Versions
KNV ಕರ್ತನು ಹೀಗೆ ಹೇಳುತ್ತಾನೆ--ತೂರಿನ ಮೂರು ಮತ್ತು ನಾಲ್ಕರ ನಿಮಿತ್ತ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದಿಲ್ಲ; ಅವರು ಸಹೋದರರ ಒಡಂಬ ಡಿಕೆಯನ್ನು ಜ್ಞಾಪಕಮಾಡಲಿಲ್ಲ; ಪೂರ್ಣ ಸೆರೆಯನ್ನು ಎದೋಮಿಗೆ ಒಪ್ಪಿಸಿಬಿಟ್ಟರು.
ERVKN ಯೆಹೋವನು ಹೇಳುವದೇನಂದರೆ, “ಅನೇಕ ಅಪರಾಧಗಳನ್ನು ಮಾಡಿದ ತೂರಿನ ಜನರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಜನಾಂಗದ ಜನರನ್ನೆಲ್ಲಾ ಗುಲಾಮರನ್ನಾಗಿ ಎದೋಮಿಗೆ ಕಳುಹಿಸಿದರು. ಅವರು ತಮ್ಮ ಸಹೋದರರೊಂದಿಗೆ (ಇಸ್ರೇಲಿನೊಂದಿಗೆ) ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟರು.
IRVKN {ತೂರಿನ ಪಾಪಕ್ಕೆ ಆದ ದಂಡನೆ} PS ಯೆಹೋವನು ಇಂತೆನ್ನುತ್ತಾನೆ:
“ತೂರ್ ಪಟ್ಟಣವು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅದು ಒಡಹುಟ್ಟಿದವರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೇ,
ಜನರನ್ನು ಗುಂಪುಗುಂಪಾಗಿ ಎದೋಮಿಗೆ ವಶಮಾಡಿಬಿಟ್ಟಿತು.