Versions
KNV ಆಗ ದಾವೀದನು ತನ್ನ ಕಣ್ಣುಗಳನ್ನೆತ್ತಿ ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ನಿಂತಿರುವ ಕರ್ತನ ದೂತನನ್ನು ಕಂಡನು; ಅವನ ಕೈಯಲ್ಲಿ ಯೆರೂಸ ಲೇಮಿನ ಮೇಲೆ ಚಾಚಿದ್ದ ಬಿಚ್ಚುಕತ್ತಿ ಇತ್ತು. ಆಗ ದಾವೀದನೂ ಇಸ್ರಾಯೇಲಿನ ಹಿರಿಯರೂ ಗೋಣೀ ತಟ್ಟುಗಳಿಂದ ಮುಚ್ಚಿಕೊಂಡವರಾಗಿ ಮೋರೆ ಕೆಳಗಾಗಿ ಬಿದ್ದರು.
ERVKN ದಾವೀದನು ಮೇಲಕ್ಕೆ ನೋಡಿದಾಗ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನು ಕಂಡನು. ದೇವದೂತನು ತನ್ನ ಖಡ್ಗವನ್ನು ಜೆರುಸಲೇಮಿನ ಮೇಲೆ ಚಾಚಿದ್ದನು. ಆಗ ದಾವೀದನೂ ಅವನೊಂದಿಗಿದ್ದ ಹಿರಿಯರೂ ಬೊಗ್ಗಿ ನೆಲದ ಮೇಲೆ ಮುಖಗಳನ್ನಿಟ್ಟು ನಮಸ್ಕರಿಸಿದರು. ಅವರು ಶೋಕವಸ್ತ್ರಗಳನ್ನು ಧರಿಸಿದ್ದರು.
IRVKN ದಾವೀದನು ಕಣ್ಣೆತ್ತಿ ನೋಡಿ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನೂ, ಚಾಚಿದ ಕೈಯಲ್ಲಿ ಯೆರೂಸಲೇಮಿಗೆ ವಿರುದ್ಧವಾಗಿ ಹಿರಿದ ಕತ್ತಿಯಿರುವುದನ್ನೂ ಕಂಡಾಗ ಅವನೂ, ಹಿರಿಯರೂ ಗೋಣಿತಟ್ಟನ್ನು ಹೊದ್ದುಕೊಂಡು ಬೋರಲು ಬಿದ್ದರು.