Versions
KNV ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆಗಳ ದಶಮಾಂಶ ವನ್ನೂ ನಿನ್ನ ಪಶು ಕುರಿಗಳ ಚೊಚ್ಚಲಾದವುಗಳನ್ನೂ ನೀನು ಮಾಡುವ ಎಲ್ಲಾ ಪ್ರಮಾಣಗಳನ್ನೂ ಉಚಿತ ವಾದ ಕಾಣಿಕೆಗಳನ್ನೂ ಕೈ ಎತ್ತುವ ಅರ್ಪಣೆಯನ್ನೂ ನಿನ್ನ ಬಾಗಲುಗಳಲ್ಲಿ ತಿನ್ನಬೇಡ.
ERVKN “ನೀವು ವಾಸಿಸುವ ಆ ಸ್ಥಳದಲ್ಲಿ ಕೆಲವನ್ನು ತಿನ್ನಕೂಡದು. ಅವು ಯಾವುವೆಂದರೆ: ದೇವರಿಗೆ ಮೀಸಲಿಟ್ಟ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಯ ಪಾಲು; ದೇವರಿಗೆ ಸಮರ್ಪಿಸಲು ಇಟ್ಟಿರುವ ಚೊಚ್ಚಲ ಪಶುಗಳು ಮತ್ತು ಹಿಂಡಿನ ಮರಿಗಳು, ನೀವು ಹರಕೆ ಹೊತ್ತುಕೊಂಡ ಕಾಣಿಕೆಗಳು ಮತ್ತು ದೇವರಿಗಾಗಿ ಮೀಸಲಿಟ್ಟಿದ್ದ ವಸ್ತುಗಳು.