Bible Versions
Bible Books

Ezra 1:7 (NLV) New Life Verson

Versions

KNV   ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು ತನ್ನ ದೇವರುಗಳ ಮನೆಯಲ್ಲಿ ಇರಿಸಿದ್ದ ಕರ್ತನ ಆಲಯದ ಸಾಮಾನು ಗಳನ್ನು ಅರಸನಾದ ಕೋರೆಷನು ತರಿಸಿದನು.
ERVKN   ಅಲ್ಲದೆ ಸೈರಸ್ ರಾಜನು ದೇವಾಲಯಕ್ಕೆ ಸಂಬಂಧಿಸಿದ ವಸ್ತುಗಳನ್ನೆಲ್ಲಾ ಹೊರತೆಗೆದನು. ನೆಬೂಕದ್ನೆಚ್ಚರ ಅರಸನು ಜೆರುಸಲೇಮ್ ದೇವಾಲಯದಿಂದ ಸೂರೆಮಾಡಿ ತಂದ ಸಾಮಾಗ್ರಿಗಳನ್ನು ತನ್ನ ವಿಗ್ರಹಗಳನ್ನಿಡುವ ಕೋಣೆಯಲ್ಲಿ ಇಟ್ಟಿದ್ದನು.
IRVKN   ಅಲ್ಲಿಂದ ನೆಬೂಕದ್ನೆಚ್ಚರನು * ನೆಬೂಕದ್ನೆಚ್ಚರನು ನೆಬೂಕದ್ನೆಚ್ಚರನು ಕ್ರಿ.ಪೂ. 605-562 ರಲ್ಲಿ ಆಳಿದ ಬಾಬಿಲೋನಿಯನ್ ಅರಸನಾಗಿದ್ದನು. ಕ್ರಿ.ಪೂ. 597 ರಲ್ಲಿ ಯೆರೂಸಲೇಮಿಗೆ ಮುತ್ತಿಗೆ ಹಾಕಿದವನು, ಕ್ರಿ.ಪೂ. 586 ರಲ್ಲಿ ದೇವಾಲಯವನ್ನು ಹಾಳುಮಾಡಿದವನು, ಕ್ರಿ.ಪೂ. 597, 586 ಮತ್ತು 582 ರಲ್ಲಿ ಅನೇಕ ಜನರನ್ನು ಯೆಹೂದದಿಂದ ಸೆರೆವಾಸಿಗಳಾಗಿ ತೆಗೆದುಕೊಂಡು ಹೋದವನು, ಮತ್ತು ಕ್ರಿ.ಪೂ. 597 ಮತ್ತು 586 ರಲ್ಲಿ ದೇವಾಲಯದ ಬೆಲೆಬಾಳುವ ವಸ್ತುಗಳನ್ನು ಬಾಬಿಲೋನಿಯದ ದೇವರುಗಳನ್ನು ಆರಾಧಿಸಲು ಬಳಸಲಾಗುವುದಕ್ಕೆ ದೋಚಿಕೊಂಡು ಹೋದವನು ಇವನೇ (ಉದಾಹರಣೆಗೆ, ದಾನಿ. 5:1-4 ನೋಡಿರಿ). ಯೆರೂಸಲೇಮಿನಿಂದ ಕೊಳ್ಳೆಯಾಗಿ ತಂದು ತನ್ನ ದೇವರ ಗುಡಿಯಲ್ಲಿ ಇಟ್ಟಿದ್ದ ಯೆಹೋವನ ಆಲಯದ ಸಾಮಾನುಗಳನ್ನು ಪರ್ಷಿಯ ರಾಜನಾದ ಕೋರೆಷನು ಅಲ್ಲಿಂದ ತೆಗೆಸಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us