Bible Versions
Bible Books

2 Kings 22:14 (LITV) Literal Translation of the Holy Bible

Versions

KNV   ಹಾಗೆಯೇ ಯಾಜಕನಾದ ಹಿಲ್ಕೀಯನೂ ಅಹೀಕಾ ಮನೂ ಅಕ್ಬೋರನೂ ಶಾಫಾನನೂ ಅಸಾಯನೂ ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ವಸ್ತ್ರಗಳ ಕೆಲಸಗಾರರಾದ ಶಲ್ಲೂಮನ ಹೆಂಡತಿಯಾದ ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಮಾತನಾಡಿದರು. ಅವಳು ಯೆರೂಸಲೇಮಿ ನೊಳಗೆ ಎರಡನೇ ಭಾಗದಲ್ಲಿ ವಾಸವಾಗಿದ್ದಳು.
ERVKN   ಆದ್ದರಿಂದ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಎಂಬವರು ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋದರು. ಹುಲ್ದಳು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ಶಲ್ಲೂಮನ ಹೆಂಡತಿ. ಅವನು ಯಾಜಕರ ವಸ್ತ್ರಗಳಿಗೆ ಮೇಲ್ವಿಚಾರಕನಾಗಿದ್ದನು. ಹುಲ್ದಳು ಜೆರುಸಲೇಮಿನ ಎರಡನೆಯ ಭಾಗದಲ್ಲಿ ವಾಸಿಸುತ್ತಿದ್ದಳು. ಅವರು ಹೋಗಿ ಹುಲ್ದಳ ಜೊತೆಯಲ್ಲಿ ಮಾತನಾಡಿದರು.
IRVKN   ಆಗ ಯಾಜಕನಾದ ಹಿಲ್ಕೀಯನು, ಅಹೀಕಾಮ್, ಅಕ್ಬೋರ್, ಶಾಫಾನ್, ಅಸಾಯ, ಎಂಬುವವರು “ಹುಲ್ದ” ಎಂಬ ಪ್ರವಾದಿನಿಯ ಬಳಿಗೆ ಹೋಗಿ ಆಕೆಯ ಹತ್ತಿರ ವಿಚಾರಿಸಿದರು. ಹರ್ಹಸನ ಮೊಮ್ಮಗನೂ, ತಿಕ್ವನ ಮಗನೂ, ಯಾಜಕವಸ್ತ್ರಾಗಾರದ ಯಾಜಕವಸ್ತ್ರಾಗಾರದ ಅಥವಾ ರಾಜವಸ್ತ್ರಾಗಾರದ. ಅಧಿಪತಿಯೂ ಆಗಿದ್ದ ಶಲ್ಲೂಮನು ಈಕೆಯ ಪತಿ. ಈಕೆಯು ಯೆರೂಸಲೇಮಿನ ಎರಡನೆಯ ಕೇರಿಯಲ್ಲಿ ವಾಸಿಸುತ್ತಿದ್ದಳು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us