Versions
KNV ನಾನು ಒಂದಿಷ್ಟು ರೊಟ್ಟಿಯನ್ನು ತರುವೆನು; ನೀವು ನಿಮ್ಮ ಹೃದಯಗಳನ್ನು ಆದರಿಸಿಕೊಳ್ಳಿರಿ; ತರುವಾಯ ನೀವು ಮುಂದೆ ಹೊರಟು ಹೋಗಬಹುದು. ಅದಕ್ಕೋಸ್ಕರವೇ ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ ಎಂದು ಬೇಡಿಕೊಂಡನು. ಅದಕ್ಕೆ ಅವರು--ನೀನು ಹೇಳಿದಂತೆಯೇ ಮಾಡು ಅಂದರು.
ERVKN ನಾನು ನಿಮಗೆ ಊಟವನ್ನು ತಂದುಕೊಡುವೆನು. ನೀವು ಬೇಕಾದಷ್ಟು ಊಟ ಮಾಡಿದ ನಂತರ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು. ಆ ಮೂವರು ಪುರಷರು, “ಸರಿ, ನೀನು ಹೇಳಿದಂತೆಯೇ ಮಾಡು” ಅಂದರು.