ ಚಿಗುರುವದು ಮತ್ತು ಭೂಲೋ ಕದ ಮೇಲ್ಭಾಗವನ್ನು ಫಲದಿಂದ ತುಂಬಿಸುವನು.
7 ಆತನನ್ನು ಹೊಡೆದವನನ್ನು ಹೊಡೆದ ಪ್ರಕಾರ ಅವನನ್ನು ಹೊಡೆದನೋ? ಇಲ್ಲವೆ ಆತನಿಂದ ಕೊಲ್ಲಲ್ಪಟ್ಟವರು ಕೊಲ್ಲಲ್ಪಟ್ಟ ಪ್ರಕಾರ ಅವನನ್ನು ಕೊಂದನೋ?
8 ಮಿತಿಯಾಗಿ ಕಳುಹಿಸಿ ಬಿಡುವದರ ಮೂಲಕ ಅದರೊಡನೆ ವಿವಾದ ಮಾಡಿದಿ. ಮೂಡಣ ಗಾಳಿಯು ಬೀಸುವ ದಿನದಲ್ಲಿ ತನ್ನ ಬಲವಾದ ವಾಯು ವಿನಿಂದ ಆತನು ಅದನ್ನು ತೊಲಗಿಸಿದನು.
9 ಹೀಗಿರಲು (ಈ ಕಾರಣದಿಂದ) ಯಾಕೋಬು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಒಡೆದುಹೋದ ಸುಣ್ಣದ ಕಲ್ಲುಗಳಂತೆ ಮಾಡುವಾಗ ವಿಗ್ರಹಸ್ತಂಭಗಳೂ ಸೂರ್ಯಸ್ತಂಭ ಗಳೂ ಏಳುವದಿಲ್ಲ ಮತ್ತು ಅದರ ಪಾಪಪರಿಹಾರಕ್ಕೆ ಗುರುತಾದ ಪೂರ್ಣಫಲವು ಇದೇ.
10 ಕೋಟೆಯ ಪಟ್ಟಣವಾಗಿದ್ದಾಗ್ಯೂ ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವವು. ಅಲ್ಲಿನ ಚಿಗುರುಗಳನ್ನು ತಿಂದು ಬಿಡು ವವು.
11 ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿ ಯಲ್ಪಡುವವು, ಹೆಂಗಸರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು; ಅದು ವಿವೇಕವುಳ್ಳ ಜನ ವಲ್ಲ. ಆದದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವದಿಲ್ಲ. ಅವರನ್ನು ರೂಪಿಸಿದಾತನು ಅವರನ್ನು ಕರುಣಿಸುವದಿಲ್ಲ.
12 ಓ ಇಸ್ರಾಯೇಲ್ಯರ ಮಕ್ಕಳೇ, ಕರ್ತನು ನದಿಯ ಕಾಲುವೆ ಮೊದಲುಗೊಂಡು ಐಗುಪ್ತದೇಶದ ನದಿಯ ವರೆಗೆ ಹೊಡೆಯುವನು; ಆಗ ನಿಮ್ಮನ್ನು ಒಬ್ಬೊಬ್ಬರ ನ್ನಾಗಿ ಕೂಡಿಸುವನು.ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು.
13 ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು.