Versions
KNV ಸೈನ್ಯ ಗಳ ಓ ಕರ್ತನೇ, ಇಸ್ರಾಯೇಲಿನ ದೇವರೇ, ನಿನ್ನ ದಾಸನಿಗೆ--ನಾನು ನಿನಗೆ ಮನೆಯನ್ನು ಕಟ್ಟುವೆನೆಂದು ಪ್ರಕಟಮಾಡಿದ್ದರಿಂದ ನಿನ್ನನ್ನು ಕುರಿತು ಈ ಪ್ರಾರ್ಥನೆ ಯನ್ನು ಪ್ರಾರ್ಥಿಸುವದಕ್ಕೆ ನಿನ್ನ ದಾಸನ ಹೃದಯದಲ್ಲಿ ಉಂಟಾಯಿತು.
ERVKN “ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನೇ, ನೀನು ನನಗೆ ಮುಂದಿನ ಸಂಗತಿಗಳನ್ನು ತೋರಿಸಿರುವೆ. ‘ನಾನು ನಿನ್ನ ಕುಟುಂಬವನ್ನು ಸ್ಥಿರಪಡಿಸುವೆನು’ ಎಂದು ಹೇಳಿರುವೆ. ಆ ಕಾರಣದಿಂದಲೇ ನಿನ್ನ ಸೇವಕನಾದ ನಾನು ನಿನ್ನಲ್ಲಿ ಈ ಪ್ರಾರ್ಥನೆಯನ್ನು ಸಲ್ಲಿಸಲು ತೀರ್ಮಾನಿಸಿದ್ದೇನೆ.
IRVKN ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರ ದೇವರೇ, ನೀನು ನಿನ್ನ ಸೇವಕನಾದ ನನಗೆ ‘ನಾನು ನಿನಗೋಸ್ಕರ ಮನೆ ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದರಿಂದ ಅವನು ಈ ಪ್ರಕಾರ ನಿನ್ನನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡನು.