Versions
KNV ಆದದರಿಂದ ಈಗ ಕರ್ತನಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಆತನನ್ನು ಸೇವಿಸಿರಿ. ನಿಮ್ಮ ತಂದೆಗಳು ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಸೇವಿ ಸಿದ ದೇವರುಗಳನ್ನು ತೊರೆದುಬಿಟ್ಟು ಕರ್ತನನ್ನೇ ನೀವು ಸೇವಿಸಿರಿ.
ERVKN ತರುವಾಯ ಯೆಹೋಶುವನು ಜನರಿಗೆ, “ಈಗ ನೀವು ಯೆಹೋವನ ಮಾತುಗಳನ್ನು ಕೇಳಿದ್ದೀರಿ. ನೀವು ಆತನಲ್ಲಿ ಭಯಭಕ್ತಿಯಿಂದಿರಬೇಕು. ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆಯಲ್ಲಿಯೂ ಈಜಿಪ್ಟಿನಲ್ಲಿಯೂ ಪೂಜಿಸುತ್ತಿದ್ದ ಸುಳ್ಳುದೇವರುಗಳನ್ನು ಎಸೆದುಬಿಡಿ. ಈಗ ನೀವು ಯೆಹೋವನ ಸೇವೆಯನ್ನು ಮಾತ್ರ ಮಾಡಬೇಕು.
IRVKN ಹೀಗಿರುವುದರಿಂದ, “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರಿ ಆತನನ್ನು ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ಸೇವಿಸಿರಿ. ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಪೂಜಿಸುತ್ತಿದ್ದ ದೇವತೆಗಳನ್ನು ನಿಮ್ಮಲ್ಲಿಂದ ತೆಗೆದುಹಾಕಿರಿ. ಯೆಹೋವನನ್ನೇ ಸೇವಿಸಿರಿ.