Versions
KNV ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕ ಚಿಹ್ನೆಯನ್ನು ಇಟ್ಟಿದ್ದೀ. ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿ ಕೊಂಡಿದ್ದೀ; ಏರಿಹೋಗಿ ನಿನ್ನ ಮಂಚವನ್ನು ಅಗಲ ಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ; ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿಮಾಡಿದ್ದೀ.
ERVKN ಆ ಬಳಿಕ ಆ ಹಾಸಿಗೆಯ ಮೇಲೆ ಮಲಗಿ ಆ ದೇವರುಗಳನ್ನು ಪ್ರೀತಿಸಿ ನನಗೆ ವಿರುದ್ಧವಾಗಿ ಪಾಪ ಮಾಡುತ್ತೀರಿ. ನೀವು ಆ ದೇವರುಗಳನ್ನು ಪ್ರೀತಿಸುತ್ತೀರಿ. ಅವುಗಳ ಬೆತ್ತಲೆ ಶರೀರಗಳನ್ನು ನೋಡುವದರಲ್ಲಿ ಸಂತೋಷಿಸುವಿರಿ. ನೀವು ನನ್ನೊಂದಿಗೆ ಇದ್ದಿರಿ. ಆದರೆ ಈಗ ನನ್ನನ್ನು ತೊರೆದು ಅವುಗಳನ್ನು ಸೇರಿಕೊಂಡಿದ್ದೀರಿ. ನನ್ನನ್ನು ಜ್ಞಾಪಕ ಹುಟ್ಟಿಸುವ ವಿಷಯಗಳನ್ನು ನೀವು ಅಡಗಿಸಿಡುತ್ತೀರಿ. ಅವುಗಳನ್ನು ಬಾಗಿಲ ಹಿಂದೆ ಅಡಗಿಸಿಡುತ್ತೀರಿ. ಅನಂತರ ನೀವು ಹೋಗಿ ಆ ಸುಳ್ಳು ದೇವರೊಂದಿಗೆ ಒಪ್ಪಂದ ಮಾಡುತ್ತೀರಿ.