Versions
KNV ಇಗೋ, ನಾವು ದೇಶ ದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಕಿಟಿಕಿಯಿಂದ ಇಳಿಯಬಿಟ್ಟ ಈ ಕೆಂಪು ನೂಲಿನ ದಾರವನ್ನು ಕಟ್ಟಿ ನಿನ್ನ ತಂದೆತಾಯಿಯನ್ನೂ ಸಹೋದರರನ್ನೂ ನಿನ್ನ ತಂದೆಯ ಮನೆಯವರೆಲ್ಲರನ್ನೂ ನಿನ್ನ ಮನೆಯಲ್ಲಿ ಕೂಡಿಸಿಕೊಳ್ಳಬೇಕು.
ERVKN ನಮ್ಮನ್ನು ಇಳಿಸುವುದಕ್ಕಾಗಿ ನೀನು ಉಪಯೋಗಿಸಿದ ಈ ಕೆಂಪು ಹಗ್ಗವನ್ನು ನಾವು ಈ ದೇಶಕ್ಕೆ ಹಿಂತಿರುಗಿ ಬರುವಾಗ ನೀನು ಕಿಟಕಿಗೆ ಕಟ್ಟಿರಬೇಕು. ನಿನ್ನ ತಂದೆತಾಯಿಗಳು, ನಿನ್ನ ಸಹೋದರ ಸಹೋದರಿಯರು ಮತ್ತು ನಿನ್ನ ಕುಟುಂಬ ವರ್ಗದವರು ನಿನ್ನ ಸಂಗಡ ಈ ಮನೆಯಲ್ಲಿರಬೇಕು.