Versions
KNV ನೀತಿವಂತನು ನನ್ನನ್ನು ಹೊಡೆಯಲಿ; ಅದು ಕರುಣೆಯೇ; ಅವನು ನನ್ನನ್ನು ಗದರಿಸಲಿ; ಅದು ನನ್ನ ತಲೆಗೆ ಶ್ರೇಷ್ಠ ಎಣ್ಣೆಯೇ. ಅದನ್ನು ನನ್ನ ತಲೆ ಬೇಡವೆನ್ನದಿರಲಿ; ಆದರೆ ಇನ್ನೂ ಅವರ ಕೇಡುಗಳಲ್ಲಿ ನನ್ನ ಪ್ರಾರ್ಥನೆ ಇರುವದು.
ERVKN ನೀತಿವಂತನು ನನ್ನನ್ನು ಸರಿಪಡಿಸಿದರೆ ಅದು ನನಗೇ ಒಳ್ಳೆಯದು. ನಿನ್ನ ಭಕ್ತರು ನನ್ನನ್ನು ಗದರಿಸಿದರೆ ಅದು ನನಗೇ ಒಳ್ಳೆಯದು. ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.
IRVKN ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ,
ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ,
ನನ್ನ ತಲೆಯು ಅದನ್ನು ಬೇಡವೆನ್ನದಿರಲಿ.
ಆದರೆ ದುಷ್ಟರ ಕೆಟ್ಟತನಕ್ಕೆ ವಿರುದ್ಧವಾಗಿ ದೇವರನ್ನು ಪ್ರಾರ್ಥಿಸುತ್ತಿರುವೆನು.