Versions
KNV ಆಗ ಯಾಜಕನು ಅವಳನ್ನು ಪ್ರಮಾಣಮಾಡಿಸಿ ಹೇಳಬೇಕಾದದ್ದು: ಒಬ್ಬ ಮನುಷ್ಯನು ನಿನ್ನ ಸಂಗಡ ಮಲಗದೆ ನೀನು ಅಪವಿತ್ರಳಾಗಿ ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡದೆ ಇದ್ದರೆ ಶಪಿಸುವ ಈ ಕಹಿಯಾದ ನೀರಿಗೆ ನಿರಪರಾಧಿಯಾಗು.
ERVKN “ಬಳಿಕ ಯಾಜಕನು ಸ್ತ್ರೀಗೆ ಸುಳ್ಳಾಡದೆ ಸತ್ಯವನ್ನೇ ಹೇಳಬೇಕೆಂದು ಪ್ರಮಾಣ ಮಾಡಿಸುವನು. ಯಾಜಕನು ಅವಳಿಗೆ ಹೀಗನ್ನಬೇಕು: ‘ನೀನು ಪರಪುರುಷನ ಸಂಗ ಮಾಡದೆ ಗಂಡನ ಅಧೀನದಲ್ಲಿದ್ದು ಪಾತಿವ್ರತ್ಯವನ್ನು ಬಿಡದೆ ದುಷ್ಕಾರ್ಯವನ್ನು ಮಾಡದೆ ಇರುವವಳಾದರೆ, ಶಾಪವನ್ನು ಉಂಟುಮಾಡುವ ಕಹಿನೀರಿನಿಂದ ನಿನಗೆ ಹಾನಿಯಾಗಬಾರದು.
IRVKN ಯಾಜಕನೂ ಅವಳಿಂದ ಪ್ರಮಾಣಮಾಡಿಸಿ ಹೀಗೆ ಹೇಳಬೇಕು, “ಒಬ್ಬ ಪರಪುರುಷನ ಸಂಗಮಮಾಡದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೇ ನಿರಪರಾಧಿಯಾಗಿದ್ದರೆ ಶಪಿಸಲ್ಪಟ್ಟ ವಿಷಕರವಾದ ಈ ನೀರು ನಿನಗೆ ಯಾವ ಹಾನಿಯನ್ನು ಮಾಡುವುದಿಲ್ಲ.