Bible Versions
Bible Books

Nehemiah 5:13 (NLV) New Life Verson

Versions

KNV   ನಾನು ನನ್ನ ಬಟ್ಟೆಯನ್ನು ಝಾಡಿಸಿ -- ಮಾತಿನ ಪ್ರಕಾರ ಮಾಡದೆ ಇರುವ ಪ್ರತಿ ಮನುಷ್ಯನನ್ನು ದೇವರು ಅವನ ಮನೆಯಿಂದಲೂ ಅವನ ಕಷ್ಟಾರ್ಜಿತದಿಂದಲೂ ಝಾಡಿಸಲಿ. ಅವನು ಇದೇ ಪ್ರಕಾರ ಝಾಡಿಸಲ್ಪಟ್ಟು ಬರಿದಾಗಲಿ ಅಂದೆನು. ಅದಕ್ಕೆ ಸಭೆಯವರೆಲ್ಲರೂ--ಆಮೆನ್‌ ಎಂದು ಹೇಳಿ ಕರ್ತನನ್ನು ಸ್ತುತಿಸಿದರು. ನನ್ನ ದೇವರೇ, ಜನರು ಮಾತಿನ ಪ್ರಕಾರ ಮಾಡಿದರು.
ERVKN   ನಂತರ ನಾನು ನನ್ನ ಉಡುಪಿನ ನೆರಿಗೆಯನ್ನು ಝಾಡಿಸಿ, “ತಾನು ಮಾಡಿದ ಪ್ರತಿಜ್ಞೆಯಂತೆ ನಡೆಯದವನನ್ನು ದೇವರು ಅವನ ಮನೆಯಿಂದ ಝಾಡಿಸಿಬಿಡಲಿ; ಅವನು ತಾನು ಗಳಿಸಿದ್ದೆಲ್ಲವನ್ನು ಕಳೆದುಕೊಳ್ಳಲಿ” ಎಂದು ಹೇಳಿದಾಗ ಜನರೆಲ್ಲರೂ ‘ಆಮೆನ್’ ಅಂದರು; ಯೆಹೋವನನ್ನು ಸ್ತುತಿಸಿದರು. ತಾವು ಮಾಡಿದ ಪ್ರತಿಜ್ಞೆಯಂತೆ ನಡೆದುಕೊಂಡರು.
IRVKN   ಇದಲ್ಲದೆ ನನ್ನ ನಡು ಪಟ್ಟಿಯನ್ನು ಝಾಡಿಸಿ ಅವರಿಗೆ, “ಈಗ ಕೊಟ್ಟ ಮಾತನ್ನು ಕೈಕೊಳ್ಳದ ಪ್ರತಿಯೊಬ್ಬನನ್ನು ದೇವರು ಅವನ ಮನೆಯಿಂದಲೂ, ಸ್ವತ್ತಿನಿಂದಲೂ ಪ್ರಕಾರವೇ ಝಾಡಿಸಿ ಬಿಡಲಿ; ಅವನು ಝಾಡಿಸಲ್ಪಟ್ಟ ನಡುಪಟ್ಟಿಯಂತೆಯೇ ಬರಿದಾಗಲಿ” ಅಂದೆನು. ಕೂಡಲೆ ಸಭೆಯವರೆಲ್ಲಾ, “ಹಾಗೆಯೇ ಆಗಲಿ” ಎಂದು ಹೇಳಿ ಯೆಹೋವನನ್ನು ಕೊಂಡಾಡಿ ಕೊಟ್ಟ ಮಾತನ್ನು ಕೈಗೊಂಡರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us