Versions
KNV ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂದದ ಅರಸನೂ ಎದೋಮಿನ ಅರಸನೂ ಹೊರಟು ಸುತ್ತಾದ ಮಾರ್ಗದಲ್ಲಿ ಏಳು ದಿವಸ ನಡೆದರು. ಆದರೆ ಸೈನ್ಯಕ್ಕೂ ಅವರ ಹಿಂದೆ ಬಂದ ಪಶುಗಳಿಗೂ ನೀರು ಇಲ್ಲದೆ ಹೋಯಿತು.
ERVKN ಆದುದರಿಂದ ಇಸ್ರೇಲಿನ ರಾಜನು ಯೆಹೂದದ ಮತ್ತು ಎದೋಮಿನ ರಾಜರೊಂದಿಗೆ ಹೋದನು. ಅವರು ಏಳು ದಿನಗಳ ಕಾಲ ಪ್ರಯಾಣ ಮಾಡಿದರು. ಅವರ ಸೇನೆಗೆ ಮತ್ತು ಪ್ರಾಣಿಗಳಿಗೆ ಸಾಕಾಗುವಷ್ಟು ನೀರು ಅಲ್ಲಿ ಇರಲಿಲ್ಲ.
IRVKN ಆಗ ಇಸ್ರಾಯೇಲ್, ಯೆಹೂದ್ಯ, ಎದೋಮ್ ರಾಜ್ಯಗಳ ಅರಸರು ಹೊರಟು ಸುತ್ತು ಬಳಸು ದಾರಿಯಿಂದ ಏಳು ದಿನಗಳವರೆಗೆ ಪ್ರಯಾಣ ಮಾಡಿದರು. ಮಾರ್ಗದಲ್ಲಿ ಅವರ ಸೈನಿಕರಿಗೂ, ಅವರು ತಂದ ಪಶುಗಳಿಗೂ ನೀರು ಸಿಕ್ಕದೆ ಹೋಯಿತು.