Versions
KNV ತರುವಾಯ ಕರ್ತನು ಮೋಶೆಗೆ--ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಸಾಕ್ಷಿಯ ವಿಧಿಗಳ ಮುಂದೆ ತಿರಿಗಿ ಇಡು. ಹೀಗೆ ಅವರು ಸಾಯದ ಹಾಗೆ ನನ್ನ ಮುಂದೆ ಗುಣು ಗುಟ್ಟುವದನ್ನು ನನ್ನಿಂದ ನೀನು ಸಂಪೂರ್ಣವಾಗಿ ತೆಗೆದು ಬಿಡಬೇಕು ಅಂದನು.
ERVKN ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ಮತ್ತೆ ಒಡಂಬಡಿಕೆಯ ಪೆಟ್ಟಿಗೆಯ ಮುಂದಿಡು. ದಂಗೆಕೋರರಿಗೆ ಅದು ಎಚ್ಚರಿಕೆಯಾಗಿ ಅಲ್ಲೇ ಇರಬೇಕು, ಇವರು ಇನ್ನು ಮುಂದೆ ನನಗೆ ವಿರೋಧವಾಗಿ ಗುಣುಗುಟ್ಟಿ, ಮರಣಕ್ಕೆ ಗುರಿಯಾಗದಂತೆ ನೀನು ಹೀಗೆ ಮಾಡಬೇಕು” ಎಂದು ಆಜ್ಞಾಪಿಸಿದನು.
IRVKN ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ತಿರುಗಿ ಆಜ್ಞಾಶಾಸನಗಳ ಮುಂದೆ ಇಡಬೇಕು. ಅದು ತಿರುಗಿಬೀಳುವವರಿಗೆ ದೃಷ್ಟಾಂತವಾಗಿ ಅಲ್ಲೇ ಇರಬೇಕು. ಇವರು ಇನ್ನು ಮುಂದೆ ನನಗೆ ವಿರುದ್ಧವಾಗಿ ಗುಣುಗುಟ್ಟಿ ನಾಶವಾಗದಂತೆ ನೀನು ಹೀಗೆ ಮಾಡು” ಎಂದು ಆಜ್ಞಾಪಿಸಿದನು.