Versions
KNV ನೀತಿವಂತರಿಂದ ತನ್ನ ಕಣ್ಣುಗಳನ್ನು ತೊಲಗಿಸುವದಿಲ್ಲ. ಅವರು ಅರಸುಗಳ ಸಂಗಡ ಸಿಂಹಾಸನದಲ್ಲಿ ಇದ್ದಾರೆ. ಹೌದು, ಆತನು ಅವರನ್ನು, ಎಂದೆಂದಿಗೂ ಸ್ಥಿರಪಡಿಸುತ್ತಾನೆ. ಅವರು ಉನ್ನತಕ್ಕೇರಿಸಲ್ಪಟ್ಟಿದ್ದಾರೆ.
ERVKN ನೀತಿವಂತರನ್ನು ದೇವರು ಪರಿಪಾಲಿಸುವನು; ಆತನು ಒಳ್ಳೆಯವರನ್ನು ಅಧಿಪತಿಗಳನ್ನಾಗಿ ನೇಮಿಸುವನು; ಅವರಿಗೆ ಸದಾಕಾಲ ಗೌರವ ದೊರೆಯುವಂತೆ ಮಾಡುವನು.
IRVKN ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸದೆ,
ಅರಸರೊಂದಿಗೆ ಸಿಂಹಾಸನದ ಮೇಲೆ ಶಾಶ್ವತವಾಗಿ ಕುಳಿತುಕೊಳ್ಳುವ,
ಉನ್ನತಪದವಿಗೆ ಅವರನ್ನು ತರುವನು.