Versions
KNV ಅವನೂ ಅವನ ಉಪಪತ್ನಿಯೂ ಅವನ ಊಳಿಗದ ವನೂ ಹೋಗುವದಕ್ಕೆ ಎದ್ದಾಗ ಹೆಂಗಸಿನ ತಂದೆ ಯಾದ ಅವನ ಮಾವನು ಅವನಿಗೆ--ಇಗೋ, ಹೊತ್ತು ಹೋಗಿ ಸಂಜೆಯಾಯಿತು; ಈ ರಾತ್ರಿ ನೀನು ದಯ ಮಾಡಿ ಇಲ್ಲಿ ಇರು; ಹೊತ್ತು ಮುಣುಗುತ್ತಾ ಬಂತು; ನಿನ್ನ ಹೃದಯವನ್ನು ಸಂತೋಷಪಡಿಸುವ ಹಾಗೆ ಈ ರಾತ್ರಿ ಇಲ್ಲಿದ್ದು ನಿನ್ನ ಗುಡಾರಕ್ಕೆ ಹೋಗುವ ಹಾಗೆ ನಾಳೆ ಬೆಳಿಗ್ಗೆ ಎದ್ದು ನಿಮ್ಮ ಮಾರ್ಗ ಹಿಡಿದು ಹೋಗ ಬಹುದು ಅಂದನು.
ERVKN ಆಮೇಲೆ ಆ ಲೇವಿಯೂ ಅವನ ಉಪಪತ್ನಿಯೂ ಅವನ ಆಳೂ ಹೊರಡಲು ಎದ್ದರು. ಆದರೆ ಆ ಸ್ತ್ರೀಯ ತಂದೆಯು, “ಈಗ ಕತ್ತಲಾಗುತ್ತಾ ಬಂತು, ಹೊತ್ತು ಮುಳುಗುವುದರಲ್ಲಿದೆ. ಈ ರಾತ್ರಿ ಇಲ್ಲಿಯೇ ಸಂತೋಷದಿಂದ ಕಾಲ ಕಳೆಯಿರಿ. ನಾಳೆ ಬೆಳಿಗ್ಗೆ ನೀವು ಬೇಗನೆ ಎದ್ದು ಪ್ರಯಾಣಮಾಡಬಹುದು” ಎಂದನು.
IRVKN ಅನಂತರ ಅವನೂ, ಅವನ ಉಪಪತ್ನಿಯೂ, ಸೇವಕನೂ ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಹೊತ್ತು ಹೋಯಿತು; ಸಾಯಂಕಾಲವಾಗುತ್ತಿದೆ, ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇರು; ನೋಡು, ಈ ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು” ಎಂದು ಬೇಡಿಕೊಂಡನು.