Versions
KNV ಆಗ ಆತನನ್ನು ಕರೆದ ಫರಿಸಾಯನು ಅದನ್ನು ನೋಡಿ ತನ್ನೊಳಗೆ--ಈ ಮನುಷ್ಯನು ಒಬ್ಬ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿದ್ದವಳು ಯಾರು ಎಂದೂ ಎಂಥತರವಾದ ಹೆಂಗಸು ಎಂದೂ ತಿಳಿದುಕೊಳ್ಳುತ್ತಿದ್ದನು; ಯಾಕಂದರೆ ಅವಳು ಒಬ್ಬ ಪಾಪಿ ಎಂದು ತನ್ನೊಳಗೆ ಅಂದು ಕೊಂಡನು.
ERVKN ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.