Versions
KNV ರಾಜ್ಯವೂ ದೊರೆತನವೂ ಆಕಾಶದ ಕೆಳಗಿರುವ ಪೂರ್ತಿ ರಾಜ್ಯಗಳ ಮಹತ್ತು ಮಹೋನ್ನತನ ಪರಿಶುದ್ಧವಾದ ಜನರಿಗೆ ಕೊಡಲ್ಪಡುವದು; ಆತನ ರಾಜ್ಯವು ನಿತ್ಯವಾದ ರಾಜ್ಯ ಮತ್ತು ಎಲ್ಲಾ ದೊರೆತನಗಳೂ ಆತನನ್ನು ಸೇವಿಸುವವು ಮತ್ತು ವಿಧೇಯವಾಗಿರುವವು.
ERVKN ಆಗ ದೇವಭಕ್ತರು ರಾಜ್ಯವನ್ನು ಆಳುವರು. ಅವರು ಸಮಸ್ತ ಭೂಮಂಡಲದ ರಾಜ್ಯಗಳ ಮೇಲೆ ಆಳ್ವಿಕೆ ಮಾಡುವರು. ಈ ಸಾಮ್ರಾಜ್ಯವು ಕೊನೆಯವರೆಗೂ ಉಳಿಯುವುದು. ಮಿಕ್ಕ ಎಲ್ಲ ರಾಜ್ಯಗಳ ಜನರು ಅವರನ್ನು ಗೌರವಿಸುವರು ಮತ್ತು ಸೇವಿಸುವರು.’
IRVKN ಆಗ ಅವನ ರಾಜ್ಯ, ಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನಾದ ದೇವರ ಭಕ್ತ ಜನರಿಗೆ ಕೊಡಲ್ಪಡುವುದು; ಆತನ ರಾಜ್ಯವು ಶಾಶ್ವತ ರಾಜ್ಯ; ಸಕಲ ದೇಶಾಧಿಪತಿಗಳು ಆತನಿಗೆ ಅಧೀನರಾಗಿ ಸೇವೆಮಾಡುವರು” ಎಂದು ಹೇಳಿದನು.