Versions
KNV ಇದಲ್ಲದೆ ಅವನು ಇಸ್ರಾಯೇಲಿನ ದೇವರಾದ ಕರ್ತನನ್ನು ನಿಂದಿಸುವ ದಕ್ಕೂ ಆತನಿಗೆ ವಿರೋಧವಾಗಿ ಮಾತನಾಡುವದಕ್ಕೂ ಪತ್ರಗಳನ್ನು ಬರೆದನು. ಏನಂದರೆ--ಇತರ ದೇಶಗಳ ಜನಾಂಗಗಳ ದೇವರುಗಳು ತಮ್ಮ ಜನರನ್ನು ನನ್ನ ಕೈಯೊಳಗಿಂದ ಹೇಗೆ ಬಿಡಿಸಲಿಲ್ಲವೋ ಹಾಗೆಯೇ ಹಿಜ್ಕೀಯನ ದೇವರು ತನ್ನ ಜನರನ್ನು ನನ್ನ ಕೈಯೊಳಗಿಂದ ಬಿಡಿಸಲಾರನು.
ERVKN ಅಶ್ಶೂರದ ಅರಸನು ಇಸ್ರೇಲಿನ ದೇವರಾದ ಯೆಹೋವನನ್ನು ಅವಮಾನ ಮಾಡಿ ಬರೆದ ಪತ್ರ ಹೀಗಿತ್ತು: “ಇತರ ದೇಶಗಳ ದೇವರುಗಳು ತಮ್ಮ ಜನರನ್ನು ನಾಶಮಾಡದಂತೆ ನನ್ನನ್ನು ತಡೆಯಲು ಸಾಧ್ಯವಾಗಲಿಲ್ಲ. ಅದೇ ರೀತಿಯಲ್ಲಿ ಹಿಜ್ಕೀಯನ ದೇವರು ತನ್ನ ಜನರನ್ನು ನಾಶಮಾಡದ ಹಾಗೆ ನನ್ನನ್ನು ತಡೆಯಲು ಸಾಧ್ಯವಿಲ್ಲ.”
IRVKN ಅಷ್ಟು ಮಾತ್ರವಲ್ಲದೆ, ಇಸ್ರಾಯೇಲಿನ ದೇವರಾದ ಯೆಹೋವನನ್ನು ನಿಂದಿಸಿ ದೂಷಿಸುವುದಕ್ಕಾಗಿ, “ಅನ್ಯದೇಶಗಳವರ ದೇವರುಗಳು ತಮ್ಮ ಜನರನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದಂತೆ ಹಿಜ್ಕೀಯನ ದೇವರು ತನ್ನ ಪ್ರಜೆಗಳನ್ನು ನನ್ನ ಕೈಯಿಂದ ಬಿಡಿಸಲಾರನು” ಎಂಬುದಾಗಿ ಪತ್ರದಲ್ಲಿ ಬರೆದು ಕಳುಹಿಸಿದನು.