Versions
KNV ನಿನಗೆ ಕುರಿಗಳ ಉಣ್ಣೆಯನ್ನು ಕತ್ತರಿಸುವವರು ಇದ್ದಾರೆಂದು ನಾನು ಕೇಳಿದ್ದೇನೆ. ಆದರೆ ನಮ್ಮ ಸಂಗಡವಿದ್ದ ನಿನ್ನ ಕುರಿ ಕಾಯುವವರು ಕರ್ಮೆಲಿ ನಲ್ಲಿ ಇದ್ದ ದಿವಸಗಳೆಲ್ಲಾ ನಾವು ಅವರನ್ನು ತೊಂದರೆ ಪಡಿಸಲಿಲ್ಲ; ಅವರು ಒಂದನ್ನಾದರೂ ಕಳಕೊಳ್ಳಲಿಲ್ಲ;
ERVKN ನೀನು ನಿನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿರುವುದು ನನಗೆ ತಿಳಿಯಿತು. ನಿನ್ನ ಕುರುಬರು ನಮ್ಮೊಡನೆ ಸ್ವಲ್ಪ ಸಮಯವಿದ್ದರು. ನಾವು ಅವರಿಗೆ ಕೆಟ್ಟದ್ದೇನನ್ನೂ ಮಾಡಲಿಲ್ಲ. ಅವರು ಕರ್ಮೆಲಿನಲ್ಲಿ ಸ್ವಲ್ಪ ಸಮಯವಿದ್ದಾಗ ನಾವು ಅವರಿಂದ ಏನನ್ನೂ ತೆಗೆದುಕೊಳ್ಳಲಿಲ್ಲ.