Versions
KNV ಅವನು ಬುದ್ಧಿವಂತನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಸಂಗಡ ಇದ್ದನು. ಅಧಿಪತಿಯು ಬಾರ್ನಬ ಸೌಲರನ್ನು ಕರೆಯಿಸಿ ದೇವರ ವಾಕ್ಯವನ್ನು ಕೇಳುವದಕ್ಕೆ ಅಪೇಕ್ಷಿಸಿದನು.
ERVKN ಸೆರ್ಗ್ಯಪೌಲನೆಂಬ ರಾಜ್ಯಪಾಲನ ಹತ್ತಿರದಲ್ಲೇ ಅವನು ಯಾವಾಗಲೂ ಇರುತ್ತಿದ್ದನು. ಸೆರ್ಗ್ಯಪೌಲನು ಜ್ಞಾನವಂತನಾಗಿದ್ದನು. ಅವನು ದೇವರ ವಾಕ್ಯವನ್ನು ಕೇಳಲು ಬಾರ್ನಬ ಮತ್ತು ಸೌಲರನ್ನು ಆಮಂತ್ರಿಸಿದನು.
IRVKN ಅವನು ರಾಜ್ಯ ಪಾಲನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಜೊತೆಯಲ್ಲಿದ್ದನು. ಆ ಅಧಿಪತಿಯು ಬುದ್ಧಿವಂತನಾಗಿದ್ದು, ಬಾರ್ನಬ ಮತ್ತು ಸೌಲನನ್ನು ತನ್ನ ಬಳಿಗೆ ಕರೆಸಿ ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು.