Bible Versions
Bible Books

Exodus 32:12 (LITV) Literal Translation of the Holy Bible

Versions

KNV   ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಕೊಲ್ಲುವದಕ್ಕೂ ಭೂಮಿಯ ಮೇಲಿನಿಂದ ಅವರನ್ನು ದಹಿಸಿಬಿಡುವದಕ್ಕೂ ಆತನು ಅವರನ್ನು ಹೊರಗೆ ಬರಮಾಡಿದ್ದಾನೆ ಎಂದು ಐಗುಪ್ತ್ಯರು ಯಾಕೆ ಹೇಳಬೇಕು? ನಿನ್ನ ಕೋಪದುರಿ ಯನ್ನು ಬಿಟ್ಟು ತಿರುಗಿಕೋ, ನಿನ್ನ ಜನರಿಗೆ ವಿರೋಧ ವಾದ ಕೇಡಿನ ವಿಷಯದಲ್ಲಿ ನಿನ್ನ ಮನಸ್ಸನ್ನು ಬದಲಾಯಿಸು.
ERVKN   ಆದರೆ ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು, ‘ಯೆಹೋವನು ತನ್ನ ಜನರಿಗೆ ಕೇಡನ್ನು ಮಾಡುವುದಕ್ಕಾಗಿಯೇ ಈಜಿಪ್ಟಿನಿಂದ ಕರೆದುಕೊಂಡು ಹೋದನು. ಆತನು ಅವರನ್ನು ಬೆಟ್ಟಗಳಲ್ಲಿ ಕೊಲ್ಲಬೇಕೆಂದಿದ್ದನು; ತನ್ನ ಜನರನ್ನು ಭೂಮಿಯಿಂದ ನಿರ್ಮೂಲ ಮಾಡಬೇಕೆಂದಿದ್ದನು’ ಎಂದು ಹೇಳುವರು. ಆದ್ದರಿಂದ ನಿನ್ನ ಜನರ ಮೇಲೆ ಕೋಪಗೊಳ್ಳಬೇಡ. ನಿನ್ನ ಕೋಪವನ್ನು ಬಿಟ್ಟುಬಿಡು. ನಿನ್ನ ಜನರನ್ನು ನಾಶಮಾಡಬೇಡ.
IRVKN   ಐಗುಪ್ತ್ಯರು ನಿನ್ನ ವಿಷಯದಲ್ಲಿ, ‘ಯೆಹೋವನು ಕೇಡು ಮಾಡಬೇಕೆಂಬ ಅಭಿಪ್ರಾಯದಿಂದಲೇ ಇಸ್ರಾಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದನಲ್ಲಾ. ಅವರನ್ನು ಬೆಟ್ಟಗಳಲ್ಲಿ ಸಾಯಿಸಲಿಕ್ಕೂ ಭೂಮಿಯಿಂದ ನಿರ್ಮೂಲ ಮಾಡುವುದಕ್ಕೂ ಅವರನ್ನು ಕರೆದುಕೊಂಡು ಹೋದನೆಂದು ಹೇಳಿಕೊಳ್ಳುವುದೇತಕ್ಕೆ?’ ನೀನು ರೋಷಾಗ್ನಿಯನ್ನು ಬಿಟ್ಟು ನಿನ್ನ ಪ್ರಜೆಗಳಿಗೆ ಕೆಡುಕನ್ನು ಮಾಡದೆ ಮನಸ್ಸನ್ನು ಬದಲು ಮಾಡಿಕೋ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us