Versions
KNV ನಾದಾಬನೂ ಅಬೀಹೂ ಕರ್ತನ ಸಮ್ಮುಖದಲ್ಲಿ ಅನ್ಯಬೆಂಕಿಯನ್ನು ಅರ್ಪಿಸಿದಾಗ ಸೀನಾಯಿ ಅರಣ್ಯದಲ್ಲಿ ಕರ್ತನ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ; ಹೀಗೆ ಎಲ್ಲಾಜಾ ರನು ಈತಾಮಾರನು ತಮ್ಮ ತಂದೆಯಾದ ಆರೋನನ ಎದುರಿನಲ್ಲಿ ಯಾಜಕೋದ್ಯೋಗವನ್ನು ಮಾಡಿದರು.
ERVKN ಆದರೆ ನಾದಾಬ್ ಮತ್ತು ಅಬೀಹೂ ಎಂಬಿಬ್ಬರು ಸೀನಾಯಿ ಮರುಭೂಮಿಯಲ್ಲಿ ಯೆಹೋವನಿಗೆ ಧೂಪವನ್ನು ಸಮರ್ಪಿಸುವಾಗ ಯೆಹೋವನು ಅಪ್ಪಣೆ ಕೊಡದೆ ಇದ್ದ ಬೆಂಕಿಯನ್ನು ಉಪಯೋಗಿಸಿದರು. ಆದ್ದರಿಂದ ನಾದಾಬ್ ಮತ್ತು ಅಬೀಹೂ ಅಲ್ಲಿ ಸತ್ತರು. ಅವರಿಗೆ ಗಂಡುಮಕ್ಕಳಿಲ್ಲದ್ದರಿಂದ ಎಲ್ಲಾಜಾರನು ಮತ್ತು ಈತಾಮಾರನು ಅವರ ತಂದೆಯಾದ ಆರೋನನ ಕೈಕೆಳಗೆ ಯೆಹೋವನ ಸೇವೆ ಮಾಡಿದರು.
IRVKN ಆದರೆ ನಾದಾಬ್ ಮತ್ತು ಅಬೀಹೂ ಎಂಬುವವರು ಸೀನಾಯಿ ಮರುಭೂಮಿಯಲ್ಲಿ ಯೆಹೋವನು ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯಿಂದ ಧೂಪವನ್ನು ಸಮರ್ಪಿಸಿದ್ದರಿಂದ ಆತನ ಸನ್ನಿಧಿಯಲ್ಲೇ ಸತ್ತು ಹೋದರು. ಅವರಿಗೆ ಮಕ್ಕಳಿರಲಿಲ್ಲ. ಆದುದರಿಂದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬಿಬ್ಬರು ತಮ್ಮ ತಂದೆಯಾದ ಆರೋನನ ಕೈಕೆಳಗೆ ಯಾಜಕಧರ್ಮವನ್ನು ನಡೆಸಿದರು. PS