Versions
KNV ಆದ ಕಾರಣ ನನ್ನ ಒಡೆಯನ ಯೋಚನೆಯ ಪ್ರಕಾರವಾ ಗಿಯೂ ನಮ್ಮ ದೇವರ ಆಜ್ಞೆಗೆ ನಡುಗುವವರ ಯೋಚ ನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ ಅವರಿಂದ ಹುಟ್ಟಿದವರನ್ನೂ ಹೊರಡಿಸಿ ಬಿಡಲು ನಮ್ಮ ದೇವರ ಸಂಗಡ ಒಡಂಬಡಿಕೆ ಮಾಡೋಣ; ಇದು ನ್ಯಾಯಪ್ರಮಾಣದ ಪ್ರಕಾರ ಮಾಡಲ್ಪಡಲಿ.
ERVKN ಈಗ ನಾವು ದೇವರ ಮುಂದೆ ಅನ್ಯರಾದ ಹೆಂಡತಿಯರನ್ನೂ ಅವರ ಮಕ್ಕಳನ್ನೂ ತೊರೆದುಬಿಡುತ್ತೇವೆಂದು ಒಡಂಬಡಿಕೆ ಮಾಡೋಣ. ಹೀಗೆ ಮಾಡುವುದರಿಂದ ಎಜ್ರನ ಮತ್ತು ದೇವರ ಕಟ್ಟಳೆಗಳನ್ನು ಗೌರವಿಸುವವರ ಸಲಹೆಯನ್ನು ನಾವು ಅನುಸರಿಸುವವರಾಗಿರುತ್ತೇವೆ; ನಾವು ದೇವರ ಕಟ್ಟಳೆಗೆ ವಿಧೇಯರಾಗುತ್ತೇವೆ.
IRVKN ಸ್ವಾಮಿಯಾದ ನೀನೂ ನಮ್ಮ ದೇವರ ಆಜ್ಞೆಯನ್ನು ಗೌರವಿಸುವವನೂ. ನೀನು ಹೇಳಿಕೊಟ್ಟ ಬುದ್ಧಿವಾದಕ್ಕೆ ಅನುಸಾರವಾಗಿ ಎಲ್ಲಾ ಹೆಂಡತಿಯರನ್ನೂ, ಅವರ ಮಕ್ಕಳನ್ನೂ ಕಳುಹಿಸಿಬಿಡುವುದಾಗಿ ಈಗಲೇ ನಮ್ಮ ದೇವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯೋಣ.