Versions
KNV ನೀವು ಬದುಕುವ ಹಾಗೆಯೂ ನೀವು ಹೇಳುವ ಪ್ರಕಾರ ಸೈನ್ಯಾಧಿಪತಿಯಾದ ಕರ್ತನು, ನಿಮ್ಮ ಸಂಗಡ ಇರುವ ಹಾಗೆಯೂ ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ದನ್ನು ಹುಡುಕಿರಿ.
ERVKN ದೇವರು ನಿಮ್ಮೊಂದಿಗಿದ್ದಾನೆಂದು ನೀವು ಹೇಳುತ್ತೀರಿ. ಆದುದರಿಂದ ನೀವು ಕೆಟ್ಟಕಾರ್ಯವನ್ನು ಮಾಡದೆ ಒಳ್ಳೆಯ ಕೃತ್ಯಗಳನ್ನು ಮಾಡಬೇಕು. ಆಗ ನೀವು ಬದುಕುವಿರಿ. ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಯಲ್ಲಿ ಖಂಡಿತವಾಗಿಯೂ ಇರುವನು.
IRVKN ಕೆಟ್ಟದ್ದನಲ್ಲ ಒಳ್ಳೆಯದನ್ನು,
ಅನುಸರಿಸಿ ಬಾಳಿರಿ.
ನೀವು ಅಂದುಕೊಂಡಂತೆ,
ಸೇನಾಧೀಶ್ವರ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು.