Versions
KNV ಕರ್ತನ ರೌದ್ರದ ದಿನದಲ್ಲಿ ಅವರ ಬೆಳ್ಳಿಯಾದರೂ ಅವರ ಬಂಗಾರ ವಾದರೂ ಅವರನ್ನು ತಪ್ಪಿಸಲಾರವು; ಆತನ ಕೋಪದ ಬೆಂಕಿಯು ದೇಶವನ್ನೆಲ್ಲಾ ನುಂಗುವದು.
ERVKN ಅವರ ಬೆಳ್ಳಿಬಂಗಾರಗಳು ಅವರ ಸಹಾಯಕ್ಕೆ ಬಾರವು. ಆ ಸಮಯದಲ್ಲಿ ಯೆಹೋವನು ಕೋಪಾಗ್ನಿಯಿಂದ ತುಂಬಿದವನಾಗುವನು. ಯೆಹೋವನು ಇಡೀ ಪ್ರಪಂಚವನ್ನೇ ನಾಶಮಾಡುವನು. ಭೂಮಿಯ ಮೇಲಿರುವ ಪ್ರತಿಯೊಬ್ಬನನ್ನು ಯೆಹೋವನು ಸಂಪೂರ್ಣವಾಗಿ ನಾಶಮಾಡುವನು.”
IRVKN ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿ, ಬಂಗಾರಗಳೂ ಕೂಡಾ ಅವರನ್ನು ರಕ್ಷಿಸಲಾರವು;
ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವುದು;
ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು! PE