Versions
KNV ಆಗ ಫರಿಸಾಯರು ಸಹ ತಿರಿಗಿ ಅವನು ಹೇಗೆ ದೃಷ್ಟಿಹೊಂದಿದ್ದಾನೆಂದು ಅವ ನನ್ನು ಕೇಳಲು ಅವನು ಅವರಿಗೆ--ಆತನು ಕೆಸರನ್ನು ನನ್ನ ಕಣ್ಣುಗಳ ಮೇಲೆ ಇಡಲು ನಾನು ತೊಳೆದುಕೊಂಡ ವನಾಗಿ ನೋಡುತ್ತೇನೆ ಅಂದನು.
ERVKN ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು. ಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
IRVKN ಆದಕಾರಣ ಆ ಫರಿಸಾಯರು ಸಹ ಅವನನ್ನು ವಿಚಾರಿಸಿ ನಿನಗೆ ಹೇಗೆ ದೃಷ್ಟಿ ಬಂದಿತು ಎಂದು ಪುನಃ ಕೇಳಿದರು. ಅವನು ಅವರಿಗೆ, “ಅವನು ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳೆದುಕೊಂಡೆನು, ನನಗೆ ದೃಷ್ಟಿ ಬಂದಿತು” ಎಂದು ಉತ್ತರಕೊಟ್ಟನು.