Bible Language

Judges 19:9 (NLV) New Life Verson

Versions

KNV   ಅವನೂ ಅವನ ಉಪಪತ್ನಿಯೂ ಅವನ ಊಳಿಗದ ವನೂ ಹೋಗುವದಕ್ಕೆ ಎದ್ದಾಗ ಹೆಂಗಸಿನ ತಂದೆ ಯಾದ ಅವನ ಮಾವನು ಅವನಿಗೆ--ಇಗೋ, ಹೊತ್ತು ಹೋಗಿ ಸಂಜೆಯಾಯಿತು; ರಾತ್ರಿ ನೀನು ದಯ ಮಾಡಿ ಇಲ್ಲಿ ಇರು; ಹೊತ್ತು ಮುಣುಗುತ್ತಾ ಬಂತು; ನಿನ್ನ ಹೃದಯವನ್ನು ಸಂತೋಷಪಡಿಸುವ ಹಾಗೆ ರಾತ್ರಿ ಇಲ್ಲಿದ್ದು ನಿನ್ನ ಗುಡಾರಕ್ಕೆ ಹೋಗುವ ಹಾಗೆ ನಾಳೆ ಬೆಳಿಗ್ಗೆ ಎದ್ದು ನಿಮ್ಮ ಮಾರ್ಗ ಹಿಡಿದು ಹೋಗ ಬಹುದು ಅಂದನು.
ERVKN   ಆಮೇಲೆ ಲೇವಿಯೂ ಅವನ ಉಪಪತ್ನಿಯೂ ಅವನ ಆಳೂ ಹೊರಡಲು ಎದ್ದರು. ಆದರೆ ಸ್ತ್ರೀಯ ತಂದೆಯು, “ಈಗ ಕತ್ತಲಾಗುತ್ತಾ ಬಂತು, ಹೊತ್ತು ಮುಳುಗುವುದರಲ್ಲಿದೆ. ರಾತ್ರಿ ಇಲ್ಲಿಯೇ ಸಂತೋಷದಿಂದ ಕಾಲ ಕಳೆಯಿರಿ. ನಾಳೆ ಬೆಳಿಗ್ಗೆ ನೀವು ಬೇಗನೆ ಎದ್ದು ಪ್ರಯಾಣಮಾಡಬಹುದು” ಎಂದನು.
IRVKN   ಅನಂತರ ಅವನೂ, ಅವನ ಉಪಪತ್ನಿಯೂ, ಸೇವಕನೂ ಹೋಗುವುದಕ್ಕೆ ಸಿದ್ಧರಾಗಲು ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಹೊತ್ತು ಹೋಯಿತು; ಸಾಯಂಕಾಲವಾಗುತ್ತಿದೆ, ದಯವಿಟ್ಟು ಹೊತ್ತಿನ ರಾತ್ರಿ ಇಲ್ಲೇ ಇರು; ನೋಡು, ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು” ಎಂದು ಬೇಡಿಕೊಂಡನು.