Versions
KNV ಆಗ ಒಬ್ಬನು ಅರಸನಾದ ಸೊಲೊಮೋನನಿಗೆ--ಇಗೋ, ಅದೋ ನೀಯನು ನಿನಗೆ ಭಯಪಡುತ್ತಾನೆ; ಯಾಕಂದರೆ ಇಗೋ, ಅವನು ಬಲಿಪೀಠದ ಕೊಂಬುಗಳನ್ನು ಹಿಡಿದು --ಅರಸನಾದ ಸೊಲೊಮೋನನು ಕತ್ತಿಯಿಂದ ತನ್ನ ಸೇವಕನನ್ನು ಕೊಲ್ಲುವದಿಲ್ಲವೆಂದು ಈ ಹೊತ್ತು ನನಗೆ ಆಣೆ ಇಡಲಿ ಎಂದು ಹೇಳಿದನು.
ERVKN ಆಗ ಯಾರೋ ಒಬ್ಬರು ಸೊಲೊಮೋನನಿಗೆ, “ಅದೋನೀಯನು ನಿನಗೆ ಬಹಳವಾಗಿ ಹೆದರಿಕೊಂಡು ಪವಿತ್ರಗುಡಾರದ ಯಜ್ಞವೇದಿಕೆಯ ಬಳಿಗೆ ಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಬಿಡದೆ ಹಿಡಿದುಕೊಂಡೇ ಇದ್ದಾನೆ, ‘ನನ್ನನ್ನು ಕೊಲ್ಲುವುದಿಲ್ಲವೆಂದು ಪ್ರಮಾಣ ಮಾಡುವಂತೆ ರಾಜನಾದ ಸೊಲೊಮೋನನಿಗೆ ತಿಳಿಸಿ’ ಎಂಬುದಾಗಿ ಅದೋನೀಯನು ಕೇಳಿಕೊಳ್ಳುತ್ತಿದ್ದಾನೆ” ಎಂದು ಹೇಳಿದನು.
IRVKN ದೂತರು ಬಂದು ಸೊಲೊಮೋನನಿಗೆ, “ಅದೋನೀಯನು ನಿನಗೆ ಹೆದರಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದು, ‘ಅರಸನಾದ ಸೊಲೊಮೋನನು ನನ್ನನ್ನು ಕತ್ತಿಯಿಂದ ಸಂಹರಿಸುವುದಿಲ್ಲವೆಂಬುದಾಗಿ ಈ ಹೊತ್ತು ನನಗೆ ಪ್ರಮಾಣಮಾಡಬೇಕೆಂದು ಬೇಡಿಕೊಳ್ಳುತ್ತೇನೆ’ ” ಎಂಬುದಾಗಿ ತಿಳಿಸಿದನು.