Versions
KNV ಬೇಲ್(ದೇವತೆಯು)ಬೊಗ್ಗಿದೆ, ನೆಬೋ (ದೇವತೆಯು) ಕುಗ್ಗಿದೆ; ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು, ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು.
ERVKN ಬೇಲ್ ಮತ್ತು ನೆಬೋ ನನ್ನ ಮುಂದೆ ಅಡ್ಡ ಬೀಳುವವು. ಒಡೆಯನು ಇಂತೆನ್ನುತ್ತಾನೆ, “ಆ ಸುಳ್ಳುದೇವರುಗಳು ಕೇವಲ ವಿಗ್ರಹಗಳೇ. ಜನರು ಭಾರವಾದ ವಿಗ್ರಹಗಳನ್ನು ಪಶುಗಳ ಮೇಲೆ ಹೊರಿಸುವರು. ಅವು ಕೇವಲ ಹೊತ್ತುಕೊಂಡು ಹೋಗಬೇಕಾದ ಹೊರೆಗಳಾಗಿವೆ. ಆ ಸುಳ್ಳುದೇವರುಗಳು ಜನರನ್ನು ದಣಿಸುವುದೊಂದನ್ನು ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡುವದಿಲ್ಲ.