Bible Versions
Bible Books

Leviticus 27:10 (LXXRP) Septugine Greek Old Testament with Grammar and Strong Code

Versions

KNV   ಅದನ್ನು ಒಳ್ಳೇದಕ್ಕೆ ಕೆಟ್ಟದ್ದನ್ನಾಗಲಿ ಕೆಟ್ಟದ್ದಕ್ಕೆ ಒಳ್ಳೇದನ್ನಾಗಲಿ ಬದಲು ಮಾಡಬಾರದು ಮತ್ತು ಮಾರ್ಪಡಿ ಸಲೂಬಾರದು; ಹೇಗಾದರೂ ಒಂದು ಪಶುವಿಗೆ ಮತ್ತೊಂದನ್ನು ಬದಲು ಮಾಡಿದರೆ ಅದು ಅದರ ಬದಲೂ ಪರಿಶುದ್ಧವಾಗಿರಬೇಕು.
ERVKN   ಯಾಕೆಂದರೆ ಅದನ್ನು ಪ್ರತಿಷ್ಠಿಸಿದ ವ್ಯಕ್ತಿ ಅದನ್ನು ಯೆಹೋವನಿಗೆ ಅರ್ಪಿಸುತ್ತೇನೆಂದು ಹರಕೆ ಮಾಡಿರುತ್ತಾನೆ. ಆದ್ದರಿಂದ ಅವನು ಅದರ ಬದಲು ಇನ್ನೊಂದು ಪಶುವನ್ನು ಕೊಡಲು ಪ್ರಯತ್ನಿಸಬಾರದು; ಅದನ್ನು ಬದಲಾಯಿಸಲು ಪ್ರಯತ್ನಿಸಬಾರದು. ಅವನು ಒಳ್ಳೆಯ ಪಶವಿನ ಬದಲಾಗಿ ಕೆಟ್ಟ ಪಶುವನ್ನು ಕೊಡಲು ಪ್ರಯತ್ನಿಸಬಾರದು. ಅವನು ಪಶುಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ, ಎರಡು ಪಶುಗಳೂ ಪವಿತ್ರವಾಗುತ್ತವೆ. ಅವೆರಡೂ ಯೆಹೋವನದಾಗಿರುತ್ತವೆ.
IRVKN   ಅದನ್ನು ಬದಲಾಯಿಸಬಾರದು, ಕೆಟ್ಟದ್ದಕ್ಕೆ ಬದಲಾಗಿ ಒಳ್ಳೆಯದನ್ನೂ ಇಲ್ಲವೇ ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನೂ, ಒಂದಕ್ಕೆ ಬದಲಾಗಿ ಬೇರೊಂದನ್ನೂ ಕೊಡಬಾರದು. ಅವನು ಗೊತ್ತುಮಾಡಿದ ಪಶುವಿಗೆ ಬದಲಾಗಿ ಬೇರೊಂದು ಪಶುವನ್ನು ಪ್ರತ್ಯೇಕಿಸಿಟ್ಟಿರುವ ಪಕ್ಷಕ್ಕೆ, ಮೊದಲನೆಯ ಪಶುವೂ ಹಾಗೂ ಅದಕ್ಕೆ ಬದಲಾಗಿ ಇಟ್ಟ ಪಶುವೂ ಎರಡೂ ಯೆಹೋವನದಾಗಿರಬೇಕು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us