Versions
KNV ಯುದ್ಧವು ತನಗೆ ಅತಿ ಕಷ್ಟವಾಯಿತೆಂದು ಮೋವಾಬಿನ ಅರಸನು ಕಂಡಾಗ ಎದೋಮಿನ ಅರಸನ ಮೇಲೆ ಹೋಗಿ ಬೀಳುವ ನಿಮಿತ್ತ ಕತ್ತಿ ಹಿಡಿಯುವ ಏಳುನೂರು ಮಂದಿ ಯನ್ನು ತನ್ನ ಸಂಗಡ ತೆಗೆದುಕೊಂಡನು; ಆದರೆ ಅದು ಅವರಿಂದ ಆಗದೆ ಹೋಯಿತು.
ERVKN ಆ ಯುದ್ಧವು ತನ್ನ ಶಕ್ತಿಯನ್ನು ಮೀರಿ ಹೋಯಿತೆಂದು ಮೋವಾಬಿನ ರಾಜನು ಗ್ರಹಿಸಿಕೊಂಡನು. ಆದ್ದರಿಂದ ಅವನು ಎದೋಮಿನ ರಾಜನನ್ನು ಕೊಂದುಹಾಕಲು ಖಡ್ಗಗಳನ್ನು ಹಿಡಿದ ತನ್ನ ಏಳುನೂರು ಜನರೊಂದಿಗೆ ನುಗ್ಗಿಹೋಗಲು ಪ್ರಯತ್ನಿಸಿದನು. ಆದರೆ ಅವರು ಎದೋಮಿನ ರಾಜನ ಬಳಿಗೆ ನುಗ್ಗಿ ಹೋಗಲಾಗಲಿಲ್ಲ.