Versions
KNV ಅವನು ಇನ್ನೂ ಮಾತ ನಾಡುತ್ತಿರಲು ಮತ್ತೊಬ್ಬನು ಬಂದು--ಕಸ್ದೀಯರು ಮೂರು ದಂಡುಗಳನ್ನು ಕಟ್ಟಿ, ಒಂಟೆಗಳ ಮೇಲೆ ಬಿದ್ದು, ಅವುಗಳನ್ನು ತಕ್ಕೊಂಡು ಸಂಹರಿಸಿದರು; ಹೌದು, ಸೇವಕರನ್ನು ಕತ್ತಿಯಿಂದ ಹೊಡೆದರು; ನಾನೊಬ್ಬನು ಮಾತ್ರ ನಿನಗೆ ತಿಳಿಸುವುದಕ್ಕೆ ತಪ್ಪಿಸಿ ಕೊಂಡೆನು ಅಂದನು.
ERVKN ಆ ಸೇವಕನು ಮಾತಾಡುತ್ತಿರುವಾಗಲೇ ಮತ್ತೊಬ್ಬ ಸೇವಕನು ಬಂದು ಯೋಬನಿಗೆ, “ಕಸ್ದೀಯರು ಮೂರು ಗುಂಪುಗಳಾಗಿ ಬಂದು, ನಮ್ಮ ಮೇಲೆ ಆಕ್ರಮಣಮಾಡಿ, ಒಂಟೆಗಳನ್ನು ಹೊಡೆದುಕೊಂಡು ಹೋದರು! ಅಲ್ಲದೆ ನಿನ್ನ ಸೇವಕರುಗಳನ್ನು ಕೊಂದುಹಾಕಿದರು. ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು. ಇದನ್ನು ನಿನಗೆ ತಿಳಿಸುವುದಕ್ಕಾಗಿಯೇ ಬಂದೆನು” ಎಂದು ಹೇಳಿದನು.
IRVKN ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು ಒಂಟೆಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಹತ್ಯೆ ಮಾಡಿದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು. PEPS