Versions
KNV ಅವನೂ ರಾಜರೂ ಅವನ ಜೊತೆ ಡೇರೆಗಳಲ್ಲಿ ಕುಡಿಯುತ್ತಿರಲು ಈ ವಾರ್ತೆಯನ್ನು ಕೇಳುತ್ತಲೇ ಅವನು ತನ್ನ ಸೇವಕರಿಗೆ--ಸಿದ್ಧಮಾಡಿರಿ ಅಂದನು. ಹಾಗೆಯೆ ಪಟ್ಟಣಕ್ಕೆ ವಿರೋಧವಾಗಿ ಯುದ್ಧಕ್ಕೆ ಸಿದ್ಧಮಾಡಿದರು.
ERVKN ರಾಜನಾದ ಬೆನ್ಹದದನು ಇತರ ಅರಸರೊಡನೆ ಅವನ ಗುಡಾರದಲ್ಲಿ ಕುಡಿಯುತ್ತಾ ಮತ್ತೇರಿಸಿಕೊಳ್ಳುತ್ತಿದ್ದನು. ಆ ಸಮಯದಲ್ಲಿ ರಾಜನಾದ ಅಹಾಬನಿಂದ ಬಂದ ಸಂದೇಶವನ್ನು ಸಂದೇಶಕರು ಅವನಿಗೆ ಹೇಳಿದರು. ರಾಜನಾದ ಬೆನ್ಹದದನು ಆ ನಗರಕ್ಕೆ ಮುತ್ತಿಗೆ ಹಾಕಲು ಸಿದ್ಧರಾಗುವಂತೆ ತನ್ನ ಜನರಿಗೆ ಆಜ್ಞಾಪಿಸಿದನು. ಆದುದರಿಂದ ಜನರು ಯುದ್ಧಮಾಡಲು ತಮ್ಮತಮ್ಮ ಸ್ಥಳಗಳಿಗೆ ಹೋದರು.
IRVKN ತನ್ನ ಅರಸುಗಳ ಸಂಗಡ ಡೇರೆಗಳಲ್ಲಿ ಮದ್ಯಪಾನ ಮಾಡುತ್ತಿದ್ದ ಬೆನ್ಹದದನು ಈ ಉತ್ತರವನ್ನು ಕೇಳುತ್ತಲೇ ಪಟ್ಟಣಕ್ಕೆ ಮುತ್ತಿಗೆ ಹಾಕುವಂತೆ ಸೈನಿಕರಿಗೆ ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಿದರು. PEPS