Versions
KNV ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವಸ ಪಸ್ಕದ ಕುರಿಯನ್ನು ಅವರು ಕೊಯ್ದಾಗ ಆತನ ಶಿಷ್ಯರು ಆತನಿಗೆ--ನೀನು ಪಸ್ಕದ ಊಟಮಾಡು ವಂತೆ ನಾವು ಎಲ್ಲಿಗೆ ಹೋಗಿ ಸಿದ್ಧಮಾಡಬೇಕನ್ನುತ್ತೀ ಎಂದು ಕೇಳಿದರು.
ERVKN ಅಂದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನವಾಗಿತ್ತು. ಯೆಹೂದಿಗಳು ಯಾವಾಗಲೂ ಪಸ್ಕಹಬ್ಬದ ಕುರಿಮರಿಗಳನ್ನು ಯಜ್ಞಮಾಡುವ ಸಮಯ ಇದಾಗಿತ್ತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ನಾವು ಪಸ್ಕಹಬ್ಬದ ಊಟವನ್ನು ನಿನಗಾಗಿ ಎಲ್ಲಿ ಸಿದ್ಧಪಡಿಸೋಣ?” ಎಂದು ಕೇಳಿದರು.
IRVKN {ಯೇಸು ತನ್ನ ಶಿಷ್ಯರ ಸಂಗಡ ಕಡೆ ಭೋಜನವನ್ನು ಮಾಡಿದ್ದು} (ಮತ್ತಾ 26:17-29; ಲೂಕ 22:7-23; ಯೋಹಾ 13:21-29) PS ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಅಂದರೆ ಪಸ್ಕದ ಕುರಿಮರಿಯನ್ನು ಕೊಯ್ಯುವ ದಿನವಾಗಿತ್ತು. ಶಿಷ್ಯರು ಯೇಸುವಿಗೆ, “ನೀನು ಪಸ್ಕದ ಭೋಜನ ಮಾಡಲು ನಾವು ಎಲ್ಲಿ ಸಿದ್ಧಮಾಡಬೇಕೆಂದು ಹೇಳು” ಎಂದು ಕೇಳಿದರು.