Versions
KNV ಸಮುವೇಲನು--ನಿನಗಿರುವ ಮಕ್ಕ ಳೆಲ್ಲಾ ಇಷ್ಟೇ ಮಂದಿಯೋ? ಎಂದು ಇಷಯನನ್ನು ಕೇಳಿದನು. ಅದಕ್ಕವನು--ಇವರೆಲ್ಲರಿಗಿಂತಲೂ ಚಿಕ್ಕವ ನೊಬ್ಬನು ಉಳಿದಿದ್ದಾನೆ; ಇಗೋ, ಅವನು ಕುರಿಗಳನ್ನು ಕಾಯುತ್ತಾ ಇದ್ದಾನೆ ಅಂದನು. ಆಗ ಸಮುವೇಲನು ಇಷಯನಿಗೆ--ಅವನನ್ನು ಕರೆಯ ಕಳುಹಿಸು; ಯಾಕಂದರೆ ಅವನು ಇಲ್ಲಿಗೆ ಬರುವವರೆಗೆ ನಾವು ಕೂತುಕೊಳ್ಳಬಾರದು ಅಂದನು.
ERVKN ನಂತರ ಸಮುವೇಲನು ಇಷಯನನ್ನು, “ನಿನಗೆ ಇರುವ ಮಕ್ಕಳು ಇಷ್ಟೆಯೋ?” ಎಂದು ಕೇಳಿದನು. ಇಷಯನು, “ಇಲ್ಲ, ನನಗೆ ಇನ್ನೊಬ್ಬ ಕಿರಿಯ ಮಗನಿದ್ದಾನೆ. ಅವನು ಕುರಿ ಮೇಯಿಸುವದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರಹೇಳು. ಅವನು ಬರುವತನಕ ನಾವು ಊಟಕ್ಕೆ ಕುಳಿತುಕೊಳ್ಳುವುದು ಬೇಡ” ಎಂದು ಹೇಳಿದನು.