Versions
KNV ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆ ಯಲ್ಲಿ ಪ್ರವಾದಿಯಾದ ಎಲೀಯನು ಸವಿಾಪಕ್ಕೆ ಬಂದು--ಅಬ್ರಹಾಮನಿಗೂ ಇಸಾಕನಿಗೂ ಇಸ್ರಾ ಯೇಲಿಗೂ ದೇವರಾದ ಕರ್ತನೇ, ಇಸ್ರಾಯೇಲಿನಲ್ಲಿ ನೀನು ದೇವರೆಂದೂ ನಾನು ನಿನ್ನ ಸೇವಕನೆಂದೂ ನಾನು ಈ ಕಾರ್ಯಗಳನ್ನೆಲ್ಲಾ ನಿನ್ನ ಮಾತಿನ ಹಾಗೆಯೇ ಮಾಡಿದೆನೆಂದೂ ಇಂದು ತಿಳಿಯಲ್ಪಡಲಿ.
ERVKN ಅದು ಮಧ್ಯಾಹ್ನದ ಯಜ್ಞಗಳನ್ನು ಅರ್ಪಿಸುವ ಸಮಯ. ಪ್ರವಾದಿಯಾದ ಎಲೀಯನು ಯಜ್ಞವೇದಿಕೆಯ ಹತ್ತಿರಕ್ಕೆ ಹೋಗಿ, “ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರಾದ ಯೆಹೋವನೇ, ನೀನು ಇಸ್ರೇಲಿನಲ್ಲಿರುವ ದೇವರೆಂಬುದನ್ನು ರುಜುವಾತುಪಡಿಸಲು ನಾನೀಗ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ. ನಾನು ನಿನ್ನ ಸೇವಕನೆಂಬುದನ್ನೂ ನೀನು ನಿರೂಪಿಸು. ಈ ಕಾರ್ಯಗಳನ್ನೆಲ್ಲಾ ನಾನು ಮಾಡುವಂತೆ ನೀನು ಆಜ್ಞಾಪಿಸಿದೆ ಎನ್ನುವುದನ್ನೂ ಈ ಜನರಿಗೆ ತೋರಿಸು.